AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದ ಸ್ಫುರದ್ರೂಪಿ ನಟ ಸುಮನ್ ಮಗಳು ಮಣಿಪಾಲ್​ ವಿವಿಯಲ್ಲಿ ಹ್ಯೂಮನ್ ಜೆನೆಟಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತೆ

ಕನ್ನಡದ ಸ್ಫುರದ್ರೂಪಿ ನಟ, ಟಾಲಿವುಡ್ಡ್​ ಹಿರಿಯ ನಟ ಸುಮನ್ ಮಗಳನ್ನು ನೋಡಿದ್ದೀರಾ? ಸೌಂದರ್ಯದ ಖನಿಗೆ ಶೀಘ್ರವೇ ಮದುವೆಯಂತೆ!

ಕನ್ನಡದ ಸ್ಫುರದ್ರೂಪಿ ನಟ ಸುಮನ್ ಮಗಳು ಮಣಿಪಾಲ್​ ವಿವಿಯಲ್ಲಿ ಹ್ಯೂಮನ್ ಜೆನೆಟಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತೆ
ಕನ್ನಡದ ಸ್ಫುರದ್ರೂಪಿ ನಟ ಸುಮನ್ ಮಗಳು
ಸಾಧು ಶ್ರೀನಾಥ್​
|

Updated on: May 27, 2023 | 2:47 PM

Share

ಟಾಲಿವುಡ್ಡ್​ ಹಿರಿಯ ನಟ, ಕನ್ನಡದ ಚೆಲುವ (Kannadiga Actor Suman) ಸುಮನ್ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ. 1977 ರಲ್ಲಿ, ಅವರು ತಮಿಳು ಚಲನಚಿತ್ರ ನೀಚಲ್ ಕುಲಂ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದವರು. ನಾಯಕನಾಗಿ ಮೊದಲ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದವರು. ತೆಲುಗು ಜೊತೆಗೆ ತಮಿಳು ಮತ್ತು ಕನ್ನಡದಲ್ಲಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕನಲ್ಲದೆ ಹಲವು ಚಿತ್ರಗಳಲ್ಲಿ ಪೋಷಕ ನಟನಾಗಿಯೂ ಕಾಣಿಸಿಕೊಂಡಿದ್ದರು. ಅಕ್ಕಿನೇನಿ ನಾಗಾರ್ಜುನ ಮತ್ತು ನಿರ್ದೇಶಕ ರಾಘವೇಂದ್ರ ರಾವ್ ಜೋಡಿಯ ಅನ್ನಮಯ್ಯ ಚಿತ್ರದಲ್ಲಿ ವೆಂಕಟೇಶ್ವರ ಸ್ವಾಮಿಯ ಪಾತ್ರದಲ್ಲಿ ಸುಮನ್ ಮನೋಜ್ಞವಾಗಿ ಕಾಣಿಸಿಕೊಂಡಿದ್ದರು. ಸುಮಾರು 45 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದು, ನಟನಾಗಿ ತಮ್ಮದೇ ಆದ ವಿಶೇಷ ಮನ್ನಣೆ ಗಳಿಸಿದ್ದಾರೆ. ಪ್ರಸ್ತುತ ಚಿತ್ರರಂಗದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಚಾಲ್ತಿಯಲ್ಲಿದ್ದಾರೆ.

ಮಣಿಪಾಲ್​ ವಿವಿಯಲ್ಲಿ ಹ್ಯೂಮನ್ ಜೆನೆಟಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತೆ: ಈ ಹಿನ್ನೆಲೆಯಲ್ಲಿ ಸುಮನ್ ಸಂದರ್ಶನವೊಂದರಲ್ಲಿ ಮಗಳ ಬಗ್ಗೆ ಪ್ರಸ್ತಾಪಿಸಿದಾಗ ಆಕೆಯ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಗಳು ಅಖಿಲಜಾ ಪ್ರತ್ಯೂಷಾ ( Suman Daughter Akhilaja Pratyusha) ಚಿನ್ನದ ಪದಕ ವಿಜೇತೆ ಎಂದ ಅವರು.. ಸದ್ಯ ನಟನೆಯಲ್ಲಿ ಆಸಕ್ತಿ ಇಲ್ಲ. ಎರಡು ವರ್ಷಗಳ ಹಿಂದೆ ಮಣಿಪಾಲ್​ ವಿಶ್ವವಿದ್ಯಾನಿಲಯದಲ್ಲಿ ಹ್ಯೂಮನ್ ಜೆನೆಟಿಕ್ಸ್ ನಲ್ಲಿ ಚಿನ್ನದ ಪದಕ ಪಡೆದರು ಎಂದಿದ್ದಾರೆ. ಕೆಲ ದಿನಗಳಿಂದ ಮಗಳ ಮದುವೆ ಸುದ್ದಿಗೆ ಸುಮನ್ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಭಾರತದ ತಾರೆಯರ ಮನೆಗೆ ತಮ್ಮ ಮಗಳು ಸೊಸೆಯಾಗಿ ಹೋಗುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಕೆಗೆ ಮದುವೆಯ ಯೋಚನೆ ಇದೆ. ಆದರೆ ಅದರ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದಿದ್ದಾರೆ. ಮದುವೆ. ಓದು ಮುಗಿಸಿದ ನಂತರವೇ ಮದುವೆಯ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ. ಈ ಹಿಂದೆ ನನಗೆ ಕೆಟ್ಟ ದಿನಗಳು ಕಾಡಿದವು. ನಾನು ಜೈಲಿಗೆ ಹೋಗಿದ್ದೇಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲದಿದ್ದರೂ/ ನಾನು ಭಾಗಿಯಾಗದಿದ್ದರೂ ನನ್ನನ್ನು ಬಂಧಿಸಲಾಗಿತ್ತು ಎಂದು ಹೇಳಿದರು. ಆ ವೇಳೆ ಸುಹಾಸಿನಿ ಹಾಗೂ ಸುಮಲತಾ ಬೆಂಬಲ ನೀಡಿದ್ದರು ಎಂದೂ ಸುಮನ್ ಸ್ಮರಿಸಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ