Lakshana Serial: ಶ್ವೇತಾಳ ದುರಾಸೆಗೆ ತುಕರಾಮ್ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಬಂದಿದೆ, ತುಕರಾಮ್ ಕುಟುಂಬಕ್ಕೆ ಆಸರೆ ಯಾರು?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2022 | 5:52 PM

ಸ್ನೇಹಿತೆಯ ಮಾತಿನಿಂದ ಪ್ರೇರಣೆಗೊಂಡ ತಾನು ಶ್ರೀಮಂತಳಾಗಬೇಕು ಎಂದುಕೊಂಡ ಶ್ವೇತಾ ಐವತ್ತು ಲಕ್ಷ ಹಣವನ್ನು ಹೊಂದಿಸುವ ಸಲುವಾಗಿ ಮನೆಯನ್ನೇ ಮಾರುವ ಯೋಜನೆಯನ್ನು ಹಾಕುತ್ತಾಳೆ.

Lakshana Serial: ಶ್ವೇತಾಳ ದುರಾಸೆಗೆ ತುಕರಾಮ್ ಕುಟುಂಬ ಬೀದಿಗೆ ಬರುವ ಪರಿಸ್ಥಿತಿ ಬಂದಿದೆ, ತುಕರಾಮ್ ಕುಟುಂಬಕ್ಕೆ ಆಸರೆ ಯಾರು?
Lakshana Serial
Follow us on

ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸ್ನೇಹಿತೆಯ ಮಾತಿನಿಂದ ಪ್ರೇರಣೆಗೊಂಡ ತಾನು ಶ್ರೀಮಂತಳಾಗಬೇಕು ಎಂದುಕೊಂಡ ಶ್ವೇತಾ ಐವತ್ತು ಲಕ್ಷ ಹಣವನ್ನು ಹೊಂದಿಸುವ ಸಲುವಾಗಿ ಮನೆಯನ್ನೇ ಮಾರುವ ಯೋಜನೆಯನ್ನು ಹಾಕುತ್ತಾಳೆ. ಈಕೆಯ ಈ ಕುತಂತ್ರಕ್ಕೆ ಮಿಲ್ಲಿಯ ಸಹಾಯವನ್ನು ತೆಗೆದುಕೊಂಡು ಮನೆಯನ್ನು ತನ್ನ ಹೆಸರಿಗೆ ಮಾಡುವ ಹಾಗೆ ದೊಡ್ಡ ನಾಟಕವನ್ನು ಮಾಡುತ್ತಾಳೆ. ಹೆಂಡತಿ ಮತ್ತು ಹಿರಿ ಮಗಳಾದ ಸೃಷ್ಠಿಯ ಮಾತನ್ನು ಮೀರಿ ಮನೆಯನ್ನು ಶ್ವೇತಾಳ ಹೆಸರಿಗೆ ಮಾಡುತ್ತೇನೆ ಎಂದು ಪಣ ತೊಟ್ಟು ನಿಲ್ಲುತ್ತಾನೆ ತುಕರಾಮ್.

ಈ ಘಟನೆ ನಡೆದ ಮಾರನೆಯ ದಿನ ಬೆಳಗ್ಗೆನೇ ಲಾಯರ್ ತುಕರಾಮ್ ಮನೆಗೆ ಬರುತ್ತಾರೆ. ಲಾಯರ್‌ನ ಕಂಡು ಮನೆಯವರು ಶಾಕ್ ಆಗುತ್ತಾರೆ. ಆಗ ಶ್ವೇತಾ, ಅವರನ್ನು ನಾನೇ ಕರೆಸಿದ್ದು, ಅವರು ನನಗೆ ಮೊದಲೇ ಪರಿಚಯ, ತುಂಬಾ ಒಳ್ಳೆಯ ಲಾಯರ್ ಅಂತೆಲ್ಲಾ ಹೇಳುತ್ತಾಳೆ. ನಂತರ ಮನೆಯನ್ನು ಶ್ವೇತಾಳ ಹೆಸರಿಗೆ ಮಾಡುವ ಪ್ರೋಸಿಜರ್ ನಡೆಯುತ್ತದೆ.

ಮನೆ ತನ್ನ ಹೆಸರಿಗೆ ಆದ ಕೂಡಲೇ ನವರಾತ್ರಿಯ ಶುಭ ದಿನದಂದೆ ಮನೆಯನ್ನು ಬೇರೊಬ್ಬರಿಗೆ ಮಾರುವ ತಯಾರಿ ನಡೆಸುತ್ತಾಳೆ ಶ್ವೇತಾ. ಒಬ್ಬ ವ್ಯಕ್ತಿಯ ಬಳಿ ಹೋಗಿ ಮನೆ ಪತ್ರವನ್ನು ಕೊಟ್ಟು ಐವತ್ತು ಲಕ್ಷ ಹಣವನ್ನು ಪಡೆಯುತ್ತಾಳೆ. ಅತ್ತ ಕಡೆ ಶ್ವೇತಾಳ ಈ ಕುತಂತ್ರದ ಅರಿವೇ ಇರದ ಮನೆಯವರು ನವರಾತ್ರಿಗೆ ಗೊಂಬೆ ಕೂರಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಅದೇ ಸಂದರ್ಭದಲ್ಲಿ ಮನೆಯನ್ನು ಖರೀದಿ ಮಾಡಿದ ವ್ಯಕ್ತಿ ಬಂದು ಅವಾಜ್ ಹಾಕಿ ಇದು ನನ್ನ ಮನೆ, ಸಂಜೆಯವರೆಗೆ ಟೈಮ್ ಕೊಡುತ್ತೇನೆ ಅಷ್ಟರಲ್ಲಿ ಮನೆ ಖಾಲಿ ಮಾಡಬೇಕು ಅಂತಾ ಹೇಳುತ್ತಾನೆ.

ಇವನ ಈ ಮಾತಿನಿಂದ ತುಕಾರಾಮ್ ಕುಟುಂಬಕ್ಕೆ ಆಘಾತವಾಗುತ್ತದೆ. ಇದರಿಂದ ಕೋಪಗೊಂಡ ತುಕಾರಾಮ್ ಇದು ನಮ್ಮ ಮನೆ, ನಾವ್ಯಾಕೆ ಈ ಮನೆ ಬಿಟ್ಟು ಹೋಗಬೇಕು, ನೀವು ಸುಳ್ಳು ಹೇಳುತ್ತಿದ್ದೀರಾ ಅಂತಾ ಹೇಳಿದಾಗ ಮನೆ ಖರೀದಿಸಿದ ವ್ಯಕ್ತಿ ಮನೆ ಪತ್ರವನ್ನು ತೋರಿಸಿ ನೀವೇ ನೋಡಿ ಎಂದು ತೋರಿಸುತ್ತಾನೆ. ಅದನ್ನು ಪರಿಶೀಲಿಸಿದ ಸೃಷ್ಠಿ ತನ್ನ ತಂದೆಗೆ ಹೇಳುತ್ತಾಳೆ, ಅವರು ಹೇಳಿದ್ದು ನಿಜ ಅಪ್ಪ. ಈ ಮನೆ ಈಗ ಅವರ ಹೆಸರಲ್ಲಿದೆ. ಶ್ವೇತಾ ನಮಗೆಲ್ಲಾ ಮೋಸ ಮಾಡಿದ್ದಾಳೆ ಎಂದು ಹೇಳಿ ಜೋರಾಗಿ ಅಳುತ್ತಾಳೆ.

ಇದನ್ನು ಓದಿ; ಹರ್ಷ ಎದುರು ಕತ್ತಿ, ಪಿಸ್ತೂಲ್ ಹಿಡಿದು ನಿಂತ ಸಾನಿಯಾ ಬಲಗೈ ಬಂಟ; ಆ ಬಳಿಕ ನಡೆದಿದ್ದು ಮಾತ್ರ ಅಚ್ಚರಿ

ಆಗ ತುಕರಾಮ್ ಇದೆಲ್ಲಾ ಸುಳ್ಳು. ಶ್ವೇತಾ ಹೀಗೆಲ್ಲಾ ಮಾಡಿರಲು ಸಾಧ್ಯಾನೇ ಇಲ್ಲ, ಆ ಮಗುವಿನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಹೊರಿಸಬೇಡ ಎಂದಾಗ ಸೃಷ್ಠಿ ಶ್ವೇತಾ ಸಹಿ ಮಾಡಿರುವ ಮನೆ ಪತ್ರವನ್ನು ತುಕರಾಮ್‌ಗೆ ತೋರಿಸುತ್ತಾನೆ. ಅದನ್ನು ನೋಡಿ ಆತನಿಗೆ ಸಿಡಿಲು ಬಡಿದಂತಾಗುತ್ತದೆ. ಶ್ವೇತಾಳ ಕಾರಣದಿಂದ ತುಕರಾಮ್ ಕುಟುಂಬದ ಪರಿಸ್ಥಿತಿ ಇನ್ನೆಲ್ಲಿ ಹೋಗಿ ತಲುಪುತ್ತದೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್