ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರು ಯಾವಾಗ ಬೇಕಾದರೂ ಒಂದಾಗಬಹುದು, ಯಾವಾಗ ಬೇಕಾದರೂ ದೂರ ಆಗಬಹುದು. ಅಲ್ಲಿ ಸ್ಪರ್ಧಿಗಳ ಲೆಕ್ಕಾಚಾರ ಕೆಲಸ ಮಾಡುವುದಿಲ್ಲ. ಅಲ್ಲೇನಿದ್ದರೂ ಬಿಗ್ ಬಾಸ್ದೇ ಲೆಕ್ಕಾಚಾರ. ಬಿಗ್ ಬಾಸ್ ಕೈಯಲ್ಲೇ ಚುಕ್ಕಾಣಿ ಇರುತ್ತದೆ. ಎಷ್ಟೇ ಕ್ಲೋಸ್ ಆಗಿದ್ದರೂ ಕೆಲವು ಘಟನೆಗಳಿಂದ ಅವರು ಬೇರೆ ಆದ ಉದಾಹರಣೆ ಸಾಕಷ್ಟಿದೆ. ಈಗ ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ಕಾರ್ತಿಕ್ ಮಧ್ಯೆ ವೈಮನಸ್ಸು ಮೂಡುವ ಸೂಚನೆ ಸಿಕ್ಕಿದೆ. ಇಬ್ಬರೂ ಮನೆಯಲ್ಲಿ ಜೊತೆಯಾಗಿದ್ದರು.
‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಕ್ಲೋಸ್ ಆಗಿದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ‘ಸಂಗೀತಾ ನನ್ನ ಟ್ರ್ಯೂ ಫ್ರೆಂಡ್’ ಎಂದು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಸಂಗೀತಾ ಕೂಡ ಕಾರ್ತಿಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಬೇರೆ ಆಗುವ ಸೂಚನೆ ಸಿಕ್ಕಿದೆ. ಕಾರ್ತಿಕ್ ಅವರನ್ನು ಫೇಕ್ ಎಂದು ಕರೆದಿದ್ದಾರೆ ಸಂಗೀತಾ.
‘ಕ್ಯಾಪ್ಟನ್ ಆಗಲು ಎಲ್ಲಾ ಸದಸ್ಯರು ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕು’ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂದಿದೆ. ನಮ್ರತಾ ಹಾಗೂ ತನಿಷಾ ಹೆಸರನ್ನು ಕಾರ್ತಿಕ್ ತೆಗೆದುಕೊಂಡರು. ಇದು ಸಂಗೀತಾಗೆ ಬೇಸರ ಮೂಡಿಸಿದೆ. ‘ನಾನು ಯಾರ ಮೇಲೂ ಡಿಪೆಂಡ್ ಆಗಿ ಇಲ್ಲಿ ಬಂದಿಲ್ಲ. ನಮ್ರತಾ ಹೆಸರು ತೆಗೆದುಕೊಳ್ಳಲು ನಿನಗೆ ಸಮಸ್ಯೆ ಆಗಿಲ್ಲ. ಜೊತೆಗಿದ್ದವರೇ ಚುಚ್ಚೋದು. ನೀನು ಫೇಕ್’ ಎಂದು ಕಾರ್ತಿಕ್ಗೆ ಸಂಗೀತಾ ಹೇಳಿದ್ದಾರೆ. ಹೀಗೆ ಹೇಳಿದ ತಕ್ಷಣ ಕಾರ್ತಿಕ್ ಹಾಗೂ ವಿನಯ್ ಅಲ್ಲಿಂದ ಎದ್ದು ಹೋಗಿದ್ದಾರೆ.
ಕ್ಯಾಪ್ಟನ್ ಆಗೋ ಬರದಲ್ಲಿ ಸ್ನೇಹ ಕಳೆದುಕೊಳ್ತಾರಾ ಸಂಗೀತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #ColorsKannada pic.twitter.com/T72SCJuhTk
— Colors Kannada (@ColorsKannada) October 25, 2023
ಇದನ್ನೂ ಓದಿ: ‘ನನ್ನನ್ನು ದರಿದ್ರ ಎಂದರು’; ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ನಮ್ರತಾ ಗೌಡ
ಈ ಪ್ರೋಮೋ ಸದ್ಯ ಗಮನ ಸೆಳೆಯುತ್ತಿದೆ. ಇದಕ್ಕೆ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಫ್ರೆಂಡ್ಶಿಪ್ನಲ್ಲಿ ಇದೆಲ್ಲ ಕಾಮನ್’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ನಿಮ್ಮ ಮಧ್ಯೆ ವೈಮನಸ್ಸು ಬೇಡ’ ಎಂದು ಬರೆದಿದ್ದಾರೆ. ರಾತ್ರಿ 9:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾ ಮೂಲಕ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ