ಉತ್ತರದವರಾದರೂ ಮೊನಾಲಿಸಾ ಕೇರಳದಲ್ಲಿ ಮದುವೆ ಆಗಿದ್ದೇಕೆ? ಮೊಹಮ್ಮದ್ ಫರ್ಮಾನ್ ಹಿನ್ನೆಲೆ ಏನು?

ಕುಂಭಮೇಳ ಖ್ಯಾತಿಯ ನಟಿ ಮೊನಾಲಿಸಾ ಭೋಸ್ಲೆ ಕುಟುಂಬದ ವಿರೋಧದ ನಡುವೆಯೂ ಮೊಹ್ಮದ್ ಫರ್ಮಾನ್ ಅವರನ್ನು ಕೇರಳದಲ್ಲಿ ವಿವಾಹವಾಗಿದ್ದಾರೆ. ಅಂತರ್ಧರ್ಮೀಯ ಪ್ರೇಮಕ್ಕೆ ಸಿಕ್ಕ ರಾಜಕೀಯ ಬೆಂಬಲದೊಂದಿಗೆ ತಿರುವನಂತಪುರಂನ ದೇವಸ್ಥಾನದಲ್ಲಿ ಇವರ ಮದುವೆ ನಡೆದಿದೆ. ಮನೆಯವರ ಒತ್ತಾಯದ ಮದುವೆಯಿಂದ ತಪ್ಪಿಸಿಕೊಳ್ಳಲು ಮೊನಾಲಿಸಾ ಪ್ರಿಯಕರನೊಂದಿಗೆ ಕೇರಳಕ್ಕೆ ತೆರಳಿದ್ದರು.

ಉತ್ತರದವರಾದರೂ ಮೊನಾಲಿಸಾ ಕೇರಳದಲ್ಲಿ ಮದುವೆ ಆಗಿದ್ದೇಕೆ? ಮೊಹಮ್ಮದ್ ಫರ್ಮಾನ್ ಹಿನ್ನೆಲೆ ಏನು?
ಮೊನಾಲಿಸಾ-ಫರ್ಮಾನ್

Updated on: Mar 12, 2026 | 7:10 AM

ಕುಂಭ ಮೇಳದಲ್ಲಿ ಮಿಂಚಿ ಆಲ್ಬಂ ವಿಡಿಯೋ ಸಾಂಗ್ ಹಾಗೂ ಸಿನಿಮಾ ಆಫರ್ ಪಡೆದ ಮೊನಾಲಿಸಾ ಭೋಸ್ಲೆ  (Monalisa) ಅವರು ಈಗ ಸುದ್ದಿಯಲ್ಲಿದ್ದಾರೆ. ಕುಟುಂಬದ ವಿರೋಧದ ನಡುವೆಯೂ ಅವರು ವೈವಾಹಿಕ ಜೀವನಕ್ಕೆ ಕಾಲಿಟಟಿದ್ದಾರೆ. ಮೊಹ್ಮದ್ ಫರ್ಮಾನ್ ಜೊತೆ ಅವರ ವಿವಾಹ ನಡೆದಿದೆ. ಈ ಮದುವೆಗೆ ಮೊನಾಲಿಸಾ ಕುಟುಂಬದವರು ಸಾಕಷ್ಟು ವಿರೋಧ ಹೊರ ಹಾಕಿದ್ದರು. ಮನೆಯವರನ್ನು ಧಿಕ್ಕರಿಸಿ ಮೊನಾಲಿಸಾ ದೇವಸ್ಥಾನದಲ್ಲಿ ವಿವಾಹ ಆಗಿದ್ದಾರೆ. ಅದು ಕೂಡ ಕೇರಳದ ತಿರುವನಂತಪುರದಲ್ಲಿ ಅನ್ನೋದು ವಿಶೇಷ.

ಮೊನಾಲಿಸಾ ಇಂದೋರ್​​ ಅವರು. ಮೊಹಮ್ಮದ್ ಫರ್ಮಾನ್ ಅವರು ಮಹಾರಾಷ್ಟ್ರದವರು. ಇವರ ಪರಿಚಯ ಸಿನಿಮಾ ಸೆಟ್ ಅಲ್ಲಿ ಆಯಿತು. ಮೊಹ್ಮದ್ ಕೂಡ ಚಿತ್ರರಂಗದಲ್ಲಿದ್ದಾರೆ. ಇಬ್ಬರು ಸಾಕಷ್ಟು ಕ್ಲೋಸ್ ಆದರು. ಆರು ತಿಂಗಳಲ್ಲಿ ನಮಗೆ 60 ವರ್ಷಗಳ ಬಾಂಧವ್ಯ ಬೆಳೆದಿದೆ ಎಂದೆನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇಬ್ಬರದ್ದೂ ಬೇರೆ ಬೇರೆ ರಾಜ್ಯ. ಇವರಿಗೂ ಕೇರಳಕ್ಕೂ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ ಇವರು ಕೇರಳಕ್ಕೆ ಬಂದು ಮದುವೆ ಆಗಲು ಒಂದು ಕಾರಣ ಇದೆ.

ಕೇರಳದ ಪೂವಾರ್ ಬಳಿಯ ಅರುಮನೂರ್ ದೇವಸ್ಥಾನದಲ್ಲಿ ಇವರ ಮದುವೆ ನಡೆದಿದೆ. ಕೇರಳ ಎಂದರೆ ಇಬ್ಬರಿಗೂ ಇಷ್ಟವಂತೆ. ಅಲ್ಲಿ ಸೌಂದರ್ಯ ಹಾಗೂ ಸುರಕ್ಷತೆಗೆ ಇವರು ಮಾರುಹೋದರಂತೆ. ವಿಶೇಷ ಎಂದರೆ ಇವರ ವಿವಾಹಕ್ಕೆ ಕೇರಳದ ಅನೇಕ ರಾಜಕೀಯ ಗಣ್ಯರೇ ಬೆಂಬಲ ನೀಡಿದರು. ವಿವಾಹಕ್ಕೆ ಕೇರಳದ ಸಚಿವ ವಿ. ಶಿವನ್​ಕುಟ್ಟಿ, ಸಂಸದ ರಹೀಮ್ ಸೇರಿ ಅನೇಕರು ಭಾಗಿ ಆದರು. ಹೀಗಾಗಿ ಇವರ ಮದುವೆಗೆ ಯಾವುದೇ ತೊಂದರೆ ಆಗಿಲ್ಲ.

ಇದನ್ನೂ ಓದಿ: ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ ಮೊನಾಲಿಸಾ

ಇನ್ನು, ಮೊನಾಲಿಸಾ ತಂದೆಗೆ ಈ ವಿವಾಹ ಇಷ್ಟ ಇರಲಿಲ್ಲ. ಈ ಕಾರಣಕ್ಕೆ ಮಗಳನ್ನು ಬೇರೆಯವರ ಜೊತೆ ಒತ್ತಾಯಪೂರ್ವಕವಾಗಿ ವಿವಾಹ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಮೊನಾಲಿಸಾ ಬಾಯ್​​ಫ್ರೆಂಡ್ ಜೊತೆ ಕೇರಳಕ್ಕೆ ಓಡಿ ಬಂದಿದ್ದಾರೆ. ಅವರಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:09 am, Thu, 12 March 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us