ಕಮಲ್ ಹಾಸನ್ ನಟನೆಯ ಚಿತ್ರ ಎರಡು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು

1981ರಲ್ಲಿ ರಿಲೀಸ್ ಆದ ‘ಏಕ್ ದುಜೆ ಕೆ ಲಿಯೆ' ಸಿನಿಮಾ ಬಿಡುಗಡೆಯಾಯಿತು. ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದಾರೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಎಂದು ಸಾಬೀತಾಯಿತು.

ಕಮಲ್ ಹಾಸನ್ ನಟನೆಯ ಚಿತ್ರ ಎರಡು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು
ಕಮಲ್ ಹಾಸನ್ ನಟನೆಯ ಚಿತ್ರ ಎರಡು ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಓಡಿತು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 03, 2024 | 12:19 PM

ದಕ್ಷಿಣದ ಸೂಪರ್‌ಸ್ಟಾರ್ ಕಮಲ್ ಹಾಸನ್ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ನಟನೆಯ ಸಿನಿಮಾವೊಂದು ಒಂದು, ಎರಡು ಅಥವಾ 12 ತಿಂಗಳಲ್ಲ ಎರಡು ವರ್ಷಗಳ ಕಾಲ ನಿರಂತರವಾಗಿ ಥಿಯೇಟರ್‌ಗಳಲ್ಲಿ ಓಡಿತ್ತು. ಆ ಚಿತ್ರದ ಹೆಸರು ‘ಏಕ್ ದುಜೆ ಕೆ ಲಿಯೆ’. ಇದು ಹಿಂದಿ ಚಿತ್ರರಂಗದಲ್ಲಿ ಅವರ ಮೊದಲ ಸಿನಿಮಾ ಆಗಿತ್ತು.

1981ರಲ್ಲಿ ರೊಮ್ಯಾಂಟಿಕ್ ಸಿನಿಮಾ ‘ಏಕ್ ದುಜೆ ಕೆ ಲಿಯೆ’ ಬಿಡುಗಡೆಯಾಯಿತು. ಇದನ್ನು ಕೆ. ಬಾಲಚಂದರ್ ನಿರ್ದೇಶಿಸಿದ್ದಾರೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಎಂದು ಸಾಬೀತಾಯಿತು. 10 ಲಕ್ಷ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಸಿನಿಮಾ 693 ದಿನಗಳವರೆಗೆ ಓಡಿತು

ಕಮಲ್ ಹಾಸನ್ ಜೊತೆಗೆ ರತಿ ಅಗ್ನಿಹೋತ್ರಿ ಮತ್ತು ಮಾಧವಿ ಕೂಡ ‘ಏಕ್ ದುಜೆ ಕೆ ಲಿಯೇ’ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ಈ ಇಬ್ಬರೂ ನಟಿಯರ ಮೊದಲ ಚಿತ್ರ ಇದಾಗಿದೆ. ಪ್ರೇಕ್ಷಕರು ಈ ಚಿತ್ರವನ್ನು ತುಂಬಾ ಇಷ್ಟಪಟ್ಟರು. ಅದು ಹಲವಾರು ದಿನಗಳವರೆಗೆ ನಿರಂತರವಾಗಿ ಓಡಿತು. IMDB ಪ್ರಕಾರ, ಈ ಚಿತ್ರವು ಬೆಂಗಳೂರಿನ ಕಲ್ಪನಾ ಥಿಯೇಟರ್‌ನಲ್ಲಿ 693 ದಿನಗಳ ಕಾಲ ಓಡಿತು. ಬಾಲಿವುಡ್​ನ ಹಿರಿಯ ನಟ ರಾಜ್ ಕಪೂರ್ ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.

ಈ ಚಿತ್ರವನ್ನು ನೋಡಿದ ನಂತರ ರಾಜ್ ಕಪೂರ್ ನಿರ್ದೇಶಕರಿಗೆ ಸಲಹೆ ನೀಡಿದರು. ಚಿತ್ರದ ಕ್ಲೈಮ್ಯಾಕ್ಸ್ ಬದಲಾಯಿಸುವಂತೆ ಹೇಳಿದರು. ಸಿನಿಮಾದ ಕ್ಲೈಮ್ಯಾಕ್ಸ್ ಸುಖಾಂತ್ಯ ಕಾಣಬೇಕು ಎಂದರು. ಆದರೆ, ಇದನ್ನು ಕೇಳಿದ ನಂತರವೂ ನಿರ್ದೇಶಕರು ಅದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಂತರ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಎಂದು ಸಾಬೀತಾಯಿತು.

ಇದನ್ನೂ ಓದಿ: ಕಲ್ಕಿ 2898 ಎಡಿ: 7 ನಿಮಿಷಕ್ಕೆ 20 ಕೋಟಿ ಹಣ ಪಡೆದ ಕಮಲ್ ಹಾಸನ್

‘ಏಕ್ ದುಜೆ ಕೆ ಲಿಯೇ’ ಕಥೆಯ ಹೊರತಾಗಿ, ಅದರ ಹಾಡುಗಳು ಕೂಡ ಹಿಟ್ ಎಂದು ಸಾಬೀತಾಯಿತು. ವರ್ಷಗಳ ನಂತರವೂ ಜನರು ಈ ಚಿತ್ರದ ಹಾಡುಗಳನ್ನು ಗುನುಗುತ್ತಾರೆ. ಈ ಚಿತ್ರದ ಹಾಡುಗಳಿಗೆ ಸಂಬಂಧಿಸಿದ ಒಂದು ಘಟನೆಯೂ ಇದೆ. ‘ಟಾಕ್ಸಿಕ್’ ಎಂಬ ಇಂಗ್ಲಿಷ್ ಹಾಡು 2003ರಲ್ಲಿ ಬಂದಿತ್ತು. ಈ ಹಾಡಿನ ಟ್ಯೂನ್ ‘ಏಕ್ ದುಜೆ ಕೆ ಲಿಯೇ’ ಚಿತ್ರದ ‘ತೇರೆ ಮೇರೆ ಬೀಚ್’ ಹಾಡಿನಂತೆಯೇ ಇತ್ತು. ಆ ಸಮಯದಲ್ಲಿ ಈ ಹಾಡಿನ ಟ್ಯೂನ್ ಅನ್ನು ‘ಏಕ್ ದುಜೆ ಕೆ ಲಿಯೇ’ ನಿಂದ ಕಾಪಿ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್