Varaha Roopam Song: ‘ವರಾಹ ರೂಪಂ..ಹಾಡು ಬಳಕೆಗೆ ಅನುಮತಿ ನೀಡಿದ್ದ ಜಿಲ್ಲಾ ಕೋರ್ಟ್​ ಆದೇಶಕ್ಕೆ ಹೈಕೋರ್ಟ್ ತಡೆ

ವರಾಹ ರೂಪಂ..ಹಾಡು ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರ ತಂಡದ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಇದರಿಂದ ಕಾಂತಾರ ಚಿತ್ರತಂಡಕ್ಕೆ ನಿರಾಸೆಯಾಗಿದೆ.

Varaha Roopam Song: ‘ವರಾಹ ರೂಪಂ..ಹಾಡು ಬಳಕೆಗೆ ಅನುಮತಿ ನೀಡಿದ್ದ ಜಿಲ್ಲಾ ಕೋರ್ಟ್​ ಆದೇಶಕ್ಕೆ ಹೈಕೋರ್ಟ್ ತಡೆ
ವರಾಹ ರೂಪಂ-ನವರಸಂ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 02, 2022 | 10:28 PM

ಬಿಗ್​ ಸಕ್ಸಸ್ ಕಂಡಿರುವ ಕಾಂತಾರ ಸಿನಿಮಾಗೆ (kantara movie) ಮತ್ತೊಂದು ಸಂಕಷ್ಟ ಎದುರಾಗಿದೆ. ಭರ್ಜರಿ ಸದ್ದು ಮಾಡ್ತಿರುವ ಕಾಂತಾರ ಸಿನಿಮಾದ ‘ವರಾಹ ರೂಪಂ’ ಸಾಂಗ್ (Varaha Roopam Song)​ಗೆ ಮತ್ತೆ ಬ್ರೇಕ್ ಬಿದ್ದಿದೆ. ‘ವರಾಹ ರೂಪಂ’ ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೋಝಿಕೊಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ (Kerala High Court) ತಡೆ ನೀಡಿದೆ. ಈ ಬಗ್ಗೆ ಲೈವ್ ಲಾ ವರದಿ ಮಾಡಿದೆ.

ಇದನ್ನೂ ಓದಿ: Varaha Roopam Song: ‘ವರಾಹ ರೂಪಂ.. ಹಾಡು ಬಳಕೆ ಮಾಡಬಹುದು’; ಕೇರಳ ಕೋರ್ಟ್​ನಿಂದ ಹೊಸ ಆದೇಶ

ನ್ಯಾಯಮೂರ್ತಿ ಪಿ ಸೋಮರಾಜನ್ ಅವರಿದ್ದ ಏಕಸದಸ್ಯ ಪೀಠ, ವರಾಹ ರೂಪಂ’ ಹಾಡಿಗೆ ಅನುಮತಿ ನೀಡಿ ಆದೇಶಿಸಿದ್ದ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ಡಿಸೆಂಬರ್ 8 ರವರೆಗೆ ತಡೆ ನೀಡಿದೆ. ಅಲ್ಲದೇ ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ನೋಟಿಸ್ ಜಾರಿ ಮಾಡಿದೆ.

ಕಾಂತಾರ’ ಚಿತ್ರದ (Kantara Movie) ‘ವರಾಹ ರೂಪಂ..’ ಹಾಡು ಸದ್ಯ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು, ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ‘ತೈಕ್ಕುಡಂ ಬ್ರಿಡ್ಜ್​’ನವರು ಕೇರಳದ ಕೋಝಿಕೊಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ‘ವರಾಹ ರೂಪಂ..’ ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಈ ವೇಳೆ ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿಯತ್ತು. ಇದನ್ನು ಪ್ರಶ್ನಿಸಿ ತೈಕ್ಕುಡಂ ಬ್ರಿಡ್ಜ್ ಕೇರಳ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಸೋಮರಾಜನ್ ಅವರಿದ್ದ ಪೀಠ, ಕೋಝಿಕೊಡ್ ಜಿಲ್ಲಾ ಆದೇಶವನ್ನು ತಡೆ ಹಿಡಿದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:07 pm, Fri, 2 December 22

ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ಊಟ ಮಾಡುವಾಗ ಮಾತನಾಡಬಾರದು ಯಾಕೆ? ಇಲ್ಲಿದೆ ಆಧ್ಯಾತ್ಮಿಕ ಹಿನ್ನೆಲೆ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ದಿನ ಭವಿಷ್ಯ: ಗುರು ಅನುಗ್ರಹದ ಈ ದಿನ ಯಾವ ರಾಶಿವರಿಗೆಲ್ಲ ಶುಭ ಫಲ ನೋಡಿ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ಬಾಗಲಕೋಟೆಯಲ್ಲಿ ರಸ್ತೆ ಮೇಲೆ ಅಡುಗೆ ಮಾಡಿ ನೇಕಾರರಿಂದ ಪ್ರತಿಭಟನೆ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
ಮೋಕ್ಷಿತಾ ಅಸಲಿ ಆಟ ಶುರು ಮಾಡಿದ್ದಕ್ಕೆ ಉಗ್ರಂ ಮಂಜು ಬ್ಯಾಟರಿ ಡೌನ್?
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
6,6,6,6,4... ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ಹಾರ್ದಿಕ್
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ಇನ್ಮೇಲೆ ಸೆಂಟಿಮೆಂಟ್ ಇಲ್ಲ: ಉಗ್ರಂ ಮಂಜು ವಿರುದ್ಧ ತಿರುಗಿ ಬಿದ್ದ ಮೋಕ್ಷಿತಾ
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ