ವರ್ಷದಿಂದ ವರ್ಷಕ್ಕೆ ಆಸ್ಕರ್ ಭಾರತಕ್ಕೆ ಹತ್ತಿರವಾಗುತ್ತಲೇ ಬರುತ್ತಿದೆ. ‘ಲಗಾನ್’ ಸಿನಿಮಾ ನಾಮಿನೇಟ್ ಆದ ಬಳಿಕ ದೊಡ್ಡ ಗ್ಯಾಪ್ನ ಬಳಿಕ ‘ಆರ್ಆರ್ಆರ್’ ಸಿನಿಮಾ ಸಂಗೀತ ವಿಭಾಗದಲ್ಲಿ ನಾಮಿನೇಟ್ ಆಯ್ತು. ಅದಕ್ಕೆ ಮುನ್ನ ಭಾರತೀಯ ಕತೆಯುಳ್ಳ ‘ಸ್ಲಂ ಡಾಗ್ ಮಿಲೇನಿಯರ್’ ಆಸ್ಕರ್ ಗೆದ್ದಿತು, ಎಆರ್ ರೆಹಮಾನ್ಗೆ ಎರಡು ಆಸ್ಕರ್ ದೊರಕಿತು. ಕಳೆದ ವರ್ಷ, ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಆಸ್ಕರ್ ಗೆದ್ದಿದ್ದು ಮಾತ್ರವಲ್ಲದೆ ಡಾಕ್ಯುಮೆಂಟರಿ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರ್’ ಸಹ ಆಸ್ಕರ್ ಗೆದ್ದಿತು. ಈ ವರ್ಷವೂ ಭಾರಿ ನಿರೀಕ್ಷೆ ಇತ್ತು. ಆದರೆ ಭಾರತದಿಂದ ಅಧಿಕೃತವಾಗಿ ಆಸ್ಕರ್ಗೆ ಕಳಿಸಲಾಗಿದ್ದ ‘ಲಾಪತಾ ಲೇಡೀಸ್’ ಆಸ್ಕರ್ ರೇಸಿನಿಂದ ಹೊರಬಿದ್ದಿದೆ. ಹಾಗೆಂದು ಭಾರತೀಯರು ಸಂಪೂರ್ಣವಾಗಿ ಭರವಸೆ ಕಳೆದುಕೊಳ್ಳಬೇಕಿಲ್ಲ.
ಆಮಿರ್ ಖಾನ್ ನಿರ್ಮಾಣ ಮಾಡಿದ್ದ ‘ಲಾಪತಾ ಲೇಡೀಸ್’ ಸಿನಿಮಾವನ್ನು ಆಸ್ಕರ್ಗೆ ಭಾರತದಿಂದ ಅಧಿಕೃತ ಎಂಟ್ರಿಯಾಗಿ ಕಳಿಸಲಾಗಿತ್ತು. ಆದರೆ ಆ ಸಿನಿಮಾ ಶಾರ್ಟ್ಲಿಸ್ಟ್ ಆಗಿಲ್ಲ. ಆ ಮೂಲಕ ಆಸ್ಕರ್ ರೇಸ್ನಿಂದ ಹೊರ ಬಿದ್ದಿದೆ. ಆದರೆ ಬೇರೆ ವಿಭಾಗದಲ್ಲಿ ಭಾರತೀಯ ಸಿನಿಮಾಗಳು ಇನ್ನೂ ರೇಸ್ನಲ್ಲಿವೆ. ಕಳೆದ ಬಾರಿ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಗೆದ್ದ ‘ದಿ ಎಲಿಫಂಟ್ ವಿಸ್ಪರ್’ ನ ನಿರ್ಮಾಪಕಿ ಗುನೀತ್ ಮೊಂಗಾ ನಿರ್ದೇಶಿಸಿರುವ ಲೈವ್ ಆಕ್ಷನ್ ಶಾರ್ಟ್ ಸಿನಿಮಾ ‘ಅನುಜಾ’ ಆಸ್ಕರ್ ರೇಸ್ನಲ್ಲಿ ಉಳಿದುಕೊಂಡಿದೆ. ಮಾತ್ರವಲ್ಲದೆ ‘ಅನುಜಾ’ ನಾಮಿನೇಟ್ ಸಹ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:Laapataa Ladies: ಆಸ್ಕರ್ ಕನಸು ಭಗ್ನ; ರೇಸ್ನಿಂದ ಹೊರ ಬಿದ್ದ ‘ಲಾಪತಾ ಲೇಡೀಸ್’
‘ಅನುಜಾ’ ಲೈವ್ ಆಕ್ಷನ್ ಶಾರ್ಟ್ ಸಿನಿಮಾ ಬಟ್ಟೆ ಅಥವಾ ಗಾರ್ಮೆಂಟ್ ಉದ್ಯಮದಲ್ಲಿ ಬಾಲಕಾರ್ಮಿಕ ಪದ್ಧತಿಯ ಮೇಲೆ ಬೆಳಕು ಚೆಲ್ಲುವ ಕಿರು ಸಿನಿಮಾ ಆಗಿದೆ. ಕಳೆದ ಬಾರಿ ‘ದಿ ಎಲಿಫೆಂಟ್ ವಿಸ್ಪರ್’ ಸಿನಿಮಾ ಮೂಲಕ ಆಸ್ಕರ್ ಗೆದ್ದಿದ್ದ ಗುನೀತ್ ಈ ಬಾರಿ ಇನ್ನೂ ಗಟ್ಟಿಯಾದ ವಿಷಯ ಇಟ್ಟುಕೊಂಡು ಆಸ್ಕರ್ ಅಂಗಳಕ್ಕೆ ಇಳಿದಿದ್ದಾರೆ.
‘ಲಾಪತಾ ಲೇಡೀಸ್’ ಸ್ಪರ್ಧೆ ಮಾಡಲಿದ್ದ ವಿದೇಶಿ ಸಿನಿಮಾ ವಿಭಾಗಕ್ಕೆ ಭಾರತೀಯ ಸಿನಿಮಾ ಒಂದು ಶಾರ್ಟ್ ಲಿಸ್ಟ್ ಆಗಿದೆಯಾದರೂ ಆ ಸಿನಿಮಾ ಭಾರತದಿಂದ ಅಲ್ಲ ಬದಲಿಗೆ ಬ್ರಿಟನ್ನಿಂದ ಕಳಿಸಲ್ಪಟ್ಟಿದೆ. ಬ್ರಿಟನ್ ಪ್ರಜೆಯಾಗಿರುವ ಭಾರತೀಯ ಮೂಲದ ಸಂಧ್ಯಾ ಸೂರಿ ನಿರ್ದೇಶನ ಮಾಡಿರುವ ‘ಸಂತೋಷ್’ ಸಿನಿಮಾ ವಿದೇಶಿ ಭಾಷೆ ಸಿನಿಮಾ ವಿಭಾಗದಲ್ಲಿ ಶಾರ್ಟ್ ಲಿಸ್ಟ್ ಆಗಿದ್ದು, ಅತ್ಯುತ್ತಮ 15 ಸಿನಿಮಾಗಳ ಪಟ್ಟಿಯನ್ನು ಸೇರಿಕೊಂಡಿದೆ. ಈ ಸಿನಿಮಾ ಸಹ ನಾಮಿನೇಟ್ ಆಗುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ