ಕೆಜಿಎಫ್​-2, ಆರ್​ಆರ್​ಆರ್​ ರಿಲೀಸ್​ ಬಗ್ಗೆ ಹೀಗೊಂದು ಅನುಮಾನ; ಅಭಿಮಾನಿಗಳಿಗೆ ಖುಷಿಯೋ, ಬೇಸರವೋ?

| Updated By: ರಾಜೇಶ್ ದುಗ್ಗುಮನೆ

Updated on: Aug 09, 2021 | 7:03 PM

ಕೊವಿಡ್​ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದ್ದಂತೆ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರ ತೆರೆಯಲಾಗಿದೆ. ಆದರೆ, ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿದೆ.

ಕೆಜಿಎಫ್​-2, ಆರ್​ಆರ್​ಆರ್​ ರಿಲೀಸ್​ ಬಗ್ಗೆ ಹೀಗೊಂದು ಅನುಮಾನ; ಅಭಿಮಾನಿಗಳಿಗೆ ಖುಷಿಯೋ, ಬೇಸರವೋ?
ಯಶ್​ ನಟನೆಯ ‘ಕೆಜಿಎಫ್ 2’ ರಿಲೀಸ್​ ಡೇಟ್​ ಘೋಷಣೆ​ಗೂ ಮುನ್ನವೇ ಆರ್​ಆರ್​ಆರ್​ ತಂಡದಿಂದ ಬಿಗ್​ ನ್ಯೂಸ್​?
Follow us on

ಸ್ಟಾರ್​ ನಟರ ಸಿನಿಮಾಗಳು ರಿಲೀಸ್​ ಆಗದೆ ಹಲವು ತಿಂಗಳು ಕಳೆದಿವೆ. ಕೊವಿಡ್​ ಎರಡನೇ ಅಲೆಗೂ ಮೊದಲು ಕೆಲ ಸಿನಿಮಾಗಳು ರಿಲೀಸ್​ ಆಗಿದ್ದು ಬಿಟ್ಟರೆ, ಆ ನಂತರ ಯಾವುದೇ ದೊಡ್ಡ ಬಜೆಟ್​ ಚಿತ್ರಗಳು ಇತ್ತೀಚೆಗೆ ರಿಲೀಸ್​ ಆಗಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈಗ ಸ್ಟಾರ್​ ನಟರ ಸಿನಿಮಾಗಳಿಗಾಗಿ ಕಾದು ಕೂತ ಸಿನಿಪ್ರಿಯರಿಗೆ ನಿರಾಸೆ ಉಂಟಾಗುವ ಸಾಧ್ಯತೆ ಗೋಚರವಾಗಿದೆ.

ಕೊವಿಡ್​ ಎರಡನೇ ಅಲೆ ನಿಧಾನವಾಗಿ ಕಡಿಮೆ ಆಗುತ್ತಿದ್ದಂತೆಯೇ ಕರ್ನಾಟಕ ಸೇರಿ ಅನೇಕ ರಾಜ್ಯಗಳಲ್ಲಿ ಚಿತ್ರಮಂದಿರ ತೆರೆಯಲಾಗಿದೆ. ಆದರೆ, ಶೇ.50 ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಹೀಗಾಗಿ, ದೊಡ್ಡ ಬಜೆಟ್​ ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕುತ್ತಿವೆ. ಈಗ, ಯಶ್​ ನಟನೆಯ ಕೆಜಿಎಫ್​ ಚಾಪ್ಟರ್​ 2 ಹಾಗೂ ಆರ್​ಆರ್​ಆರ್​ ಸಿನಿಮಾಗಳ ರಿಲೀಸ್​ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಯಶ್​ ನಟನೆಯ ಕೆಜಿಎಫ್​ 2 ಸಿನಿಮಾ ಜುಲೈ ತಿಂಗಳಲ್ಲೇ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್​ ಎರಡನೇ ಅಲೆ ಕರಿ ನೆರಳು ಈ ಸಿನಿಮಾ ಮೇಲೆ ಬಿದ್ದಿತ್ತು. ಕೆಜಿಎಫ್​ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಹೀಗಾಗಿ, ಚಾಪ್ಟರ್​ 2 ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನು, ಈ ಸಿನಿಮಾದ ತಾರಾ ಬಳಗ ಕೂಡ ದೊಡ್ಡದಾಗಿದೆ. ಸಂಜಯ್​ ದತ್​ ಸೇರಿ ಅನೇಕ ಪ್ರಮುಖರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಕಾರಣಕ್ಕೆ ಸಿನಿಮಾ ರಿಲೀಸ್​ ಡೇಟ್​ ಬಗ್ಗೆ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನು, ಆರ್​ಆರ್​ಆರ್​ ಸಿನಿಮಾ ಕೂಡ ದೊಡ್ಡ ತಾರಾ ಬಳಗ ಹೊಂದಿರುವ ಸಿನಿಮಾ. ಆರ್​ಆರ್​ಆರ್​ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​, ರಾಮ್​ ಚರಣ್​, ಅಜಯ್​ ದೇವಗನ್​, ಆಲಿಯಾ ಭಟ್​ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ. ಕೊಮರಾಮ್​ ಭೀಮ್​ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ರಾಮ್​ ಚರಣ್​ ಬಣ್ಣ ಹಚ್ಚುತ್ತಿದ್ದಾರೆ. ಆಲಿಯಾ ಭಟ್​ಗೆ ಸೀತಾ ಎಂಬ ಪಾತ್ರ ನೀಡಲಾಗಿದೆ.  ಈ ಸಿನಿಮಾ ಅಕ್ಟೋಬರ್​ 23ರಂದು ತೆರೆಗೆ ಬರಬೇಕಿದೆ. ಆದರೆ, ಈ ಚಿತ್ರಗಳು ಈ ವರ್ಷ ರಿಲೀಸ್​ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಕೊವಿಡ್​ ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆಯೇ ಮೂರನೇ ಅಲೆ ಬಗ್ಗೆ ಜನರು ಹೆಚ್ಚು ಆತಂಕಗೊಂಡಿದ್ದಾರೆ. ನಿತ್ಯ ಕೊವಿಡ್​ ಪ್ರಕರಣಗಳು ಹೆಚ್ಚುತ್ತಿವೆ. ಅಕ್ಟೋಬರ್​ ತಿಂಗಳಲ್ಲಿ ಕೊವಿಡ್​ ಮೂರನೇ ಅಲೆ ಮಿತಿ ಮೀರಬಹುದು ಎನ್ನಲಾಗುತ್ತಿದೆ. ಈ ಎಲ್ಲಾ ಕಾರಣವನ್ನು ಗಮನದಲ್ಲಿಟ್ಟುಕೊಂಡು ಆರ್​ಆರ್​ಆರ್​ ಹಾಗೂ ಕೆಜಿಎಫ್​ 2 ನಿರ್ಮಾಪಕರು ಹೊಸ ರಿಲೀಸ್​ ಡೇಟ್​ ಘೋಷಣೆ ಮಾಡಬೇಕಿದೆ.

ಇದನ್ನೂ ಓದಿ: ಸಡನ್​ ಆಗಿ ‘ಕಿಚ್ಚು’ ಹೊತ್ತಿಸಿದ ಹೊಂಬಾಳೆ ಫಿಲ್ಮ್ಸ್​; 11ನೇ ಸಿನಿಮಾ ಬಗ್ಗೆ ಕೆಜಿಎಫ್​ ನಿರ್ಮಾಪಕರ ಬ್ರೇಕಿಂಗ್​ ನ್ಯೂಸ್