
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ‘ಮಾರ್ಕ್’ ಸಿನಿಮಾ ಈವೆಂಟ್ನಲ್ಲಿ ಭಾಗಿಯಾದರು. ಹುಬ್ಬಳಿಯ ಬೃಹತ್ ವೇದಿಕೆ ಮೇಲೆ ನಡೆದ ಕಾರ್ಯಕ್ರಮದಲ್ಲಿ ಕಿಚ್ಚನ ಮಾತಿಗಾಗಿ ಎಲ್ಲರೂ ಕಾದಿದ್ದರು. ಸಿನಿಮಾ ಬಗ್ಗೆ ಮಾತನಾವುದುರ ಜೊತೆ ಕಿಚ್ಚ ಅವರು ಆಡಿದ ಒಂದು ಮಾತು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈಗಾಗಲೇ ಚಿತ್ರರಂಗದಲ್ಲಿ ಫ್ಯಾನ್ ವಾರ್ ಜೋರಾಗಿದೆ. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ್ದು ಎಂದು ಹೇಳಲಾಗುತ್ತಾ ಇದೆ. ವಿಜಯಲಕ್ಷ್ಮೀ ಕೂಡ ಕೌಂಟರ್ ಕೊಟ್ಟಿದ್ದಾರೆ. ಹೇಳಿಕೆ ಹಾಗೂ ಪ್ರತಿ ಹೇಳಿಕೆಗಳು ಚರ್ಚೆಯನ್ನು ಹುಟ್ಟುಹಾಕಿವೆ.
ಕಳೆದ ವರ್ಷ ‘ಮ್ಯಾಕ್ಸ್’ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಬಗ್ಗೆ ಸುದೀಪ್ಗೆ ಪ್ರಶ್ನೆ ಮಾಡಲಾಯಿತು. ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಕೂಲ್ ಆಗೇ ಉತ್ತರಿಸಿದ್ದರು. ‘ನನ್ನ ಮತ್ತು ದರ್ಶನ್ ನಡುವೆ ಯಾವುದೇ ಸಮಸ್ಯೆ ಇಲ್ಲ. ದರ್ಶನ್ ಕಷ್ಟಪಟ್ಟು ಮೇಲೆ ಬಂದಿದ್ದಾರೆ’ ಎಂದಿದ್ದರು ಕಿಚ್ಚ. ಅಲ್ಲದೆ, ‘ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ’ ಎಂದು ಒಗ್ಗಟ್ಟಿನ ಮಾತು ಆಡಿದ್ದರು.
ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಪ್ರೀ ರಿಲೀಸ್ ಈವೆಂಟ್ ಅಲ್ಲಿ ಸಾವಿರಾರು ಜನರು ಸೇರಿದ್ದರು. ಈ ವೇಳೆ ಕಿಚ್ಚ ಅವರು ರೊಚ್ಚಿಗೆದ್ದು ಮಾತನಾಡಿದರು. ‘ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಅಂತೆಯೇ ಡಿಸೆಂಬರ್ 25ನೇ ತಾರೀಕಿಗೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ, ಏಕೆಂದರೆ ನಾವು ನಮ್ಮ ಮಾತಿಗೆ ಬದ್ಧ’ ಎಂದಿದ್ದರು ಸುದೀಪ್.
ಇದನ್ನೂ ಓದಿ: ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ
ಸುದೀಪ್ ಈ ರೀತಿ ಮಾತನಾಡಲು ಕಾರಣ ಏನಿರಬಹುದು ಎಂಬ ಚರ್ಚೆ ಶುರುವಾಗಿದೆ. 2019ರಲ್ಲಿ ‘ಪೈಲ್ವಾನ್’ ಸಿನಿಮಾ ರಿಲೀಸ್ ಆದ ಬಳಿಕ ಕೆಲವರು ಇದನ್ನು ಪೈರಸಿ ಮಾಡಿದ್ದರು. ಈ ಪೈರಸಿಯಿಂದ ಸಿನಿಮಾಗೆ ಸಾಕಷ್ಟು ತೊಂದರೆ ಆಯಿತು. ದೂರು ನೀಡಿ ಕೆಲವರನ್ನು ಅರೆಸ್ಟ್ ಕೂಡ ಮಾಡಿಸಲಾಯಿತು. ಈ ಬಾರಿಯೂ ಸುದೀಪ್ಗೆ ಈ ರೀತಿಯ ಸೂಚನೆ ಏನಾದರೂ ಸಿಕ್ಕಿದೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕಾಗಿ ಸುದೀಪ್ ಆ ರೀತಿ ಹೇಳಿರಬಹದು ಎಂದು ಅರ್ಥೈಸಲಾಗುತ್ತಿದೆ. ಇದಕ್ಕೆ ಸುದೀಪ್ ಅವರೇ ಸ್ಪಷ್ಟನೆ ಕೊಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.