Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

|

Updated on: May 09, 2021 | 12:54 PM

Sonu Patil: ಶೂಟಿಂಗ್ ಇಲ್ಲದ ಕಾರಣ ನನ್ನ ಕೈಯಲ್ಲಿ ದುಡ್ಡು ಇಲ್ಲ. ಸಹಾಯ ಮಾಡಿ ಎಂದು ತುಂಬ ಜನರನ್ನು ಕೇಳಿದೆ. ಎಲ್ಲರೂ ಆಶ್ವಾಸನೆ ಕೊಟ್ಟರೇ ಹೊರತು ಸಹಾಯ ಮಾಡಲಿಲ್ಲ. ಆದರೆ ನನಗೆ ಕೊನೆಯಲ್ಲಿ ನೆನಪಾಗಿದ್ದು ಸುದೀಪ್​ ಸರ್​ ಎಂದು ಸೋನು ಪಾಟೀಲ್​ ಹೇಳಿದ್ದಾರೆ.

Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​
ಕಿಚ್ಚ ಸುದೀಪ್​ - ಸೋನು ಪಾಟೀಲ್​
Follow us on

ಕಳೆದ 8 ಸೀಸನ್​ಗಳಿಂದಲೂ ನಟ ಕಿಚ್ಚ ಸುದೀಪ್​ ಅವರು ಕನ್ನಡ ಬಿಗ್​ ಬಾಸ್​ನ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ. ಅಲ್ಲದೆ, ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳ ಜೊತೆಗೆ ಅವರಿಗೆ ಒಂದು ಬಗೆಯ ಬಾಂಧವ್ಯ ಬೆಳೆದಿದೆ. ಇನ್ನು, ಸಹಾಯ ಕೇಳಿಕೊಂಡು ಬಂದವರಿಗೆ ತಮ್ಮ ಕೈಲಾದ ನೆರವನ್ನು ನೀಡುವುದು ಸುದೀಪ್​ ಜಾಯಮಾನ. ಈಗ ಅವರು ಬಿಗ್ ಬಾಸ್​ ಸೀಸನ್​ 6ರ ಸ್ಪರ್ಧಿ ಸೋನು ಪಾಟೀಲ್​ಗೆ ಸಹಾಯ ಮಾಡಿದ್ದಾರೆ. ಸೋನು ಪಾಟೀಲ್​ ಅವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದು, ಅವರ ಚಿಕಿತ್ಸೆಗೆ ಸುದೀಪ್​ ಲಕ್ಷಾಂತರ ರೂಪಾಯಿ ನೀಡಿದ್ದಾರೆ.

ಈ ವಿಷಯವನ್ನು ವಿಡಿಯೋ ಮೂಲಕ ಸ್ವತಃ ಸೋನು ಪಾಟೀಲ್​ ಹೇಳಿಕೊಂಡಿದ್ದಾರೆ. ‘ನನ್ನ ತಾಯಿಗೆ ಐದಾರು ದಿನದಿಂದ ಆರಾಮಿಲ್ಲ. ಬಾಗಲಕೋಟೆ ಶಕುಂತಲಾ ಆಸ್ಪತ್ರೆಯಲ್ಲಿ ಅವರನ್ನು ಅಡ್ಮಿಟ್​ ಮಾಡಿದ್ದೇವೆ. ಅವರಿಗೆ ನ್ಯುಮೋನಿಯಾ ಆಗಿದೆ. ಶುಗರ್​ ಜಾಸ್ತಿ ಆಗಿದೆ. ಬಿಪಿ ಸಮಸ್ಯೆ ಕೂಡ ಇದೆ. ನನ್ನ ಕೈಯಲ್ಲಿ ದುಡ್ಡು ಇಲ್ಲ. ತಾಯಿನ ಉಳಿಸಿಕೊಳ್ಳೋದು ಹೇಗೆ ಅಂತ ಗೊತ್ತಾಗಲಿಲ್ಲ. 5-10 ಸಾವಿರ ಆಗಿದ್ದರೆ ನಾನು ತುಂಬಬಹುದಿತ್ತು’ ಎಂದು ಸೋನು ಹೇಳಿದ್ದಾರೆ.

‘ಶೂಟಿಂಗ್ ಇಲ್ಲದ ಕಾರಣ ನನ್ನ ಕೈಯಲ್ಲಿ ದುಡ್ಡು ಇಲ್ಲ. ಸಹಾಯ ಮಾಡಿ ಎಂದು ತುಂಬ ಜನರನ್ನು ಕೇಳಿದೆ. ಎಲ್ಲರೂ ಆಶ್ವಾಸನೆ ಕೊಟ್ಟರೇ ಹೊರತು ಸಹಾಯ ಮಾಡಲಿಲ್ಲ. ಆದರೆ ನನಗೆ ಕೊನೆಯಲ್ಲಿ ನೆನಪಾಗಿದ್ದು ಸುದೀಪ್​ ಸರ್​. ಬಿಗ್ ಬಾಸ್​ ಸ್ಪರ್ಧಿಗಳೆಲ್ಲ ನನ್ನ ಫ್ಯಾಮಿಲಿ ಎಂದು ಅವರು ಆಗ ಹೇಳುತ್ತಿದ್ದರು. ನಾನು ಅವರಿಗೆ ತಾಯಿಯ ಅನಾರೋಗ್ಯದ ವಿಷಯ ತಿಳಿಸಿದೆ. ಒಂದು ಮರುಮಾತು ಕೂಡ ಹೇಳದೆ, ಚಿಂತೆ ಮಾಡಬೇಡಿ ಎಂದರು. ನಮಗೆ ಒಂದು ರೂಪಾಯಿ ಕೂಡ ಕೊಡಲು ಬಿಡದೇ, ತಾಯಿ ಚಿಕಿತ್ಸೆಯ ಲಕ್ಷಾಂತರ ರೂಪಾಯಿಯನ್ನು ಸುದೀಪ್​ ಅಣ್ಣ ಕಟ್ಟಿದ್ದಾರೆ. ಅವರ ಋಣ ಹೇಗೆ ತೀರಿಸಲಿ ಎಂದು ನನಗೆ ಗೊತ್ತಾಗುತ್ತಿಲ್ಲ’ ಎಂದು ಸೋನು ಭಾವುಕರಾಗಿ ಮಾತನಾಡಿದ್ದಾರೆ.

‘ಧನ್ಯವಾದಗಳು ಅಣ್ಣ. ಯಾಕೆಂದರೆ ಈ ಸಮಯದಲ್ಲಿ ದುಡ್ಡು ಹೊಂದಿಸುವುದು ನಮಗೆ ಬಹಳ ಕಷ್ಟ ಆಗುತ್ತಿತ್ತು. ನನಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಸಾಯುವವರೆಗೆ ನಿಮ್ಮ ಋಣವನ್ನು ಮರೆಯುವುದಿಲ್ಲ. ಇವತ್ತಿನ ಸಂದರ್ಭದಲ್ಲಿ ಯಾರ ಬಳಿಯೂ ದುಡ್ಡು ಇಲ್ಲ. ದುಡ್ಡು ಇದ್ದವರು ಕೊಡಲು ಮುಂದೆ ಬರುವುದಿಲ್ಲ. ಎಲ್ಲರೂ ಕೈಬಿಟ್ಟರೂ ಸುದೀಪ್​ ಅಣ್ಣ ನಮ್ಮ ಕೈ ಬಿಡಲಿಲ್ಲ. ಫ್ಯಾಮಿಲಿ ಎಂದು ಹೇಳಿದ್ದರು. ಇಂದಿಗೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ನನಗೆ ಮಾತ್ರವಲ್ಲ, ಕೊವಿಡ್​ ಸಂದರ್ಭದಲ್ಲಿ ಕಷ್ಟಪಡುತ್ತಿರುವ ಅನೇಕರಿಗೆ ಸುದೀಪ್​ ಚಾರಿಟೆಬಲ್​ ಟ್ರಸ್ಟ್​ನಿಂದ ಸಹಾಯ ಮಾಡುತ್ತಿದ್ದಾರೆ. ನನ್ನ ಆಯಷ್ಯವನ್ನೂ ಆ ದೇವರು ನಿಮಗೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಅಣ್ಣ’ ಎಂದು ಸೋನು ಪಾಟೀಲ್​ ಹೇಳಿದ್ದಾರೆ.

ಇದನ್ನೂ ಓದಿ:

Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​

ಪ್ರಭಾಸ್​, ಸೈಫ್​ ಅಲಿ ಖಾನ್​ ನಟನೆಯ ಆದಿಪುರುಷ್​ ಸಿನಿಮಾದಲ್ಲಿ ಕಿಚ್ಚ ಸುದೀಪ್​ಗೆ ಯಾವ ಪಾತ್ರ?