ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕೆಜಿಎಫ್ ಸಿನಿಮಾ ಮಾಡಿದ ಮ್ಯಾಜಿಕ್ ಒಂದೆರಡಲ್ಲ. ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್ ಮಾತ್ರವಲ್ಲದೆ ಈ ಚಿತ್ರತಂಡದ ಅನೇಕರಿಗೆ ಪರಭಾಷೆಯಲ್ಲಿ ಹೇರಳ ಅವಕಾಶಗಳನ್ನು ತಂದುಕೊಟ್ಟ ಸಿನಿಮಾ ಅದು. ‘ಕೆಜಿಎಫ್: ಚಾಪ್ಟರ್ 1’ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ನಟ ರಾಮ್ ಅಲಿಯಾಸ್ ಗರುಡ ರಾಮ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಪರಭಾಷೆಯ ಸಿನಿಮಾರಂಗಗಳಿಂದ ಅವರಿಗೆ ಬಂಪರ್ ಆಫರ್ಗಳು ಒಲಿದುಬರಲು ಆರಂಭಿಸಿದವು. ಈಗ ಅವರು ಟಾಲಿವುಡ್ನಲ್ಲೂ ವಿಲನ್ ಆಗಿ ಮಿಂಚುತ್ತಿದ್ದಾರೆ.
ಶರ್ವಾನಂದ್ ಮತ್ತು ಸಿದ್ಧಾರ್ಥ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ತೆಲುಗಿನ ‘ಮಹಾ ಸಮುದ್ರಂ’ ಚಿತ್ರದಲ್ಲಿ ರಾಮ್ ಮುಖ್ಯ ವಿಲನ್ ಆಗಿದ್ದಾರೆ. ಅವರಿಗೆ ತುಂಬ ರಗಡ್ ಆದಂತಹ ಪಾತ್ರವನ್ನೇ ನೀಡಲಾಗಿದೆ. ಧನಂಜಯ್ ಎಂಬ ಮಹಾ ರಾಕ್ಷಸನ ರೀತಿಯಲ್ಲಿ ಅವರು ಅಬ್ಬರಿಸಲಿದ್ದಾರೆ. ಆ ಪಾತ್ರದ ಝಲಕ್ ತೋರಿಸಲು ಈಗ ಚಿತ್ರತಂಡ ಅವರ ಫಸ್ಟ್ಲುಕ್ ಬಿಡುಗಡೆ ಮಾಡಿದೆ.
ಕಣ್ಣುಗಳಲ್ಲಿ ಕ್ರೋಧವನ್ನೇ ಉಕ್ಕಿಸುತ್ತ, ಎದುರಾಳಿಯನ್ನು ಸದೆಬಡಿಲು ಹೊರಟಿರುವ ಭಂಗಿಯಲ್ಲಿ ರಾಮ್ ಅವರ ಫಸ್ಟ್ಲುಕ್ ಪೋಸ್ಟರ್ ವಿನ್ಯಾಸಗೊಂಡಿದೆ. ‘ಧನಂಜಯ್ ಎಂಬ ಕ್ರೂರ ಮನುಷ್ಯನಾಗಿ ಗರುಡ ರಾಮ್ ಅವರನ್ನು ಪರಿಚಯಿಸುತ್ತಿದ್ದೇವೆ’ ಎಂಬ ಕ್ಯಾಪ್ಷನ್ನೊಂದಿಗೆ ಎ.ಕೆ. ಎಂಟರ್ಟೇನ್ಮೆಂಟ್ಸ್ ಸಂಸ್ಥೆಯು ಈ ಪೋಸ್ಟರ್ ಬಿಡುಗಡೆ ಮಾಡಿದೆ. ಆ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಲಾಗಿದೆ. ಇಡೀ ಸಿನಿಮಾದಲ್ಲಿ ರಾಮ್ ಹೇಗೆ ನಟಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಕಾತರ ಅಭಿಮಾನಿಗಳಲ್ಲಿ ಹೆಚ್ಚಿದೆ.
Introducing the Violent Man @GarudaRaam as #Dhanunjay ?
The ??????-?????? from #MahaSamudram ?@ImSharwanand @Actor_Siddharth @aditiraohydari @ItsAnuEmmanuel @DirAjayBhupathi @AnilSunkara1 @kishore_Atv @chaitanmusic @Cinemainmygenes @AKentsOfficial @SonyMusicSouth pic.twitter.com/FJpQGPdRxv
— AK Entertainments (@AKentsOfficial) June 26, 2021
‘ಮಹಾ ಸಮುದ್ರಂ’ ಚಿತ್ರಕ್ಕೆ ಅಜಯ್ ಭೂಪತಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಟಾಲಿವುಡ್ನಲ್ಲಿ ರಾಮ್ಗೆ ಮೊದಲ ಸಿನಿಮಾ ಎಂಬುದು ವಿಶೇಷ. ಈ ಸಿನಿಮಾ ರಿಲೀಸ್ ಆದ ಬಳಿಕ ಅವರಿಗೆ ತೆಲುಗು ಅಭಿಮಾನಿಗಳ ಸಂಖ್ಯೆ ಹೆಚ್ಚಲಿದೆ. ಕನ್ನಡ ಮತ್ತು ತಮಿಳಿನಲ್ಲೂ ಅವರು ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ.
ಸದ್ಯ ‘ಮಹಾ ಸಮುದ್ರಂ’ ಚಿತ್ರಕ್ಕೆ ಕೊನೇ ಹಂತದ ಶೂಟಿಂಗ್ ಬಾಕಿ ಇದೆ. ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವುದರಿಂದ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಮರು ಚಾಲನೆ ಸಿಗಲಿದೆ. ಈ ಸಿನಿಮಾದಲ್ಲಿ ನಾಯಕಿಯರಾಗಿ ಅದಿತಿ ರಾವ್ ಹೈದರಿ ಮತ್ತು ಅನು ಇಮ್ಯಾನುಯಲ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:
‘ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ’; ಅಲ್ಲು ಅರ್ಜುನ್ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ
KGF Chapter 2: ಕೆಜಿಎಫ್ 2 ಹೊಸ ರಿಲೀಸ್ ಡೇಟ್ ಬಗ್ಗೆ ಹರಿದಾಡುತ್ತಿದೆ ಗುಸುಗುಸು
Published On - 12:08 pm, Sat, 26 June 21