‘ಕಂಗುವ’ ರಿಲೀಸ್ ದಿನಾಂಕ ಘೋಷಣೆ; ‘ಮಾರ್ಟಿನ್’ ಸಿನಿಮಾ ಜೊತೆ ಕ್ಲ್ಯಾಶ್

|

Updated on: Jun 28, 2024 | 11:41 AM

‘ಕಂಗುವ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಬಾಬಿ ಡಿಯೋಲ್ ಮುಖಾಮುಖಿ ಆಗುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ದೊಡ್ಡ ಕ್ಲ್ಯಾಶ್​ಗೆ ತಂಡ ರೆಡಿ ಆಗಿದೆ.

‘ಕಂಗುವ’ ರಿಲೀಸ್ ದಿನಾಂಕ ಘೋಷಣೆ; ‘ಮಾರ್ಟಿನ್’ ಸಿನಿಮಾ ಜೊತೆ ಕ್ಲ್ಯಾಶ್
‘ಕಂಗುವ’ ರಿಲೀಸ್ ದಿನಾಂಕ ಘೋಷಣೆ; ‘ಮಾರ್ಟಿನ್’ ಸಿನಿಮಾ ಜೊತೆ ಕ್ಲ್ಯಾಶ್
Follow us on

ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರದ ಟೀಸರ್​ಗಳು ಗಮನ ಸೆಳೆದಿವೆ. ಈಗ ಸಿನಿಮಾದ ರಿಲೀಸ್ ದಿನಾಂಕ ಘೋಷಣೆ ಆಗಿದೆ. ದಸರಾ ಪ್ರಯುಕ್ತ ಅಕ್ಟೋಬರ್​ ತಿಂಗಳಲ್ಲಿ ‘ಕಂಗುವ’ ರಿಲೀಸ್ ಆಗಲಿದೆ. ಇದೇ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆಗುತ್ತಿದೆ ಅನ್ನೋದು ವಿಶೇಷ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹೀಗಾಗಿ, ‘ಮಾರ್ಟಿನ್ ಹಾಗೂ ‘ಕಂಗುವ’ ಸಿನಿಮಾ ಮಧ್ಯೆ ಬಾಕ್ಸ್ ಆಫೀಸ್​ನಲ್ಲಿ ಕ್ಯ್ಲಾಶ್ ಏರ್ಪಡುತ್ತಿದೆ.

‘ಕಂಗುವ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ ಸೂರ್ಯ ಹಾಗೂ ಬಾಬಿ ಡಿಯೋಲ್ ಮುಖಾಮುಖಿ ಆಗುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ಹಂಚಿಕೊಂಡಿದೆ. ಈ ಮೂಲಕ ದೊಡ್ಡ ಕ್ಲ್ಯಾಶ್​ಗೆ ತಂಡ ರೆಡಿ ಆಗಿದೆ.

‘ವಾರಿಯರ್​ ಕಿಂಗ್​ನ ಸ್ವಾಗತಿಸಲು ರೆಡಿ ಆಗಿ. ಅಕ್ಟೋಬರ್ 10ರಂದು ಕಂಗುವ ರಿಲೀಸ್ ಆಗಲಿದೆ’ ಎಂದು ತಂಡ ಮಾಹಿತಿ ನೀಡಿದೆ. ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಭಾಷೆಗಳಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ಹೀಗಾಗಿ, ಕನ್ನಡದ ‘ಮಾರ್ಟಿನ್’ ಜೊತೆ ಈ ಚಿತ್ರ ಕ್ಲ್ಯಾಶ್ ಆಗಲಿದೆ.


ತೆಲುಗಿನಲ್ಲಿ ಜೂನಿಯರ್ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾ ತಂಡ ಕೂಡ ಅಕ್ಟೋಬರ್ 10ರಂದು ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಹೀಗಾಗಿ, ಈ ಚಿತ್ರ ಕೂಡ ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಮಾಡುತ್ತಿದೆ.

ಇದನ್ನೂ ಓದಿ: ಎರಡು ಭಿನ್ನ ಅವತಾರದಲ್ಲಿ ಸೂರ್ಯ; ‘ಕಂಗುವ’ ಚಿತ್ರದಲ್ಲಿ ಇರಲಿದೆ ದ್ವಿಪಾತ್ರ

ಹಿಂದಿಯಲ್ಲಿ ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆ ಆಗಲಿದೆ. ಇದಲ್ಲದೆ ರಾಜ್​ಕುಮಾರ್ ರಾವ್ ಹಾಗೂ ತೃಪ್ತಿ ದಮ್ರಿ ನಟನೆಯ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಹಾಗೂ ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ‘ದೇವ’ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.