Vijay Deverakonda: ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿದ ವಿಜಯ್ ದೇವರಕೊಂಡ; ಸಾಥ್ ನೀಡಿದ ತಾಯಿ ಮಾಧವಿ
Vijay Devarakonda | Organ Donation: ನಿಧನದ ನಂತರ ಅಂಗಾಂಗ ದಾನ ಮಾಡುವುದರಿಂದ ಬೇರೆಯವರ ಜೀವ ಉಳಿಸಬಹುದು. ಅಂಥ ಪುಣ್ಯದ ಕಾರ್ಯಕ್ಕೆ ವಿಜಯ್ ದೇವರಕೊಂಡ ಸಂಕಲ್ಪ ಮಾಡಿದ್ದಾರೆ.

ನಟ ವಿಜಯ್ ದೇವರಕೊಂಡ (Vijay Devarakonda) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ತಮ್ಮ ಅಭಿಮಾನಿಗಳಿಗೆ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ಅವರು ಪ್ರಯತ್ನಿಸಿದ್ದಾರೆ. ಹಾಗಂತ ಕೇವಲ ಭಾಷಣ ಮಾಡಿ ಅವರು ಸುಮ್ಮನಾಗಿಲ್ಲ. ಸ್ವತಃ ಅಂಗಾಂಗ ದಾನಕ್ಕೆ (Organ Donation) ಹೆಸರು ನೋಂದಣಿ ಮಾಡಿಸಿದ್ದಾರೆ. ವಿಜಯ್ ದೇವರಕೊಂಡ ಮಾಡಿರುವ ಈ ಮಹತ್ವದ ಕಾರ್ಯಕ್ಕೆ ಅವರ ಕುಟುಂಬದವರು ಕೂಡ ಸಾಥ್ ನೀಡಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ (Vijay Deverakonda Mother) ಮಾಧವಿ ಕೂಡ ಅಂಗಾಂಗ ದಾನದ ಸಂಕಲ್ಪ ಮಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ‘ಲೈಗರ್’ ಹೀರೋ ಈ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಅವರು ರಿಯಲ್ ಲೈಫ್ನಲ್ಲಿಯೂ ಹೀರೋ ಆಗಿದ್ದಾರೆ.
ನಿಧನದ ನಂತರ ಅಂಗಾಂಗ ದಾನ ಮಾಡುವುದರಿಂದ ಬೇರೆಯವರ ಜೀವ ಉಳಿಸಬಹುದು. ಅಂಥ ಪುಣ್ಯದ ಕಾರ್ಯಕ್ಕೆ ವಿಜಯ್ ದೇವರಕೊಂಡ ಸಂಕಲ್ಪ ಮಾಡಿದ್ದಾರೆ. ಈ ವಿಚಾರದ ಕುರಿತು ತಮ್ಮ ನಿಲುವು ಏನು ಎಂಬುದನ್ನು ಅವರು ವೇದಿಕೆಯಲ್ಲಿ ತಿಳಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವರ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
‘ದಾನಿಗಳ ಕಾರಣದಿಂದಲೇ ಅನೇಕ ಸರ್ಜರಿಗಳು ಆಗುತ್ತಿವೆ ಎಂದು ನನಗೆ ವೈದ್ಯರು ಹೇಳಿದರು. ಸಾಕಷ್ಟು ಜನರು ಅಂಗಾಂಗ ದಾನ ಮಾಡುತ್ತಿದ್ದಾರೆ. ಅದು ಉತ್ತಮ ಕಾರ್ಯ. ಹಾಗಿದ್ದರೂ ಕೂಡ ದಾನಿಗಳ ಸಂಖ್ಯೆ ಕಡಿಮೆ ಇದೆ. ನಾನು ನನ್ನ ಎಲ್ಲ ಅಂಗಾಂಗಗಳನ್ನು ದಾನ ಮಾಡುತ್ತೇನೆ. ನನ್ನ ಬದುಕು ಅಂತ್ಯವಾದ ಬಳಿಕ ಇನ್ನೊಬ್ಬರ ಬದುಕಿನ ಭಾಗವಾಗಲು ಖುಷಿ ಎನಿಸುತ್ತದೆ. ನಾನು ಮತ್ತು ನನ್ನ ತಾಯಿ ನಮ್ಮ ಹೆಸರನ್ನು ನೋಂದಾಯಿಸಿದ್ದೇವೆ’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
‘ಅಂಗಾಂಗಗಳನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ಉಪಯೋಗ ಇಲ್ಲ. ಅಂಗಾಂಗ ದಾನದ ಬಗ್ಗೆ ಎಲ್ಲರೂ ಆಲೋಚನೆ ಮಾಡಬೇಕು ಅಂತ ನಾನು ಬಯಸುತ್ತೇನೆ’ ಎಂದು ವಿಜಯ್ ದೇವರಕೊಂಡ ಪ್ರೇರಣೆ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Vijay Deverakonda | Encouraging Organ Donation at Adult and Pediatric Liver Transplantation Awareness Program, PACE Hospitals #VijayDeverakonda #livertransplant #pacehospitals pic.twitter.com/iIUneNPb6w
— PACE Hospitals (@PACEHospitals) November 16, 2022
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಆ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಆಗಲಿಲ್ಲ. ಈಗ ಅವರು ಸಮಂತಾ ರುತ್ ಪ್ರಭು ಜೊತೆ ‘ಖುಷಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಅವರ ಅನಾರೋಗ್ಯದ ಕಾರಣದಿಂದ ಆ ಚಿತ್ರದ ಶೂಟಿಂಗ್ ವಿಳಂಬ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 am, Fri, 18 November 22