AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಭಿನ್ನ ಅವತಾರದಲ್ಲಿ ಸೂರ್ಯ; ‘ಕಂಗುವ’ ಚಿತ್ರದಲ್ಲಿ ಇರಲಿದೆ ದ್ವಿಪಾತ್ರ

ನಟ ಸೂರ್ಯ ಅವರು ‘ಕಂಗುವ’ ಸಿನಿಮಾದಲ್ಲಿ ಡಬಲ್​ ರೋಲ್ ಮಾಡುತ್ತಿದ್ದಾರೆ. ಹೊಸ ಪೋಸ್ಟರ್​ ಮೂಲಕ ಈ ವಿಚಾರ ಬಹಿರಂಗಪಡಿಸಲಾಗಿದೆ. ಈ ಎರಡೂ ಪಾತ್ರಗಳು ಯುದ್ಧಕ್ಕೆ ಸಿದ್ಧವಾಗಿ ನಿಂತಂತಿವೆ. ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈ ಪೋಸ್ಟರ್​ ವಿನ್ಯಾಸಗೊಂಡಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಕಂಗುವ’ ಪೋಸ್ಟರ್​ ವೈರಲ್​ ಆಗಿದೆ.

ಎರಡು ಭಿನ್ನ ಅವತಾರದಲ್ಲಿ ಸೂರ್ಯ; ‘ಕಂಗುವ’ ಚಿತ್ರದಲ್ಲಿ ಇರಲಿದೆ ದ್ವಿಪಾತ್ರ
ಸೂರ್ಯ
ಮದನ್​ ಕುಮಾರ್​
|

Updated on: Apr 15, 2024 | 3:50 PM

Share

ಪ್ರತಿಭಾವಂತ ನಟ ಸೂರ್ಯ ಅವರು ಈಗ ಕಂಗುವ’ (Kanguva) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ನಿರೀಕ್ಷೆ ಮೂಡಲು ಹಲವು ಕಾರಣಗಳಿವೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​ ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಈಗ ಈ ಸಿನಿಮಾದ ಹೊಸ ಪೋಸ್ಟರ್​ ಅನಾವರಣ ಮಾಡಲಾಗಿದೆ. ಇದರಲ್ಲಿ ಎರಡು ವಿಶೇಷ ಅಂಶಗಳನ್ನು ಬಿಟ್ಟುಕೊಡಲಾಗಿದೆ. ಇದೇ ವರ್ಷ ‘ಕಂಗುವ’ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಅಲ್ಲದೇ ಈ ಚಿತ್ರದಲ್ಲಿ ಸೂರ್ಯ (Suriya) ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ 2 ವಿಚಾರಗಳನ್ನು ಪೋಸ್ಟರ್​ ಮೂಲಕ ಬಿಟ್ಟುಕೊಡಲಾಗಿದೆ.

ಯಾವ ಪಾತ್ರ ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸಬಲ್ಲ ಪ್ರತಿಭಾವಂತ ನಟ ಸೂರ್ಯ ಅವರು ಈಗಾಗಲೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರು ‘ಕಂಗುವಾ’ ಸಿನಿಮಾದಲ್ಲಿ ಎರಡು ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಈ ಎರಡೂ ಪಾತ್ರಗಳು ಒಂದಕ್ಕೊಂದು ತದ್ವಿರುದ್ಧವಾಗಿವೆ. ಒಂದರಲ್ಲಿ ಅವರು ಪುರಾತನ ಕಾಲದ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದರೆ, ಇನ್ನೊಂದರಲ್ಲಿ ಆಧುನಿಕ ಯುಗದ ವ್ಯಕ್ತಿಯಾಗಿ ಗನ್​ ಹಿಡಿದು ನಿಂತಿದ್ದಾರೆ.

ಈ ಎರಡೂ ಪಾತ್ರಗಳು ಯುದ್ಧಕ್ಕೆ ಸಿದ್ಧವಾಗಿ ನಿಂತಂತಿವೆ. ಈ ಎರಡರಲ್ಲಿ ಒಂದು ಪಾತ್ರಕ್ಕೆ ನೆಗೆಟಿವ್​ ಶೇಡ್​ ಇರಲಿದೆಯಾ ಎಂಬ ಅನುಮಾನ ಕೂಡ ಅಭಿಮಾನಿಗಳ ಮನದಲ್ಲಿ ಮೂಡಿದೆ. ‘ಕಂಗುವ’ ಚಿತ್ರಕ್ಕೆ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. 2024ರಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ ಎಂಬುದು ಹೌದಾದರೂ ನಿರ್ದಿಷ್ಟ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.

ಇದನ್ನೂ ಓದಿ: ಹೆಣಗಳ ರಾಶಿ, ರಕ್ತದ ಓಕುಳಿ, ರಾಕ್ಷಸರ ಹಾವಳಿ; ಭಯಂಕರವಾಗಿದೆ ‘ಕಂಗುವ’ ಟೀಸರ್​

ನಟಿ ದಿಶಾ ಪಟಾನಿ ಅವರು ‘ಕಂಗುವ’ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಬಾಬಿ ಡಿಯೋಲ್​ ಕೂಡ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಗೂ ಇದು ಮೊದಲ ತಮಿಳು ಸಿನಿಮಾ. ದೇವಿ ಶ್ರೀ ಪ್ರಸಾದ್​ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ‘ಸ್ಟುಡಿಯೋ ಗ್ರೀನ್​’ ಮತ್ತು ‘ಯು.ವಿ. ಕ್ರಿಯೇಷನ್ಸ್​’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿವೆ. 10 ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾ 3ಡಿ ವರ್ಷನ್​ನಲ್ಲೂ ಬರಲಿದೆ. ಈ ಎಲ್ಲ ಕಾರಣಗಳಿಂದ ಸಿಕ್ಕಾಪಟ್ಟೆ ಹೈಪ್​ ಸೃಷ್ಟಿ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!