Amreen Bhat: ಇಬ್ಬರು ಉಗ್ರರ ಹತ್ಯೆ; ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಪ್ರಕರಣವನ್ನು 24 ಗಂಟೆಗಳ ಒಳಗೆ ಭೇದಿಸಿದ ಪೊಲೀಸರು

Amreen Bhat: ಇಬ್ಬರು ಉಗ್ರರ ಹತ್ಯೆ; ಕಿರುತೆರೆ ಕಲಾವಿದೆ ಅಮ್ರೀನ್ ಭಟ್ ಪ್ರಕರಣವನ್ನು 24 ಗಂಟೆಗಳ ಒಳಗೆ ಭೇದಿಸಿದ ಪೊಲೀಸರು
ಅಮ್ರೀನ್ ಭಟ್

Kashmir Police: ಬುಧವಾರದಂದು ಬುದ್ಗಾಮ್‌ನ ಹಶ್ರೂ ಗ್ರಾಮದಲ್ಲಿದ್ದ ಅಮ್ರೀನ್ ಭಟ್​ರನ್ನು ಅವರ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಈ ಘಟನೆಯಲ್ಲಿ ಅವರ 10 ವರ್ಷ ವಯಸ್ಸಿನ ಮಗು ಕೂಡ ಗಾಯಗೊಂಡಿತ್ತು. ಘಟನೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಒಬ್ಬರು ಭಯೋತ್ಪಾದಕರನ್ನು ಈಗ ಪೊಲೀಸರು ಹತ್ಯೆ ಮಾಡಿದ್ದಾರೆ.

TV9kannada Web Team

| Edited By: shivaprasad.hs

May 27, 2022 | 12:46 PM

ಕಿರುತೆರೆ ಕಲಾವಿದೆ ಅಮ್ರೀನ್ ಭಟ್ (Amreen Bhat) ಹತ್ಯೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್​ಇಟಿ) ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಆವಂತಿಪೋರಾ ಪಟ್ಟಣದಲ್ಲಿ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು (Jammu Kashmir Police) ಶುಕ್ರವಾರ ತಿಳಿಸಿದ್ದಾರೆ. ಬುಧವಾರದಂದು ಬುದ್ಗಾಮ್‌ನ ಹಶ್ರೂ ಗ್ರಾಮದಲ್ಲಿದ್ದ ಅಮ್ರೀನ್ ಭಟ್​ರನ್ನು ಅವರ ಮನೆಯ ಹೊರಗೆ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಈ ಘಟನೆಯಲ್ಲಿ ಅವರ 10 ವರ್ಷ ವಯಸ್ಸಿನ ಮಗು ಕೂಡ ಗಾಯಗೊಂಡಿತ್ತು. ‘‘ಕಾಶ್ಮೀರ ಕಣಿವೆಯಲ್ಲಿ ಕಳೆದ 3 ದಿನಗಳಲ್ಲಿ 3 ಜೆಎಂ ಮತ್ತು 7 ಎಲ್ಇಟಿ ಸಂಘಟನೆಯ ಒಟ್ಟು 10 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಅಮ್ರೀನ್ ಭಟ್ ಕೊಲೆ ಪ್ರಕರಣವನ್ನು 24 ಗಂಟೆಗಳ ಒಳಗೆ ಭೇದಿಸಲಾಗಿದೆ’’ ಎಂದು ಪೊಲೀಸರು ಟ್ವೀಟ್ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

ಕಾಶ್ಮೀರದ ಪೊಲೀಸರು ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಹತ್ಯೆಯಾಗಿರುವ ಎಲ್​ಇಟಿಯ ಇಬ್ಬರು ಭಯೋತ್ಪಾದಕರನ್ನು ಶಾಹಿದ್ ಮುಷ್ತಾಕ್ ಭಟ್ ಮತ್ತು ಫರ್ಹಾನ್ ಹಬೀಬ್ ಎಂದು ಗುರುತಿಸಲಾಗಿದೆ. ಎಲ್ಇಟಿ ಕಮಾಂಡರ್ ಲತೀಫ್ ಸೂಚನೆಯ ಮೇರೆಗೆ ಕಿರುತೆರೆ ಕಲಾವಿದೆಯನ್ನು ಅವರು ಹತ್ಯೆ ಮಾಡಿದ್ದರು ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಉಗ್ರರಿಂದ ಒಂದು ಎಕೆ -56 ರೈಫಲ್, ನಾಲ್ಕು ಮ್ಯಾಗಜೀನ್‌ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಗುಂಡಿಕ್ಕಿ ಕೊಲ್ಲುವ ಮುನ್ನ ಇಬ್ಬರೂ ಪೊಲೀಸರ ಬಲೆಗೆ ಬಿದ್ದಿದ್ದರು.

ಅಮ್ರೀನ್ ಭಟ್ ಹತ್ಯೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವೆಡೆ ಇದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ ಅಮಾಯಕರ ಮೇಲೆ ದಾಳಿಯಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದರು.

ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದ 26 ವಿದೇಶಿ ಭಯೋತ್ಪಾದಕರನ್ನು ಇದುವರೆಗೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada