‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ

ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದಿದ್ದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದ್ದರು.

‘ಶ್ರುತಿ ತಪ್ತಾ ಇದೀರಿ, ಇದು ಕೋಲ್ಡ್​ ಬ್ಲಡ್ಡೆಡ್​’; ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ
ಪ್ರಶಾಂತ್​-ಕಿಚ್ಚ ಸುದೀಪ್​
Updated By: ಮದನ್​ ಕುಮಾರ್​

Updated on: Jul 04, 2021 | 7:51 AM

ನಟಿ ದಿವ್ಯಾ ಸುರೇಶ್​ ‘ಡಿಗ್ರೀ ಕಾಲೇಜ್’​ ಹೆಸರಿನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕೆಲವು ಇಂಟಿಮೇಟ್​ ದೃಶ್ಯಗಳಿದ್ದವು. ಈ ವಿಚಾರ ಇಟ್ಟುಕೊಂಡು ಬಿಗ್ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ನಿರಂತರವಾಗಿ ದಿವ್ಯಾಗೆ ಟಾಂಗ್​ ನೀಡಿದ್ದರು. ಈ ಬಗ್ಗೆ ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.

‘ಪ್ರಶಾಂತ್​-ಚಕ್ರವರ್ತಿ ಚಂದ್ರಚೂಡ್​ ಯಾವಾಗಲೂ ನನ್ನ ಹಿಂದೆ ಇರುತ್ತಿದ್ದರು. ಹೀಗಾಗಿ, ಅವರೇನು ನಿನ್ನ ಸೆಕ್ಯುರಿಟಿ ಗಾರ್ಡ್​ಗಳಾ ಎಂದು ನನ್ನ ಅಮ್ಮ ಪ್ರಶ್ನೆ ಮಾಡಿದ್ದರು’ ಎಂಬುದಾಗಿ ದಿವ್ಯಾ ಸುರೇಶ್​ ಕಳೆದ ವಾರದ ಎಪಿಸೋಡ್​ನಲ್ಲಿ ಹೇಳಿಕೊಂಡಿದ್ದರು. ಈ ವಿಚಾರದಲ್ಲಿ ಸೇಡು ತೀರಿಸಿಕೊಳ್ಳೋಕೆ ಪ್ರಶಾಂತ್​ ಮುಂದಾಗಿದ್ದರು.

ಎಪಿಸೋಡ್​ ಒಂದರಲ್ಲಿ ಪ್ರಶಾಂತ್​ ಟೀ ಶರ್ಟ್​ ಧರಿಸಿದ್ದರು. ಇದನ್ನು ನೋಡಿದ ಚಕ್ರವರ್ತಿ ಚಂದ್ರಚೂಡ್​ ‘ನೀನು ಕಾಲೇಜು ಹುಡುಗನಂತೆ ಕಾಣ್ತೀಯಾ’ ಎಂದರು. ಏನು ಡಿಗ್ರೀ ಕಾಲೇಜು ಹುಡುಗನ ತರಹವಾ ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಈ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟಿದ್ದರು. ಇದಾದ ನಂತರದಲ್ಲಿ, ದಿವ್ಯಾ ಉರುಡುಗ ಬಳಿ ತೆರಳಿದ್ದ ಪ್ರಶಾಂತ್​, ‘ನೀ ನಟಿಸಿದ ‘ಹುಲಿರಾಯ’ ಸಿನಿಮಾ ಯಾವಾಗ ರಿಲೀಸ್​ ಆಗಿತ್ತು? ಆ ಸಿನಿಮಾ ಬಗ್ಗೆ ಮಾತನಾಡಿದರೆ ನಿನಗೇನಾದರೂ ಹರ್ಟ್​ ಆಗುತ್ತದೆಯೇ’ ಎಂದು ಪ್ರಶ್ನೆ ಮಾಡುವ ಮೂಲಕ ದಿವ್ಯಾಗೆ ಟಾಂಗ್​ ಕೊಟ್ಟರು. ಇದು ಇಡೀ ವಾರ ಮನೆಯಲ್ಲಿ ನಡೆದೇ ಇತ್ತು.

ವಾರದ ಪಂಚಾಯ್ತಿಯಲ್ಲಿ ಸುದೀಪ್​ ಈ ವಿಚಾರವನ್ನು ಚರ್ಚೆಗೆ ತಂದರು. ‘45 ವರ್ಷಗಳಲ್ಲಿ ನಾನಾ ಜವಾಬ್ದಾರಿ ನಿಭಾಯಿಸಿದ್ದೀರಿ. ನೀವು ಮಾಡಿದ ಕೆಲಸದ ಬಗ್ಗೆ ಮುಜುಗರ ಆಗಿದ್ಯಾ?’ ಎಂದು ಪ್ರಶಾಂತ್​ರನ್ನು ಸುದೀಪ್​ ಕೇಳಿದರು. ಇದಕ್ಕೆ ಪ್ರಶಾಂತ್​ ಕಡೆಯಿಂದ ‘ಆಗಿದೆ’ ಎನ್ನುವ ಉತ್ತರ ಬಂತು.

‘ನಾನು ಸಾಕಷ್ಟು ಸಿನಿಮಾ ಮಾಡಿದೀನಿ. ಎಲ್ಲಾ ಸಿನಿಮಾ ಹಿಟ್​ ಆಗಲ್ಲ. ಆದ್ರೆ, ಎಲ್ಲದರಲ್ಲೂ ಒಂದಷ್ಟು ವಿಚಾರ ಸಿಕ್ಕಿರತ್ತೆ. ಪಿನ್​ ಮಾಡಿ ಹೇಳೋದು ತಪ್ಪು. ನೋವು ಮಾಡುವ ಉದ್ದೇಶದಿಂದಲೇ ಮಾಡಿದ್ರೆ ಅದು ಮಹಾ ತಪ್ಪು. ಹೀಟ್​ ಆಫ್​ ದಿ ಮೂಮೆಂಟ್​ ಎನ್ನುವ ಮಾತಿದೆ. ಆದರೆ, ಇದು ಕೋಲ್ಡ್​ ಬ್ಲಡೆಡ್​. ಶ್ರುತಿ ತಪ್ತಾ ಇದೀರಿ. ನಾನು ಶ್ರುತಿ ಸರಿ ಮಾಡ್ತಾ ಇದೀನಿ’ ಎಂದು ಪ್ರಶಾಂತ್​ಗೆ ಸುದೀಪ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:

ಬಿಗ್​ ಬಾಸ್ ಮನೆಯಲ್ಲಿ ಒಟ್ಟೊಟ್ಟಿಗೆ ಅತ್ತ ಪ್ರಶಾಂತ್​-ಚಕ್ರವರ್ತಿ, ಮಂಜು-ದಿವ್ಯಾ; ಇದೆಂಥ ಋಣಾನುಬಂಧ

ಹೆಗಲಮೇಲೆ ಕೈ ಹಾಕಲು ಬಂದ ಪ್ರಶಾಂತ್​ರನ್ನು ಸಿಟ್ಟಿನಿಂದ ತಳ್ಳಿದ ಚಕ್ರವರ್ತಿ; ಇಬ್ಬರ ನಡುವೆ ಮೂಡಿತು ವೈಮನಸ್ಸು