ಈ ಫೋಟೋದಲ್ಲಿರುವ ಇರುವ ಇಬ್ಬರೂ ಈಗ ಸ್ಟಾರ್ ಹೀರೋಯಿನ್ಗಳು; ಯಾರೆಂದು ಗುರುತಿಸುತ್ತೀರಾ?
ಓರ್ವ ಹೀರೋಯಿನ್ ನ್ಯಾಷನಲ್ ಅವಾರ್ಡ್ ಪಡೆದು ಮಿಂಚಿದರೆ, ಮತ್ತೋರ್ವ ಹೀರೋಯಿನ್ ಇತ್ತೀಚೆಗೆ ತೆರೆಗೆ ಬಂದ ‘ಹೃದಯಂ’ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು.

ಮೇಲಿನ ಫೋಟೋದಲ್ಲಿರುವ ಇಬ್ಬರೂ ಈಗ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಓರ್ವ ಹೀರೋಯಿನ್ ನ್ಯಾಷನಲ್ ಅವಾರ್ಡ್ ಪಡೆದು ಮಿಂಚಿದರೆ, ಮತ್ತೋರ್ವ ಹೀರೋಯಿನ್ ಇತ್ತೀಚೆಗೆ ತೆರೆಗೆ ಬಂದ ‘ಹೃದಯಂ’ ಸಿನಿಮಾ (Hridayam Movie) ಮೂಲಕ ಜನಪ್ರಿಯತೆ ಪಡೆದರು. ಇಬ್ಬರ ಮಧ್ಯೆ ಬಾಲ್ಯದಿಂದಲೂ ಗೆಳೆತನ ಇದೆ. ಈಗಲೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಾರೆ. ಇವರು ಬೇರಾರೂ ಅಲ್ಲ ನಟಿ ಕಲ್ಯಾಣಿ ಪ್ರಿಯದರ್ಶನ್ ಮತ್ತು ಕೀರ್ತಿ ಸುರೇಶ್ (Keerthy Suresh). ಇಬ್ಬರೂ ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರಿಬ್ಬರ ಬಾಲ್ಯದ ಫೋಟೋ ಇದೀಗ ವೈರಲ್ ಆಗುತ್ತಿದೆ.
ಬಾಲನಟಿಯಾಗಿ ಕೀರ್ತಿ ಸುರೇಶ್ ಚಿತ್ರರಂಗಕ್ಕೆ ಕಾಲಿಟ್ಟರು. 2013ರಲ್ಲಿ ರಿಲೀಸ್ ಆದ ‘ಗೀತಾಂಜಲಿ’ ಚಿತ್ರದ ಮೂಲಕ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ‘ನೇನು ಶೈಲಜಾ’ ಚಿತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಈಗ ಅವರು ಟಾಪ್ ಹೀರೋಯಿನ್ ಆಗಿ ಮುಂದುವರಿದಿದ್ದಾರೆ. ‘ಮಹಾನಟಿ’ ಚಿತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಒಲಿದಿದೆ. ಈ ಸಿನಿಮಾ ವಿಮರ್ಶೆಯಲ್ಲೂ ಗೆದ್ದಿದೆ. ಇತ್ತೀಚೆಗೆ ರಿಲೀಸ್ ಆದ ‘ಮಾಮನ್ನನ್’ ಸಿನಿಮಾ ಮೂಲಕ ಕೀರ್ತಿ ಸುರೇಶ್ ಮೆಚ್ಚುಗೆ ಪಡೆದರು. ಉದಯನಿಧಿ ಸ್ಟಾಲಿನ್ ಅಭಿನಯದ ಈ ಸಿನಿಮಾ ಯಶಸ್ಸು ಕಂಡಿತು. ಈಗ ತೆಲುಗಿನಲ್ಲಿ ‘ಭೋಲಾ ಶಂಕರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಲವು ತಮಿಳು ಸಿನಿಮಾಗಳಲ್ಲೂ ಅವರು ಬ್ಯುಸಿ ಇದ್ದಾರೆ.
View this post on Instagram
ಇದನ್ನೂ ಓದಿ: ‘ಹೃದಯಂ’ ಮೂಲಕ ಎಲ್ಲರ ಮನಗೆದ್ದ ಕಲ್ಯಾಣಿ ಪ್ರಿಯದರ್ಶನ್; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು
ಇನ್ನು ಕಲ್ಯಾಣಿ ಪ್ರಿಯದರ್ಶನ್ ‘ಹೆಲೋ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ 2017ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ಹೀಗಾಗಿ ಕಲ್ಯಾಣಿಗೆ ನಿರೀಕ್ಷಿತ ಮನ್ನಣೆ ಸಿಗಲಿಲ್ಲ. ಆ ಬಳಿಕ ಅವರು ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. 2022ರಲ್ಲಿ ರಿಲೀಸ್ ಆದ ‘ಹೃದಯಂ’ ಚಿತ್ರದ ಮೂಲಕ ಅವರು ಸಖತ್ ಪೇಮಸ್ ಆದರು. ಈಗ ಅವರು ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಮತ್ತೊಂದು ಸೂಪರ್ ಹಿಟ್ ಚಿತ್ರಕ್ಕಾಗಿ ಅವರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:40 am, Wed, 5 July 23




