ಕಮಲ್ ಹಾಸನ್ ಕನ್ನಡ ವಿವಾದ: ‘ಥಗ್ ಲೈಫ್’ ಬಿಡುಗಡೆಗೆ ಹೈಕೋರ್ಟ್​ ಮೊರೆ ಹೋದ ನಟ

‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಇದೆ ಎನ್ನುವಾಗ ನಟ ಕಮಲ್ ಹಾಸನ್ ಅವರು ವಿವಾದ ಮಾಡಿಕೊಂಡರು. ಕರ್ನಾಟಕದಲ್ಲಿ ಈ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಮಲ್ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಕಮಲ್ ಹಾಸನ್ ಕನ್ನಡ ವಿವಾದ: ‘ಥಗ್ ಲೈಫ್’ ಬಿಡುಗಡೆಗೆ ಹೈಕೋರ್ಟ್​ ಮೊರೆ ಹೋದ ನಟ
Kamal Haasan

Updated on: Jun 02, 2025 | 10:49 PM

‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂದು ಹೇಳುವ ಮೂಲಕ ನಟ ಕಮಲ್ ಹಾಸನ್ (Kamal Haasan) ಅವರು ಅನಗತ್ಯ ವಿವಾದ ಹುಟ್ಟುಹಾಕಿದರು. ಈ ಹೇಳಿಕೆಯಿಂದ ಕಮಲ್ ಹಾಸನ್ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ಕನ್ನಡಪರ ಸಂಘಟನೆಗಳು ಹಾಗೂ ಜನಸಾಮಾನ್ಯರು ಕಮಲ್ ಹಾಸನ್ ಮೇಲೆ ಗರಂ ಆಗಿದ್ದಾರೆ. ಕಮಲ್ ನಟಿಸಿದ ‘ಥಗ್ ಲೈಫ್’ (Thug Life) ಸಿನಿಮಾ ಬಿಡುಗಡೆ ಮಾಡಬಾರದು ಎಂದು ಪಟ್ಟುಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿನಿಮಾದ ಬಿಡುಗಡೆಗೆ ಅವಕಾಶ ಕೊಡಬೇಕು ಎಂದು ಅವರು ಕರ್ನಾಟಕ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ.

‘ಥಗ್ ಲೈಫ್’ ಸಿನಿಮಾವನ್ನು ಕಮಲ್ ಹಾಸನ್ ಅವರೇ ನಿರ್ಮಾಣ ಮಾಡಿದ್ದಾರೆ. ದೇಶಾದ್ಯಂತ ಜೂನ್ 5ರಂದು ಈ ಸಿನಿಮಾ ಬಿಡುಗಡೆ ಆಗಬೇಕಿದೆ. ದೇಶದ ವಿವಿಧ ನಗರಗಳಿಗೆ ಹೋಗಿ ಕಮಲ್ ಹಾಸನ್ ಅವರು ಪ್ರಚಾರ ಮಾಡಿದ್ದಾರೆ. ಆದರೆ ಕನ್ನಡ ಭಾಷೆಯ ಬಗ್ಗೆ ಅವರು ಇಲ್ಲಸಲ್ಲದ ಮಾತುಗಳನ್ನು ಆಡಿದ್ದರಿಂದ ಕರ್ನಾಟಕದಲ್ಲಿ ಈ ಸಿನಿಮಾದ ರಿಲೀಸ್​ಗೆ ಅಡ್ಡಿ ಉಂಟಾಗಿದೆ.

ಕಮಲ್ ಹಾಸನ್ ಅವರ ಹೇಳಿಕೆಯ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದೆ. ಕನ್ನಡ ಪರ ಸಂಘಟನೆಗಳು ಈ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸುತ್ತಿವೆ. ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳದಿದ್ದರೆ ಯಾವುದೇ ಕಾರಣಕ್ಕೂ ಥಗ್ ಲೈಫ್ ಸಿನಿಮಾ ಬಿಡುಗಡೆ ಸಾಧ್ಯವಿಲ್ಲ ಎಂದು ಸಾರಾ ಗೋವಿಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿಕೆ, ನಟ ಜಗ್ಗೇಶ್​ರಿಂದ ಪಾಠ
ರಾಜ್ಯಸಭೆಗೆ ಕಮಲ್ ಹಾಸನ್; ಮೇಲ್ಮನೆ ಪ್ರವೇಶಕ್ಕೆ ನಾಮ ನಿರ್ದೇಶನ
ಕಮಲ್ ಹಾಸನ್ ವಿವಾದ: ಕನ್ನಡಿಗರ ಕೆರಳಿಸಿದ ನಟನ​ ಚಿತ್ರಕ್ಕೆ ಸಂಕಷ್ಟ
ಸೋನು ನಿಗಮ್ ಬೆನ್ನಲ್ಲೇ ಕಮಲ್ ಹಾಸನ್ ವಿವಾದ: ಕೆರಳಿ ಕೆಂಡವಾದ ಕನ್ನಡಿಗರು

ಕೋರ್ಟ್ ಮೊರೆ ಹೋಗಿರುವ ಕಮಲ್ ಹಾಸನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ವಿರುದ್ಧ ಆರೋಪ ಮಾಡಿದ್ದಾರೆ. ಈ ಕೇಸ್​ನಲ್ಲಿ ಸಾರಾ ಗೋವಿಂದು ಅವರನ್ನು ಪಾರ್ಟಿ ಮಾಡಲಾಗಿದೆ. ಈ ಬಗ್ಗೆ ಸಾರಾ ಗೋವಿಂದು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಕೇಸ್ ಎದುರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳೋದು ನಮ್ಮ ಧರ್ಮ: ಸಾ.ರಾ. ಗೋವಿಂದು

ಇಡೀ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿದ್ದರೂ ಕೂಡ ಕಮಲ್ ಹಾಸನ್ ಅವರು ಈವರೆಗೆ ಕನ್ನಡಿಗರ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳುವ ಬದಲು ಕಾನೂನಿನ ಮೂಲಕ ಉತ್ತರ ನೀಡಲು ಅವರು ಮುಂದಾಗಿದ್ದಾರೆ. ಹಾಗಾಗಿ ಸಿನಿಮಾದ ಬಿಡುಗಡೆಗೆ ಅಡ್ಡಿಪಡಿಸದಂತೆ ಆದೇಶ ನೀಡಬೇಕು ಎಂದು ಅವರು ಹೈಕೋರ್ಟ್​​ಗೆ ಮನವಿ ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.