ಸೀರೆ ಧರಿಸಿ ಮನಬಂದಂತೆ ಕುಣಿದು ಕುಪ್ಪಳಿಸಿದ ನಟಿ; ಈ ಅವತಾರ ಕಂಡು ಫ್ಯಾನ್ಸ್​​ ಹೇಳಿದ್ದೇನು?

Lakshmi Manchu: ‘ಕ್ರೇಜಿ ಆಗಿರಿ. ನಿಮ್ಮನ್ನು ಯಾರೂ ನೋಡುತ್ತಿಲ್ಲ ಎಂಬಂತೆ ಡ್ಯಾನ್ಸ್​ ಮಾಡಿರಿ’ ಎಂದು ಈ ವಿಡಿಯೋಗೆ ಲಕ್ಷ್ಮೀ ಮಂಚು ಕ್ಯಾಪ್ಷನ್​ ನೀಡಿದ್ದಾರೆ. ಇದಕ್ಕೆ ಅನೇಕ ಅಭಿಮಾನಿಗಳು ಕಮೆಂಟ್​ಗಳ ಮೂಲಕ ತಮ್ಮ ಮೆಚ್ಚುಗೆ ತೋರಿಸಿದ್ದಾರೆ.

ಸೀರೆ ಧರಿಸಿ ಮನಬಂದಂತೆ ಕುಣಿದು ಕುಪ್ಪಳಿಸಿದ ನಟಿ; ಈ ಅವತಾರ ಕಂಡು ಫ್ಯಾನ್ಸ್​​ ಹೇಳಿದ್ದೇನು?
ವೈರಲ್​ ಡ್ಯಾನ್ಸ್​​ ವಿಡಿಯೋದಲ್ಲಿ ನಟಿ ಲಕ್ಷ್ಮೀ ಮಂಚು
Follow us
ಮದನ್​ ಕುಮಾರ್​
|

Updated on: Jun 24, 2021 | 11:43 AM

ದಕ್ಷಿಣ ಭಾರತದ ಜನಪ್ರಿಯ ನಟಿ ಲಕ್ಷ್ಮೀ ಮಂಚು ಅವರು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​ ಆಗಿದ್ದಾರೆ. ಸದಾ ಏನಾದರೊಂದು ಪೋಸ್ಟ್​ ಮಾಡುತ್ತ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುತ್ತಾರೆ. ಇತ್ತೀಚೆಗೆ ಅವರು ಮ್ಯೂಸಿಕ್​ ಡೇ ಪ್ರಯುಕ್ತ ಒಂದು ವಿಡಿಯೋ ಹಂಚಿಕೊಂಡಿದ್ದರು. ಅದನ್ನು ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ವಿಡಿಯೋದಲ್ಲಿ ಲಕ್ಷ್ಮೀ ಮಂಚು ಡ್ಯಾನ್ಸ್​ ಮಾಡಿರುವ ಶೈಲಿಗೆ ಬಹುತೇಕರು ಬೆರಗಾಗಿದ್ದಾರೆ. ಚಂದದ ಸೀರೆ ಧರಿಸಿರುವ ಅವರು ತಮಗೆ ಇಷ್ಟ ಬಂದಂತೆ ಕುಣಿದಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಮ್ಯೂಸಿಕ್​ ಡೇ ಪ್ರಯುಕ್ತ ಕುಣಿದು ಕುಪ್ಪಳಿಸಲು ಲಕ್ಷ್ಮೀ ಮಂಚು ಆಯ್ಕೆ ಮಾಡಿಕೊಂಡಿರುವುದು ವಿಜಯ್​ ನಟನೆಯ ‘ಮಾಸ್ಟರ್​’ ಸಿನಿಮಾದ ‘ವಾಥಿ ಕಮಿಂಗ್​…’ ಹಾಡನ್ನು. ಮೂಲತಃ ತೆಲುಗು ನಟಿಯಾಗಿದ್ದರೂ ಕೂಡ ಅವರು ತಮಿಳು ಸಿನಿಮಾದ ಗೀತೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸ್ಟೆಪ್ಸ್​ ಹಾಕಿದ್ದಾರೆ. ಹೆಚ್ಚೇನೂ ಆಡಂಬರ ಇಲ್ಲದೆ, ಮನೆಯಲ್ಲಿಯೇ ತಮಗೆ ಇಷ್ಟ ಬಂದಂತೆ ಅವರು ಕುಣಿದಿದ್ದಾರೆ. ಅದೇ ಈಗ ಹೈಲೈಟ್​ ಆಗಿದೆ. ಸಿಂಪಲ್​ ಆಗಿ ಸೀರೆ ಧರಿಸಿ ಅವರು ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ಅವರಿಗೆ ಮಗಳು ಕೂಡ ಸಾಥ್​ ನೀಡಿದ್ದಾಳೆ.

‘ಕ್ರೇಜಿ ಆಗಿರಿ. ನಿಮ್ಮನ್ನು ಯಾರೂ ನೋಡುತ್ತಿಲ್ಲ ಎಂಬಂತೆ ಡ್ಯಾನ್ಸ್​ ಮಾಡಿರಿ’ ಎಂದು ಆ ವಿಡಿಯೋಗೆ ಲಕ್ಷ್ಮೀ ಮಂಚು ಕ್ಯಾಪ್ಷನ್​ ನೀಡಿದ್ದಾರೆ. ಇದಕ್ಕೆ ಅನೇಕ ಅಭಿಮಾನಿಗಳು ಕಮೆಂಟ್​ಗಳ ಮೂಲಕ ತಮ್ಮ ಮೆಚ್ಚುಗೆ ತೋರಿಸಿದ್ದಾರೆ. ನೀವು ತುಂಬ ಹಾಟ್​ ಆಗಿ ಕಾಣುತ್ತೀರಿ, ಡ್ಯಾನ್ಸ್​ ಅದ್ಭುತವಾಗಿ ಮಾಡುತ್ತೀರಿ ಎಂದು 43ರ ಪ್ರಾಯದ ಲಕ್ಷ್ಮೀ ಮಂಚುಗೆ ಫ್ಯಾನ್ಸ್​ ಪ್ರಶಂಸೆ ನೀಡಿದ್ದಾರೆ.

ಇತ್ತೀಚೆಗೆ ನಟನೆಯಲ್ಲಿ ಲಕ್ಷ್ಮೀ ಮಂಚು ಅಷ್ಟೇನೂ ಬ್ಯುಸಿ ಆಗಿಲ್ಲ. ಸಿನಿಮಾಗಳಿಗಿಂತಲೂ ಅವರು ಜನಪರ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ತಮ್ಮ ಎನ್​ಜಿಓ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೊವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ವಸತಿ, ಶಿಕ್ಷಣ ಮುಂತಾದ ಮೂಲಭೂತ ನೆರವುಗಳನ್ನು ನೀಡುವಲ್ಲಿ ಈ ಎನ್​ಜಿಓ ನಿರತವಾಗಿದೆ.

‘ವೈಯಕ್ತಿಕವಾಗಿ ನಾನು ಅನೇಕರಿಗೆ ಸಹಾಯ ಮಾಡುತ್ತಿದ್ದೇನೆ. ಬೆಡ್​ ವ್ಯವಸ್ಥೆ ಮಾಡುವುದರ ಜೊತೆಗೆ, ಔಷಧಿಗಳನ್ನು ಒದಗಿಸುತ್ತಿದ್ದೇನೆ. ಕೊವಿಡ್​ನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಹೆಚ್ಚು ಕಷ್ಟ ಆಗುತ್ತಿದೆ. ನಮ್ಮ ಎನ್​ಜಿಓ ಕಡೆಯಿಂದ ಇಂಥ ಮಕ್ಕಳಿಗೆ ಶಿಕ್ಷಣ, ಟ್ಯೂಷನ್​, ಬಟ್ಟೆ ಮುಂತಾದನ್ನು ಒದಗಿಸುತ್ತೇವೆ’ ಎಂದು ಲಕ್ಷ್ಮೀ ಮಂಚು ಹೇಳಿದ್ದರು. ಅದರಂತೆ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ:

ಕೊರೊನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾವಿರ ಮಕ್ಕಳಿಗೆ ಸಹಾಯ ಮಾಡುತ್ತಿರುವ ನಟಿ ಲಕ್ಷ್ಮೀ ಮಂಚು

‘ರಾಬರ್ಟ್​’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ