35 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟ ಪ್ರಭಾಸ್​; ಯಾರಿಗೆ ಸಿಕ್ಕಿದೆ ಈ ಹಣ?

ಪ್ರತಿ ಸಿನಿಮಾಗೆ ಪ್ರಭಾಸ್​ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ಅವರು ಕೊಡುಗೈ ದಾನಿ ಕೂಡ ಹೌದು. ಈಗ ಅವರು 35 ಲಕ್ಷ ರೂಪಾಯಿ ದೇಣಿಗೆ ನೀಡಿರುವುದು ಸುದ್ದಿ ಆಗಿದೆ. ಈ ಮೊದಲು ಸಹ ಹಲವು ಸಂದರ್ಭಗಳಲ್ಲಿ ಪ್ರಭಾಸ್​ ಅವರು ದಾನ ಮಾಡಿದ್ದರು. ಈಗ ಪ್ರಭಾಸ್​ ನೀಡಿದ ಈ ಹಣದಿಂದ ಒಂದಷ್ಟು ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ.

35 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟ ಪ್ರಭಾಸ್​; ಯಾರಿಗೆ ಸಿಕ್ಕಿದೆ ಈ ಹಣ?
ಪ್ರಭಾಸ್​

Updated on: Apr 23, 2024 | 3:04 PM

ತೆಲುಗು ಚಿತ್ರರಂಗದ ಸ್ಟಾರ್​ ನಟ, ಪ್ಯಾನ್​ ಇಂಡಿಯಾ ಹೀರೋ ಪ್ರಭಾಸ್​ (Prabhas) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಈಗ ಅವರು ಒಂದು ಸ್ಪೆಷಲ್​ ಕಾರಣದಿಂದ ಸುದ್ದಿ ಆಗಿದ್ದಾರೆ. ಪ್ರಭಾಸ್​ ಅವರು 35 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಅಂದಹಾಗೆ, ಅವರು ಇಷ್ಟು ದೊಡ್ಡ ಮಟ್ಟದ ಹಣವನ್ನು ನೀಡಿರುವುದು ಸಿನಿಮಾ ನಿರ್ದೇಶಕರಿಗಾಗಿ. ಹೌದು, ತೆಲುಗು ಸಿನಿಮಾ ನಿರ್ದೇಶಕರ ಸಂಘಕ್ಕೆ (Telugu Film Directors Association) ಪ್ರಭಾಸ್​ ಅವರು ಬರೋಬ್ಬರಿ 35 ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಇದರಿಂದ ನಿರ್ದೇಶಕರ ಸಂಘಕ್ಕೆ ದೊಡ್ಡ ಬಲ ಬಂದಂತಾಗಿದೆ. ಪ್ರಭಾಸ್​ ಅವರು ಸದ್ಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಭಾಸ್ ಅವರು ಕೊಡುಗೈ ದಾನಿ. ಈ ಮೊದಲು ಕೂಡ ಅನೇಕ ಸಂದರ್ಭಗಳಲ್ಲಿ ಅವರು ದಾನ ಮಾಡಿದ್ದರು. ಚಿತ್ರರಂಗದ ಬಗ್ಗೆ ಅವರಿಗೆ ಸಾಕಷ್ಟು ಕಾಳಜಿ ಇದೆ. ನಿರ್ದೇಶಕರ ಬಗ್ಗೆಯೂ ಗೌರವ ಇದೆ. ಈ ಎಲ್ಲ ಕಾರಣದಿಂದ ಅವರು ‘ತೆಲುಗು ಸಿನಿಮಾ ನಿರ್ದೇಶಕರ ಸಂಘ’ಕ್ಕೆ 35 ಲಕ್ಷ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಕೊಟ್ಟಿದ್ದಾರೆ. ಇದನ್ನು ತಿಳಿಸಲು ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಇಷ್ಟು ದೊಡ್ಡ ಮೊತ್ತವನ್ನು ಪ್ರಭಾಸ್​ ಅವರು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿಯನ್ನು ನಿರ್ದೇಶಕ ಮಾರುತಿ ಖಚಿತಪಡಿಸಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜ ನಿರ್ದೇಶಕ, ನಿರ್ಮಾಪಕರಾದ ದಾಸರಿ ನಾರಾಯಣ ರಾವ್​ ಅವರ ಜನ್ಮದಿನದ ಪ್ರಯುಕ್ತ ಮೇ 4ರಂದು ‘ನಿರ್ದೇಶಕರ ದಿನ’ ಆಚರಿಸಲಾಗುತ್ತದೆ. ಈ ಬಾರಿ ಪ್ರಭಾಸ್​ ಅವರಿಂದ ನಿರ್ದೇಶಕರ ಸಂಘಕ್ಕೆ ಭರ್ಜರಿ ದೇಣಿಗೆ ಸಿಕ್ಕಿರುವುದರಿಂದ ತುಂಬ ಗ್ರ್ಯಾಂಡ್​ ಆಗಿ ‘ನಿರ್ದೇಶಕರ ದಿನ’ವನ್ನು ಸೆಲೆಬ್ರೇಟ್​ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಭಾಸ್​ ಫ್ಯಾನ್​​ಗೆ ಅಲ್ಲು ಅರ್ಜುನ್​ ಅಭಿಮಾನಿಗಳಿಂದ ಥಳಿತ

ಹೈದರಾಬಾದ್​​ನ ಎಲ್​ಬಿ ಸ್ಟೇಡಿಯಂನಲ್ಲಿ ಮೇ 4ರಂದು ‘ನಿರ್ದೇಶಕರ ದಿನ’ ಆಚರಣೆ ಮಾಡಲಾಗುವುದು. ಆ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಆಗಮಿಸಲಿದ್ದಾರೆ. ಪ್ರಭಾಸ್​ ಕೂಡ ಹಾಜರಿ ಹಾಕುವ ನಿರೀಕ್ಷೆ ಇದೆ. ಪ್ರಭಾಸ್​ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ದಿ ರಾಜಾ ಸಾಬ್​’, ‘ಸ್ಪಿರಿಟ್​’, ‘ಸಲಾರ್​ 2’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us