ಕಮಲ್ ಇನ್ನೂ ಕ್ಷಮೆ ಕೇಳಿಲ್ವಾ ಎಂದು ಪ್ರಶ್ನಿಸಿ ‘ಥಗ್ ಲೈಫ್’ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಕಮಲ್ ಹಾಸನ್ ಅವರ 'ಥಗ್ ಲೈಫ್' ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕನ್ನಡಿಗರಿಗೆ ಕ್ಷಮೆ ಕೇಳುವಂತೆ ನ್ಯಾಯಾಲಯ ಪರೋಕ್ಷವಾಗಿ ಹೇಳಿತ್ತು. ಇಂದು ನಡೆದ ವಿಚಾರಣೆಯಲ್ಲಿ ಕೋರ್ಟ್ ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳದಿರುವುದನ್ನು ಪ್ರಶ್ನಿಸಿದೆ. ಕನ್ನಡ ಸಾಹಿತ್ಯ ಪರಿಷತ್‌ನ ವಾದವನ್ನು ಕೋರ್ಟ್ ಆಲಿಸಿದೆ.

ಕಮಲ್ ಇನ್ನೂ ಕ್ಷಮೆ ಕೇಳಿಲ್ವಾ ಎಂದು ಪ್ರಶ್ನಿಸಿ ‘ಥಗ್ ಲೈಫ್’ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್
ಕಮಲ್ ಹಾಸನ್
Edited By:

Updated on: Jun 13, 2025 | 1:46 PM

‘ಥಗ್ ಲೈಫ್’ ಸಿನಿಮಾ ರಿಲೀಸ್​ಗೆ ಭದ್ರತೆ ಕೋರಿ ಕಮಲ್ ಹಾಸನ್ (Kamal Haasan) ಅವರು ಕರ್ನಾಟಕ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಮೊದಲು ಇದರ ಅರ್ಜಿ ವಿಚಾರಣೆ ನಡೆದಿತ್ತು. ಈ ವೇಳೆ ಕನ್ನಡಿಗರ ಬಳಿ ಕ್ಷಮೆ ಕೇಳಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಪರೋಕ್ಷವಾಗಿ ಕೋರ್ಟ್ ಹೇಳಿತ್ತು. ಇಂದು (ಜೂನ್ 13) ಮತ್ತೆ ಅರ್ಜಿ ನಡೆಸಿರುವ ಕೋರ್ಟ್ ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದೆ.

ಈ ಪ್ರಕರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅರ್ಜಿ ಸಲ್ಲಿಕೆ ಮಾಡಿದೆ. ಈ ವೇಳೆ ತಮ್ಮ ವಾದ ಕೇಳುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಆಗ ಹೈಕೋರ್ಟ್​​ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರು ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್, ‘ಇಲ್ಲ ಕಮಲ್ ಹಾಸನ್ ಅವರು ಸ್ಟುಪಿಡ್ ಸ್ಟೇಟ್​ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
ವಿಮಾನ ದುರಂತ: ‘12th ಫೇಲ್’ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಕಮಲ್ ಹಾಸನ್ ಪರ ವಕೀಲರ ಆಕ್ಷೇಪ

ಕಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್ ಅವರು ‘ಸ್ಟುಪಿಡ್’ ಪದ ಬಳಕೆ ಮಾಡಿದ್ದರ ಸಂಬಂಧ ‘ರಾಜ್​ಕಮಲ್ ಫಿಲ್ಮ್’ ಪರ ವಕೀಲರು ಆಕ್ಷೇಪ ಹೊರಹಾಕಿದರು. ಆ ಬಳಿಕ ಸ್ಟುಪಿಡ್ ಹೇಳಿಕೆಗೆ ಸಾಹಿತ್ಯ ಪರಿಷತ್ ಪರ ವಕೀಲರು ವಿಷಾದ ವ್ಯಕ್ತಪಡಿಸಿದರು. ಸದ್ಯ ಪ್ರಕರಣದ ವಿಚಾರಣೆ ಜೂನ್ 20ಕ್ಕೆ ಮುಂದೂಡಿಕೆ ಆಗಿದೆ.

ಸಿನಿಮಾ ರಿಲೀಸ್ ಮಾಡಲ್ಲ..

ಸದ್ಯದ ಮಟ್ಟಿಗೆ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಕಮಲ್ ಹಾಸನ್ ಫಿಲ್ಮ್ಸ್ ಈ ಮೊದಲು ಹೇಳಿಕೆ ನೀಡಿತ್ತು. ಈಗ ಅದೇ ಹೇಳಿಕೆಯನ್ನು ಮುಂದುವರಿಕೆ ಮಾಡಲಾಗಿದೆ. ಈ ವೇಳೆ ವಿವೇಚನೆ ಬಳಸುವಂತೆ ಮತ್ತೆ ಹೈಕೋರ್ಟ್ ಸಲಹೆ ನೀಡಿದೆ. ಹೀಗಾಗಿ, ಜೂನ್ 20ರವರೆಗೆ ರಾಜ್ಯದಲ್ಲಿ ಸಿನಿಮಾ ರಿಲೀಸ್ ಆಗೋದು ಅನುಮಾನವೇ ಆಗಿದೆ.

ಇದನ್ನೂ ಓದಿ: ಆರ್​ಸಿಬಿಯಲ್ಲಿ ಬೆಂಚ್ ಕಾದ ಆಟಗಾರನ ಅಬ್ಬರ; 51 ಬಾಲ್​ಗೆ 150 ರನ್, ಗೇಲ್ ದಾಖಲೆ ಉಡೀಸ್

ಸುಪ್ರೀಂ ಅಂಗಳದಲ್ಲಿ ಪ್ರಕರಣ

‘ಥಗ್ ಲೈಫ್’ ಚಿತ್ರದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ. ಈ ನೋಟಿಸ್​ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಮೊದಲು ಅರ್ಜಿ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ನಿರಕಾರಿಸಿತ್ತು. ಈ ಪ್ರಕರಣವನ್ನು ಹೈಕೋರ್ಟ್​ನಲ್ಲಿ ಬಗೆಹರಿಸಿಕೊಳ್ಳಲು ಸೂಚಿಸಿತ್ತು. ಆದರೆ, ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚಿಸುತ್ತಿದೆ ಎಂದು ಕಮಲ್ ಹಾಸನ್ ಪರ ವಕೀಲರು ಸುಪ್ರೀಂಗೆ ತಿಳಿಸಿದ್ದರು. ಹೀಗಾಗಿ ಸುಪ್ರೀಂಕೋರ್ಟ್ ಅರ್ಜಿಯನ್ನು ವಿಚಾರಣೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.