ಖ್ಯಾತನಟ ಸೂರ್ಯಗೆ ಸೆಟ್​ನಲ್ಲಿ ಗಾಯ; ಈಗ ಹೇಗಿದೆ ಆರೋಗ್ಯ ಸ್ಥಿತಿ?

ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅಪಘಾತ ಸಂಭವಿಸುತ್ತದೆ. ಸೂರ್ಯ ಸಿನಿಮಾದ ತಂಡದವರೂ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಆದಾಗ್ಯೂ ಅವಘಡ ಸಂಭವಿಸಿದೆ. ಈಗ ಸೂರ್ಯ ಚೇತರಿಕೆಕಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಖ್ಯಾತನಟ ಸೂರ್ಯಗೆ ಸೆಟ್​ನಲ್ಲಿ ಗಾಯ; ಈಗ ಹೇಗಿದೆ ಆರೋಗ್ಯ ಸ್ಥಿತಿ?
ಸೂರ್ಯ
Edited By:

Updated on: Aug 10, 2024 | 12:15 PM

ಕಾಲಿವುಡ್​ನ ಖ್ಯಾತ ನಟ ಸೂರ್ಯ ಅವರ ತಲೆಗೆ ಪೆಟ್ಟಾದ ಬಗ್ಗೆ ವರದಿ ಆಗಿದೆ. ಅವರು ತ್ತೀಚೆಗೆ ‘ಸೂರ್ಯ 44’ ಸಿನಿಮಾದ ಶೂಟ್​ನಲ್ಲಿ ಬ್ಯುಸಿ ಇದ್ದರು. ಪೆಟ್ಟಾಗಿರೋ ಕಾರಣದಿಂದ ಸಿನಿಮಾದ ಶೂಟ್​ನ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ವರದಿ ಆಗಿದೆ. ಈ ತಿಂಗಳ ಆರಂಭದಲ್ಲಿ ಊಟಿಯಲ್ಲಿ ‘ಸೂರ್ಯ 44’ ಚಿತ್ರದ ಕೆಲಸ ಆರಂಭ ಆಗಿತ್ತು. ಈಗ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನ ಮಾಡುತ್ತಿದ್ದಾರೆ.

ಶೂಟಿಂಗ್ ವೇಳೆ ಎಷ್ಟೇ ಎಚ್ಚರಿಕೆ ತೆಗೆದುಕೊಂಡರೂ ಅಪಘಾತ ಸಂಭವಿಸುತ್ತದೆ. ಸೂರ್ಯ ಸಿನಿಮಾದ ತಂಡದವರೂ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಆದಾಗ್ಯೂ ಅವಘಡ ಸಂಭವಿಸಿದೆ. ಈಗ ಸೂರ್ಯ ಚೇತರಿಕೆಕಂಡಿದ್ದಾರೆ. ಈ ಬಗ್ಗೆ ನಿರ್ಮಾಪಕ ರಾಜಶೇಖರ್ ಪಾಂಡಿಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರೀತಿಯ ಸೂರ್ಯ ಅಭಿಮಾನಿಗಳೇ, ಇದೊಂದು ಸಣ್ಣ ಗಾಯ. ಭಯ ಬೇಡ. ನಿಮ್ಮ ಪ್ರಾರ್ಥನೆ ಹಾಗೂ ಪ್ರೀತಿಯಿಂದ ಸೂರ್ಯ ಅಣ್ಣ ಅವರು ಆರಾಮಾಗಿ ಇದ್ದಾರೆ’ ಎಂದಿದ್ದಾರೆ ಅವರು.

ಈ ಘಟನೆ ಬಗ್ಗೆ ಕೇಳಿ ಸೂರ್ಯ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ವ್ಯಕ್ತವಾಗಿತ್ತು. ಆದರೆ, ಈಗ ನಿರ್ಮಾಪಕರು ಈ ಬಗ್ಗೆ ಮಾಹಿತಿ ಕೊಟ್ಟ ಬಳಿಕ ಎಲ್ಲರೂ ನಿಟ್ಟುಸಿರು ಬಿಡುವಂತೆ ಆಗಿದೆ. ಅವರು ಬೇಗ ಚೇತರಿಕೆ ಕಂಡು ಮತ್ತೆ ಶೂಟಿಂಗ್ ಸೆಟ್ ಸೇರಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇದನ್ನೂ ಓದಿ: ‘ಕಂಗುವ’ ರಿಲೀಸ್ ದಿನಾಂಕ ಘೋಷಣೆ; ‘ಮಾರ್ಟಿನ್’ ಸಿನಿಮಾ ಜೊತೆ ಕ್ಲ್ಯಾಶ್

‘ಕಂಗುವ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಸೂರ್ಯ ಅವರೇ ಹೀರೋ. ಇದು ಬಿಗ್ ಬಜೆಟ್ ಸಿನಿಮಾ. ಈ ಚಿತ್ರವನ್ನು ಸಿರುಥಾಯಿ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ದಿಶಾ ಪಟಾಣಿ ಅವರು ಈ ಚಿತ್ರಕ್ಕೆ ನಾಯಕಿ. ಬಾಬಿ ಡಿಯೋಲ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us