‘ಇಂಡಿಯನ್ 2’ ಕಳಪೆ ಓಪನಿಂಗ್, 20 ನಿಮಿಷ ಕತ್ತರಿ ಹಾಕಿದ ನಿರ್ದೇಶಕ

|

Updated on: Jul 13, 2024 | 9:46 PM

ಕಮಲ್ ಹಾಸನ್ ನಟಿಸಿ, ಶಂಕರ್ ನಿರ್ದೇಶನ ಮಾಡಿರುವ ‘ಇಂಡಿಯನ್ 2’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಪ್ರೇಕ್ಷರಿಗಿತ್ತು ಆದರೆ ಸಿನಿಮಾ ಕಳಪೆ ಓಪನಿಂಗ್ ಕಂಡಿದೆ. ಇದೀಗ ಸಿನಿಮಾದ 20 ನಿಮಿಷ ಭಾಗವನ್ನು ಕತ್ತರಿಸುವ ನಿರ್ಣಯ ಮಾಡಲಾಗಿದೆ.

‘ಇಂಡಿಯನ್ 2’ ಕಳಪೆ ಓಪನಿಂಗ್, 20 ನಿಮಿಷ ಕತ್ತರಿ ಹಾಕಿದ ನಿರ್ದೇಶಕ
Follow us on

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ನಿನ್ನೆಯಷ್ಟೆ (ಜುಲೈ 12) ರಾಷ್ಟ್ರದಾದ್ಯಂತ ಬಿಡುಗಡೆ ಆಗಿದೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸಿ, ಕಮಲ್ ಹಾಸನ್ ನಟಿಸಿರುವ ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇತ್ತು. 1996 ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾದ ಮುಂದುವರೆದ ಭಾಗ ಎಂಬ ಕಾರಣಕ್ಕೂ ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆಯನ್ನು ಈ ಸಿನಿಮಾ ಹುಟ್ಟಿಸಿತ್ತು. ಆದರೆ ಸಿನಿಮಾ ಬಿಡುಗಡೆ ಆದ ಮೊದಲ ದಿನವೇ ಸಿನಿಮಾದ ಬಗ್ಗೆ ಋಣಾತ್ಮಕ ಪ್ರತಿಕ್ರಿಯೆಗಳು ಹರಿದಾಡಿದ್ದು, ಸಿನಿಮಾದ ಕಲೆಕ್ಷನ್ ಕಳಪೆಯಾಗಿದೆ.

‘ಇಂಡಿಯನ್ 2’ ಸಿನಿಮಾಕ್ಕೆ ಎಲ್ಲೆಡೆಯಿಂದ ಋಣಾತ್ಮಕ ವಿಮರ್ಶೆಗಳು ದೊರೆತಿದ್ದು, ಸಿನಿಮಾದ ಮೊದಲ ದಿನದ ಕಲೆಕ್ಷನ್ ಕಳಪೆಯಾಗಿದೆ. ಸಿನಿಮಾ ನೋಡಿದ ಹಲವರು ಸಿನಿಮಾದ ಅತಿಯಾದ ಉದ್ದ, ಅನಗತ್ಯ ದೃಶ್ಯಗಳ ಬಗ್ಗೆ ಟೀಕೆ ಮಾಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾವನ್ನು ಇನ್ನು ತುಸು ಟ್ರಿಮ್ ಮಾಡಲು ನಿರ್ದೇಶಕ ಶಂಕರ್ ಮುಂದಾಗಿದ್ದಾರೆ. ಅದೂ ಬರೋಬ್ಬರಿ 20 ನಿಮಿಷದ ದೃಶ್ಯಗಳನ್ನು ಶಂಕರ್ ತುಂಡರಿಸುತ್ತಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ನಟನೆಯ ಚಿತ್ರ ಎರಡು ವರ್ಷ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು

ಸಿನಿಮಾದಲ್ಲಿ ಕಮಲ್ ಎಂಟ್ರಿ ತಡವಾಗಿ ಆಗುತ್ತದೆ ಎಂಬುದು ಸೇರಿದಂತೆ ಹಲವು ದೃಶ್ಯಗಳಲ್ಲಿ ಭಾಷಣದ ರೀತಿ ಸಂಭಾಷಣೆ ಇದೆ ಇನ್ನೂ ಹಲವು ಋಣಾತ್ಮಕ ಅಭಿಪ್ರಾಯಗಳು ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಪ್ರೇಕ್ಷಕರ ಅಭಿಪ್ರಾಯವನ್ನು ಮನ್ನಿಸಿ ನಿರ್ದೇಶಕ ಶಂಕರ್ ‘ಇಂಡಿಯನ್ 2’ ಸಿನಿಮಾ ಬಿಡುಗಡೆ ಆದ ಎರಡನೇಯ ದಿನವೇ ಸಿನಿಮಾಕ್ಕೆ ಕತ್ತರಿ ಹಾಕಲು ಮುಂದಾಗಿದ್ದಾರೆ. ಸಿನಿಮಾದ ಹಲವು ಅನವಶ್ಯಕ ದೃಶ್ಯಗಳನ್ನು ತೆಗೆದು ಬಿಸಾಡಿ ಸಿನಿಮಾವನ್ನು 20 ನಿಮಿಷ ಕಡಿಮೆ ಮಾಡಲಿದ್ದಾರೆ. ‘ಇಂಡಿಯನ್ 2’ ಸಿನಿಮಾ ಈಗ 2:30 ಗಂಟೆ ಉದ್ದವಿದೆ. ಈಗ ಸಿನಿಮಾವನ್ನು ಟ್ರಿಮ್ ಮಾಡಿದ ಬಳಿಕ 2:10 ನಿಮಿಷ ಆಗಲಿದೆ. ಆಗಲಾದರು ಜನರಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

‘ಇಂಡಿಯನ್ 2’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ರಕುಲ್ ಪ್ರೀತ್ ಸಿಂಗ್, ನಟ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ಬ್ರಹ್ಮಾನಂದಂ, ಪ್ರಿಯಾ ಭವಾನಿ ಶಂಕರ್ ಇನ್ನೂ ಹಲವರು ನಟಿಸಿದ್ದಾರೆ. 1996 ರಲ್ಲಿ ಬಿಡುಗಡೆ ಆಗಿದ್ದ ‘ಇಂಡಿಯನ್’ ಸಿನಿಮಾದಲ್ಲಿ ಇದ್ದ ಸೇನಾಪತಿ ಪಾತ್ರವೇ ಈ ಸಿನಿಮಾದಲ್ಲಿಯೂ ಮುಂದುವರೆದಿದೆ. ಈ ಸಿನಿಮಾದಲ್ಲಿಯೂ ಸಹ ಸೇನಾಪತಿ ಲಂಚಗುಳಿತನ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ