Kichcha Sudeep: ಈ ವಾರ ಬಿಗ್ ಬಾಸ್ ನಡೆಸಿಕೊಡೋಕೆ ಕಿಚ್ಚ ಸುದೀಪ್ ಬರ್ತಾರಾ? ಇಲ್ಲಿದೆ ಉತ್ತರ
ಕಿಚ್ಚ ಸುದೀಪ್ಗೆ ಅನಾರೋಗ್ಯ ಕಾಡಿದ ಕಾರಣ ಎರಡು ವಾರ ಅವರು ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಕಳೆದ ವಾರ ಅವರು ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದರು.
ವಾರಂತ್ಯದಲ್ಲಿ ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ವೀಕ್ಷಕರನ್ನು ರಂಜಿಸುತ್ತಿದ್ದರು. ಆದರೆ, ಕಳೆದ ಮೂರು ವಾರಗಳಿಂದ ಅವರು ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ವಾರ ಸುದೀಪ್ ಬಿಗ್ ಬಾಸ್ ವೇದಿಕೆ ಏರಲಿದ್ದಾರೆಯೇ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಿಚ್ಚ ಸುದೀಪ್ಗೆ ಅನಾರೋಗ್ಯ ಕಾಡಿದ ಕಾರಣ ಎರಡು ವಾರ ಅವರು ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಕಳೆದ ವಾರ ಅವರು ಬಿಗ್ ಬಾಸ್ ನಡೆಸಿಕೊಡಲಿದ್ದಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ‘ಸದ್ಯ ಇರುವ ಸಂಕಷ್ಟದ ಸನ್ನಿವೇಶದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರ ಜೊತೆಯಲ್ಲಿ ನಡೆಯಬೇಕಿದ್ದ ವಾರಾಂತ್ಯದ ಪಂಚಾಯ್ತಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಈ ವಾರವೂ ಬಿಗ್ ಬಾಸ್ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಅವರ ಉಪಸ್ಥಿತಿ ಇರುವುದಿಲ್ಲ’ ಎಂದು ಕಲರ್ಸ್ ಕನ್ನಡ ವಾಹಿನಿ ಹೇಳಿಕೊಂಡಿತ್ತು. ಅಂತೆಯೇ ಈ ವಾರವೂ ಕಿಚ್ಚ ಬಿಗ್ ಬಾಸ್ ವೇದಿಕೆ ಏರೋದು ಅನುಮಾನವೇ.
ಕೊರೊನಾ ವೈರಸ್ ಮಿತಿ ಮೀರಿ ಹರಡುತ್ತಿದೆ. ಹೀಗಾಗಿ, ಶೂಟಿಂಗ್ಗೆ ಬ್ರೇಕ್ ಹಾಕಲು ಸೂಚನೆ ನೀಡಲಾಗಿದೆ. ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿ ಶೂಟಿಂಗ್ಗಳು ಮೇ 24ರವರೆಗೆ ಸ್ಥಗಿತಗೊಳ್ಳಲಿದೆ. ಹೀಗಾಗಿ, ಅಲ್ಲಿಯವರೆಗೂ ಸುದೀಪ್ ಬಿಗ್ ಬಾಸ್ ವೇದಿಕೆ ಏರುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಮುಂದಿರುವ ಆಯ್ಕೆಗಳು
ಕಳೆದ ವಾರ ಬಿಗ್ ಬಾಸ್ ಮನೆಮಂದಿಯ ಜತೆ ಕಣ್ಮಣಿ ಮಾತನಾಡಿದ್ದಳು. ಈ ವಾರ ಕಣ್ಮಣಿಯಂತೆ ಕಿಚ್ಚ ಸುದೀಪ್ ಮಾತುಕತೆ ನಡೆಸಬಹುದು. ಸುದೀಪ್ ಜತೆ ಮಾತನಾಡದೇ ಬೇಸರಗೊಂಡಿರುವ ಮನೆ ಮಂದಿಗೆ ಇದು ಹೊಸ ಹುರುಪು ನೀಡಬಹುದು. ಅವರನ್ನು ನೋಡಲಾಗದ್ದರೂ ಧ್ವನಿ ಕೇಳಿತಲ್ಲ ಎನ್ನುವ ಖುಷಿ ಸ್ಪರ್ಧಿಗಳಿಗೆ ಮೂಡಬಹುದು.
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುದೀಪ್ ವಾಯ್ಸ್ನೋಟ್ ಒಂದನ್ನು ಕಳುಹಿಸಿದ್ದರು. ಈ ವಾಯ್ಸ್ ನೋಟ್ನಲ್ಲಿ ಸುದೀಪ್ ಎಲ್ಲಾ ಸ್ಪರ್ಧಿಗಳಿಗೆ ಒಂದಷ್ಟು ಬುದ್ಧಿವಾದ ಹೇಳಿದ್ದರು. ಈ ವಾರವೂ ಕಿಚ್ಚನ ಕಡೆಯಿಂದ ಅದೇ ರೀತಿ ವಾಯ್ಸ್ನೋಟ್ ಬರಬಹುದು.
ಕಳೆದ ವಾರದಂತೆ ಈ ವಾರವೂ ಸ್ಪರ್ಧಿಗಳ ಜತೆ ಕಣ್ಮಣಿಯೇ ಮಾತನಾಡಬಹುದು. ಕಣ್ಮಣಿ ಜತೆ ಮಾತನಾಡಿದ ನಂತರ ಸ್ಪರ್ಧಿಗಳಿಗೆ ಹೊಸ ಹುಮ್ಮಸ್ಸು ಬಂದಿತ್ತು. ಬಿಗ್ ಬಾಸ್ ಮನೆಯಲ್ಲಿ ಯಾವ ಆಯ್ಕೆ ಇರಲಿದೆ ಎನ್ನುವುದಕ್ಕೆ ಮೇ 8 ಹಾಗೂ 9ರ ಶೋನಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: Bigg Boss 8: ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಮಾಧ್ಯಮದವರಿಗೆ ಸಂದರ್ಶನ ಕೊಡಲ್ಲ; ಶುಭಾ ಹೀಗೆ ಹೇಳಿದ್ದೇಕೆ?