‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?

| Updated By: shivaprasad.hs

Updated on: May 27, 2022 | 6:45 AM

Kamal Haasan | Rajinikanth | Vikram Movie: ರಜಿನಿಕಾಂತ್​ ರಾಜಕೀಯದ ಹೊರತಾಗಿ ತಮ್ಮ ಆತ್ಮೀಯ ಸ್ನೇಹಿತ ಎಂದು ಹೇಳಿದ್ದಾರೆ ಕಮಲ್ ಹಾಸನ್. ಜತೆಗೆ ಡಿಎಂಕೆ ಪಕ್ಷದ ಉದಯನಿಧಿ ಸ್ಟಾಲಿನ್ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡಿದ್ದಾರೆ. ವೃತ್ತಿ ಜೀವನ ಹಾಗೂ ರಾಜಕೀಯ ಬೇರೆ ಬೇರೆ ಎನ್ನುವುದು ಕಮಲ್ ಅಭಿಪ್ರಾಯ.

ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ ಎಂದ ಕಮಲ್​ ಹಾಸನ್​; ಏನದು?
ರಜಿನಿಕಾಂತ್, ಕಮಲ್ ಹಾಸನ್
Follow us on

ತಮಿಳುನಾಡಿನಲ್ಲಿ ಬಹುತೇಕ ಸಿನಿಮಾ ಸ್ಟಾರ್​ಗಳು ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. ಮತ್ತೂ ಹಲವರು ತಮ್ಮದೇ ಪಕ್ಷ ಅಥವಾ ಇತರ ಪಕ್ಷಗಳ ಮೂಲಕ ಗುರುತಿಸಿಕೊಂಡು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸೂಪರ್​ಸ್ಟಾರ್ ರಜಿನಿಕಾಂತ್ (Rajinikanth) ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಇದೀಗ ಅವರು ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದರೆ ಅಲ್ಲಿನ ಮತ್ತೋರ್ವ ಖ್ಯಾತ ನಟ ಕಮಲ್ ಹಾಸನ್ (Kamal Haasan) ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ತಮಿಳುನಾಡಿನ ಈ ಈರ್ವರೂ ಸ್ಟಾರ್ ನಟರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಕಮಲ್​ ಹಾಸನ್​ ರಜಿನಿಕಾಂತ್​ ಅವರ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ರಾಜಕಾರಣ ಹಾಗೂ ಸ್ನೇಹ ಎರಡೂ ಬೇರೆ ಬೇರೆ ಎಂದು ಅವರು ಹೇಳಿಕೊಂಡಿದ್ದಾರೆ. ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಅಧ್ಯಕ್ಷರಾಗಿರುವ ಕಮಲ್ ಹಾಸನ್ ರಾಜಕಾರಣದ ಹೊರತಾಗಿ ರಜನಿಕಾಂತ್  ತಮ್ಮ ಆತ್ಮೀಯ ಸ್ನೇಹಿತ ಎಂದು ನುಡಿದಿದ್ದಾರೆ.

ಒಮ್ಮೊಮ್ಮೆ ವೃತ್ತಿಪರ ಪೈಪೋಟಿ ಇದ್ದರೂ ಕೂಡ ಈರ್ವರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎಂದಿರುವ ಕಮಲ್​, 25 ವರ್ಷದವರಾಗಿದ್ದಾಗಲೇ ಸಂಬಂಧ ಎಲ್ಲಿಗೆ ತಲುಪಬೇಕು ಎಂದು ನಿರ್ಧರಿಸಿದ್ದೆವು ಎಂದು ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಮತ್ತು ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಕೂಡ ತಮ್ಮ ಸ್ನೇಹಿತ ಎಂದು ಹೇಳಿಕೊಂಡಿದ್ದಾರೆ ಕಮಲ್​.

ಕಮಲ್ ನಟನೆಯ ‘ವಿಕ್ರಮ್’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಕಮಲ್ ಮಾತನಾಡಿದ್ದಾರೆ. ‘ವಿಕ್ರಮ್’ ಟ್ರೇಲರ್ ಬಿಡುಗಡೆಗೆ ರಜಿನಿಕಾಂತ್ ಏಕೆ ಬಂದಿಲ್ಲ ಎಂದು ವಿವರಿಸಿದ್ದ ಕಮಲ್, ಅವರಿಗೆ ಬರಲು ಸಮಯಾವಕಾಶವಾಗಲಿಲ್ಲ. ದೂರವಾಣಿ ಕರೆ ಮಾಡಿ ಶುಭಕೋರಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
ಆರ್​ಸಿಬಿ ಮ್ಯಾಚ್ ನಡೆಯುವಾಗ ಅನುಷ್ಕಾ ಶರ್ಮಾ ಏನು ಮಾಡುತ್ತಿದ್ದರು? ಇಲ್ಲಿವೆ ಫೋಟೋಗಳು
Bhavana Menon: ಸಾಂಪ್ರದಾಯಿಕ ಲುಕ್​ನಲ್ಲಿ ಅಭಿಮಾನಿಗಳ ಮನಗೆದ್ದ ಭಾವನಾ; ಇಲ್ಲಿವೆ ಫೋಟೋಗಳು
Vikrant Rona: ‘ಊರಲ್ಲೆಲ್ಲಾ ಒಬ್ಬನ ಹೆಸರೇ ಚಾಲ್ತಿಯಲ್ಲಿರೋದು..’; ಭರ್ಜರಿಯಾಗಿ ‘ವಿಕ್ರಾಂತ್ ರೋಣ’ ಡೈಲಾಗ್ ಹೊಡೆದ ಜಾಕ್ವೆಲಿನ್​
Karan Johar: ರಶ್ಮಿಕಾ, ವಿಜಯ್ ದೇವರಕೊಂಡ, ಸಲ್ಮಾನ್..; ಕರಣ್ ಜೋಹರ್​​ ಬರ್ತ್​ಡೇ ಪಾರ್ಟಿಯಲ್ಲಿ ಭಾಗವಹಿಸಿದ ತಾರೆಯರು ಯಾರೆಲ್ಲಾ?

ರಾಜಕಾರಣ ಹಾಗೂ ವೃತ್ತಿಪರತೆಯನ್ನು ಕಮಲ್ ಪ್ರತ್ಯೇಕವಾಗಿಟ್ಟುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಇದು ಅವಶ್ಯಕವೂ ಹೌದು. ಕಾರಣ ಬಹುತೇಕ ಎಲ್ಲಾ ನಿರ್ಮಾಣ ಸಂಸ್ಥೆಗಳು, ಚಿತ್ರರಂಗದ ವ್ಯಕ್ತಿಗಳಿಗೆ ರಾಜಕೀಯ ಹಿನ್ನೆಲೆಯಿದೆ. ಹೀಗಾಗಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಚಿತ್ರಗಳ ವಿಚಾರದಲ್ಲಿ ನಟರು ವೃತ್ತಿಪರ ಸೌಹಾರ್ದತೆ ಹೊಂದಿರುತ್ತಾರೆ.

ಇದನ್ನೂ ಓದಿ: Vikram Trailer: ಯಶ್​ ಸ್ಟೈಲ್​ ಕಾಪಿ ಮಾಡಿದ್ರಾ ಕಮಲ್​ ಹಾಸನ್? ‘ವಿಕ್ರಮ್​’ ಚಿತ್ರದಲ್ಲೂ ಇದೆ ದೊಡ್ಡಮ್ಮ ಗನ್​

‘ವಿಕ್ರಮ್’ ಚಿತ್ರದ ವಿಚಾರದಲ್ಲೂ ಇದೇ ಆಗಿದೆ. ಕಮಲ್ ಹೊಸ ಚಿತ್ರವನ್ನು ವಿತರಿಸುತ್ತಿರುವುದು ಉದಯನಿಧಿ ಸ್ಟಾಲಿನ್. ಅವರು ‘ರೆಡ್ ಜೈಂಟ್ ಮೂವೀಸ್’ ಮೂಲಕ ತಮಿಳುನಾಡಿನಲ್ಲಿ ‘ವಿಕ್ರಮ್’ ವಿತರಣೆ ಮಾಡುತ್ತಿದ್ದಾರೆ. ‘ವಿಕ್ರಮ್​’ ಟ್ರೇಲರ್ ರಿಲೀಸ್ ವೇಳೆ ಉದಯನಿಧಿ ಸ್ಟಾಲಿನ್ ಬಗ್ಗೆ ಕಮಲ್ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಗೆಳೆತನ ಮುಂದುವರಿಸಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ ಕಮಲ್ ಹಾಸನ್​. 2021 ರ ವಿಧಾನಸಭಾ ಚುನಾವಣೆಯಲ್ಲಿ, ಕಮಲ್ ಹಾಸನ್​ ಅವರು ಉದಯನಿಧಿ ಸ್ಟಾಲಿನ್ ಮತ್ತು ಡಿಎಂಕೆ ವಿರುದ್ಧ ವ್ಯಾಪಕ ಪ್ರಚಾರ ಮಾಡಿದ್ದರು. ಹೀಗಾಗಿ ಕಮಲ್​ ಹೇಳಿಕೆಗಳು ಮಹತ್ವ ಪಡೆದಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ