AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಧಾರಾವಾಹಿಗಳ ಟಿಆರ್​ಪಿ ಬಹಿರಂಗ; ರೇಸ್​ನಲ್ಲಿ ಮೊದಲು ಇರೋದು ಯಾರು?

13ನೇ ವಾರದ ಟಿಆರ್​ಪಿ ಪ್ರಕಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇತ್ತೀಚೆಗೆ ಆರಂಭ ಆದ ಈ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಲಕ್ಷ್ಮಿ ದೇವಮ್ಮ, ಅಶೋಕ್ ಜಂಬೆ, ಶ್ವೇತಾ, ಲಕ್ಷ್ಮಿ ಹೆಗಡೆ, ದಿಶಾ ಮದನ್, ಚಂದನಾ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಕನ್ನಡ ಧಾರಾವಾಹಿಗಳ ಟಿಆರ್​ಪಿ ಬಹಿರಂಗ; ರೇಸ್​ನಲ್ಲಿ ಮೊದಲು ಇರೋದು ಯಾರು?
ಧಾರಾವಾಹಿ ಟಿಆರ್​ಪಿ
Follow us
ರಾಜೇಶ್ ದುಗ್ಗುಮನೆ
|

Updated on: Apr 04, 2024 | 2:27 PM

ಧಾರಾವಾಹಿಗಳ ಟಿಆರ್​ಪಿಯಲ್ಲಿ ಏರಿಳಿತ ಕಾಮನ್. ಪ್ರತಿ ವಾರ ಧಾರಾವಾಹಿಗಳ ಕಥೆಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ಕಲರ್ಸ್ ಕನ್ನಡ, ಜೀ ಕನ್ನಡ ಮೊದಲಾದ ವಾಹಿನಿಗಳ ಮಧ್ಯೆ ಭರ್ಜರಿ ಸ್ಪರ್ಧೆ ಇದೆ. ಸದ್ಯ ಜೀ ಕನ್ನಡ (Zee Kannada) ಟಿಆರ್​ಪಿಯಲ್ಲಿ ಮುಂದಿದೆ. ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅನೇಕ ಧಾರಾವಾಹಿಗಳು ಮೊದಲ ಸ್ಥಾನದಲ್ಲಿ ಇವೆ. ಅದೇ ರೀತಿ ಕಲರ್ಸ್ ಕನ್ನಡದ ಧಾರಾವಾಹಿಗಳು ಕೂಡ ರೇಸ್​ಗೆ ಇಳಿದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

13ನೇ ವಾರದ ಟಿಆರ್​ಪಿ ಪ್ರಕಾರ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಇತ್ತೀಚೆಗೆ ಆರಂಭ ಆದ ಈ ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದೆ. ಲಕ್ಷ್ಮಿ ದೇವಮ್ಮ, ಅಶೋಕ್ ಜಂಬೆ, ಶ್ವೇತಾ, ಲಕ್ಷ್ಮಿ ಹೆಗಡೆ, ದಿಶಾ ಮದನ್, ಚಂದನಾ ಮೊದಲಾದವರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕನ್ನ ಮಕ್ಕಳು’ ಧಾರಾವಾಹಿ ಇದೆ. ಹಲವು ಸಮಯದಿಂದ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಈ ಇತ್ತೀಚೆಗೆ ಈ ಧಾರಾವಾಹಿಗೆ ಎರಡನೇ ಸ್ಥಾನ ಸಿಗುತ್ತಿದೆ.

ಮೂರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈಗಾಗಲೇ ಸೀತಾ ಹಾಗೂ ರಾಮನ ಮಧ್ಯೆ ಪ್ರೀತಿ ಮೊಳೆದಿದೆ. ಇವರ ಲವ್​ ಸ್ಟೋರಿ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನ ಕಾಪಾಡಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋ ‘ರಾಮಾಚಾರಿ’ ಧಾರಾವಾಹಿ ಇದೆ. ಈ ಧಾರಾವಾಹಿ ಗಮನ ಸೆಳೆಯುತ್ತಿದೆ. ಟಾಪ್​ ಐದರಲ್ಲಿರುವ ಏಕೈಕ ಕಲರ್ಸ್​ ಕನ್ನಡದ ಧಾರಾವಾಹಿ ಇದಾಗಿದೆ.

ಇದನ್ನೂ ಓದಿ: ಟಿಆರ್​ಪಿಯಲ್ಲಿ ‘ಲಕ್ಷ್ಮಿ ನಿವಾಸ’ ಧಾರಾವಾಹಿ ಹಿಂದಿಕ್ಕಿದ ‘ಪುಟ್ಟಕ್ಕ’; ‘ರಾಮಾಚಾರಿ’ಗೂ ಇದೆ ಸ್ಥಾನ

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಸಾರಾ ಅಣ್ಣಯ್ಯ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ