Laapataa Ladies: ಆಸ್ಕರ್ ಕನಸು ಭಗ್ನ; ರೇಸ್​ನಿಂದ ಹೊರ ಬಿದ್ದ ‘ಲಾಪತಾ ಲೇಡೀಸ್’

ಭಾರತದ ಅತಿ ಜನಪ್ರಿಯ ಚಿತ್ರಗಳಲ್ಲಿ ಒಂದಾದ 'ಮಿಸ್ಸಿಂಗ್ ಲೇಡಿಸ್' (ಲಾಪತಾ ಲೇಡೀಸ್) ಚಿತ್ರವು ಆಸ್ಕರ್ ನಾಮನಿರ್ದೇಶನದಿಂದ ಹೊರಬಿದ್ದಿದೆ. 2025ರ ಆಸ್ಕರ್ ಅವಾರ್ಡ್ ಗೆಲ್ಲುವ ಭಾರತದ ಆಸೆಗೆ ಇದು ತೀವ್ರ ಹೊಡೆತ ನೀಡಿದೆ. ಈ ಚಿತ್ರವು 'ವಿದೇಶಿ ಚಲನಚಿತ್ರ' ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದರೂ, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.

Laapataa Ladies: ಆಸ್ಕರ್ ಕನಸು ಭಗ್ನ; ರೇಸ್​ನಿಂದ ಹೊರ ಬಿದ್ದ ‘ಲಾಪತಾ ಲೇಡೀಸ್’
ಲಾಪತಾ ಲೇಡಿಸ್
Follow us
ರಾಜೇಶ್ ದುಗ್ಗುಮನೆ
|

Updated on:Dec 18, 2024 | 10:03 AM

‘ಮಿಸ್ಸಿಂಗ್ ಲೇಡಿಸ್’ (ಲಾಪತಾ ಲೇಡೀಸ್) ಸಿನಿಮಾ ಆಸ್ಕರ್​ ರೇಸ್​ನಿಂದ ಹೊರ ಬಿದ್ದಿದೆ. ಈ ಮೂಲಕ 2025ರಲ್ಲಿ ಆಸ್ಕರ್ ಗೆಲ್ಲಬೇಕು ಎಂಬ ಭಾರತೀಯರ ಕನಸು ನುಚ್ಚು ನೂರಾಗಿದೆ. ‘ದಿ ಅಕಾಡೆಮಿ ಆಫ್ ಮೋಷನ್​ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್​’ ಈ ಬಗ್ಗೆ ಘೋಷಣೆ ಮಾಡಿದೆ. ಈ ಚಿತ್ರದ ನಿರ್ಮಾಪಕ ಆಮಿರ್ ಖಾನ್ ಈ ಬಗ್ಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

‘ಲಾಪತಾ ಲೇಡೀಸ್’ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಇಷ್ಟ ಪಟ್ಟ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ನೋಡಿ ಜನರು ಮೆಚ್ಚಿಕೊಂಡರು. ಈ ಚಿತ್ರ ಭಾರತದಿಂದ ಅಧಿಕೃತವಾಗಿ ಆಸ್ಕರ್​ಗೆ ನಾಮಿನೇಟ್ ಆಯಿತು. ‘ವಿದೇಶಿ ಸಿನಿಮಾ’ ವಿಭಾಗಕ್ಕೆ ಈ ಚಿತ್ರ ಕಳುಹಿಸಲಾಯಿತು. ಬುಧವಾರ (ಡಿಸೆಂಬರ್ 18) ಈ ಬಗ್ಗೆ ಘೋಷಣೆ ಆಗಿದ್ದು, ಸಿನಿಮಾ ಟಾಪ್ 15ರಲ್ಲಿ ಬರಲೂ ಅನರ್ಹವಾಗಿದೆ.

ಮಾರ್ಚ್ 2ರಂದು ಆಸ್ಕರ್ ಅವಾರ್ಡ್ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. ‘ಆಸ್ಕರ್ ಅವಾರ್ಡ್’ ನಾಮಿನೇಷನ್ ಜನವರಿ 17ರಂದು ಘೋಷಣೆ ಆಗಲಿದೆ. ಮಾರ್ಚ್ 2ರಂದು ಅದ್ದೂರಿ ಈವೆಂಟ್​ನಲ್ಲಿ ವಿನ್ನರ್​ಗಳ ಹೆಸರು ಘೋಷಣೆ ಆಗಲಿದೆ.

ಆಸ್ಕರ್ ಇತಿಹಾಸದಲ್ಲಿ ಈ ವರೆಗೆ ‘ಮದರ್ ಇಂಡಿಯಾ’, ‘ಸಲಾಮ್ ಬಾಂಬೆ’ ಹಾಗೂ ‘ಲಗಾನ್’ ಸಿನಿಮಾಗಳು ‘ವಿದೇಶಿ ಸಿನಿಮಾ’ ವಿಭಾಗದಲ್ಲಿ ನಾಮಿನೇಟ್ ಆಗಿದ್ದವು. ಆದರೆ, ಅವುಗಳಿಗೆ ಅವಾರ್ಡ್ ಸಿಕ್ಕಿಲ್ಲ. ಈಗ ‘ಮಿಸ್ಸಿಂಗ್ ಲೇಡಿಸ್’ ಚಿತ್ರಕ್ಕೂ ಅವಕಾಶ ಕೈ ತಪ್ಪಿದೆ.

ಇದನ್ನೂ ಓದಿ: ಆಸ್ಕರ್ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’

ಈ ಬಗ್ಗೆ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಪ್ರತಿಕ್ರಿಯೆ ನೀಡಿದ್ದಾರೆ. ‘ಆಸ್ಕರ್​ನ ಶಾರ್ಟ್​ಲಿಸ್ಟ್ ರಿಲೀಸ್ ಆಗಿದೆ. ಇದರಲ್ಲಿ ಲಾಪತಾ ಲೇಡೀಸ್ ಚಿತ್ರ ಸ್ಥಾನ ಪಡೆದಿಲ್ಲ. ನಾನು ಈ ಚಿತ್ರವನ್ನು ಎಂಜಾಯ್ ಮಾಡಿದ್ದೇನೆ. ಆದರೆ, ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ ವರ್ಗಕ್ಕೆ ಭಾರತವನ್ನು ಪ್ರತಿನಿಧಿಸಲು ಇದು ಒಳ್ಳೆಯ ಆಯ್ಕೆ ಅಲ್ಲ. ನಿರೀಕ್ಷೆಯಂತೆ ಸಿನಿಮಾ ಸೋತಿದೆ. ವರ್ಷ ಕಳೆದಂತೆ ನಾವು ತಪ್ಪಾದ ಚಿತ್ರಗಳನ್ನು ಆಯ್ಕೆ ಮಾಡುತ್ತಲೇ ಇದ್ದೇವೆ. ನಾವು ಯಾವಾಗ ಅರಿತುಕೊಳ್ಳುತ್ತೇವೆ? ಹಲವಾರು ಅತ್ಯುತ್ತಮ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಪ್ರತಿ ವರ್ಷ ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್ ವರ್ಗದಲ್ಲಿ ಗೆಲ್ಲಬೇಕು’ ಎಂದು ರಿಕ್ಕಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:56 am, Wed, 18 December 24

ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ