ಮಾಯಾವಿ ಶಕ್ತಿ ಪಡೆದ ಸೂರ್ಯ; ಇದಕ್ಕೆ ಕಾರಣವಾಗಿದ್ದು ಲೋಕೇಶ್ ಕನಗರಾಜ್

ಲೋಕೇಶ್ ಕನಗರಾಜ್ ಅವರ ಡ್ರೀಮ್ ಪ್ರಾಜೆಕ್ಟ್ ಒಂದಿದೆ. ಇದಕ್ಕೆ ‘ಇರುಂಬು ಕೈ ಮಾಯಾವಿ’ ಎಂದು ಶೀರ್ಷಿಕೆ ಇಡಲಾಗಿದೆ. ಕಾಮಿಕ್ ನಾವೆಲ್ ‘ದಿ ಸ್ಟೀಲ್ ಕ್ಲಾನ್’ ಆಧರಿಸಿ ಈ ಸಿನಿಮಾದ ಕಥೆ ಸಿದ್ಧವಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸೂರ್ಯ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಮಾಯಾವಿ ಶಕ್ತಿ ಪಡೆದ ಸೂರ್ಯ; ಇದಕ್ಕೆ ಕಾರಣವಾಗಿದ್ದು ಲೋಕೇಶ್ ಕನಗರಾಜ್
ಸೂರ್ಯ-ಲೋಕೇಶ್

Updated on: Sep 05, 2023 | 6:30 AM

ಲೋಕೇಶ್ ಕನಗರಾಜ್ (Lokesh Kanagaraj) ಹಾಗೂ ಸೂರ್ಯ ಕಾಂಬಿನೇಷನ್​ನಲ್ಲಿ ‘ವಿಕ್ರಮ್’ ಸಿನಿಮಾ ಮೂಡಿ ಬಂದಿತ್ತು. ‘ವಿಕ್ರಮ್’ ಸಿನಿಮಾದ (Vikram Movie) ಕ್ಲೈಮ್ಯಾಕ್ಸ್​ನಲ್ಲಿ ಸೂರ್ಯ ಎಂಟ್ರಿ ಆಗುತ್ತದೆ. ಈ ಮೂಲಕ ಮುಂದಿನ ಸಿನಿಮಾದಲ್ಲಿ ಇಬ್ಬರೂ ಮತ್ತೊಮ್ಮೆ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂಬುದು ಖಚಿತವಾಗಿತ್ತು. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಇದನ್ನು ಹೊರತುಪಡಿಸಿ ಮತ್ತೊಂದು ಚಿತ್ರದಲ್ಲಿ ಸೂರ್ಯ ಹಾಗೂ ಲೋಕೇಶ್ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಸೂಪರ್ ಹೀರೋ ಮಾದರಿಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಲೋಕೇಶ್ ಕನಗರಾಜ್ ಅವರ ಡ್ರೀಮ್ ಪ್ರಾಜೆಕ್ಟ್ ಒಂದಿದೆ. ಇದಕ್ಕೆ ‘ಇರುಂಬು ಕೈ ಮಾಯಾವಿ’ ಎಂದು ಶೀರ್ಷಿಕೆ ಇಡಲಾಗಿದೆ. ಕಾಮಿಕ್ ನಾವೆಲ್ ‘ದಿ ಸ್ಟೀಲ್ ಕ್ಲಾನ್’ ಆಧರಿಸಿ ಈ ಸಿನಿಮಾದ ಕಥೆ ಸಿದ್ಧವಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸೂರ್ಯ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್​ಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೂಪರ್ ಹೀರೋ ಮಾದರಿಯ ಸಿನಿಮಾಗಳು ಬಂದಿದ್ದು ಕಡಿಮೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಚಿತ್ರದ ಕಥೆ ಏನು?

ಕಥಾ ನಾಯಕ ಅಪಘಾತಕ್ಕೆ ಒಳಗಾಗುತ್ತಾನೆ. ಈ ವೇಳೆ ಅವನು ಕೈ ಕಳೆದುಕೊಳ್ಳುತ್ತಾನೆ. ಆ ಬಳಿಕ ಆತನಿಗೆ ಕಬ್ಬಿಣದ ಕೈ ಹಾಕಲಾಗುತ್ತದೆ. ಬಳಿಕ ಮತ್ತೊಂದು ಅಪಘಾತಕ್ಕೆ ಒಳಗಾದಾಗ ಮಾಯವಾಗುವ ಶಕ್ತಿ ಪಡೆದುಕೊಳ್ಳುತ್ತಾನೆ. ಆತನ ಕೈ ಮಾತ್ರ ಕಾಣುತ್ತಿರುತ್ತದೆ. ಈ ಶಕ್ತಿ ಬಳಕೆ ಮಾಡಿಕೊಂಡು ಆತ ದೇಶಕ್ಕಾಗಿ ಹೋರಾಡಲು ನಿರ್ಧರಿಸುತ್ತಾನೆ ಮತ್ತು ವೈರಿಗಳನ್ನು ನಾಶ ಮಾಡುತ್ತಾನೆ. ಈ ರೀತಿಯಲ್ಲಿ ಕಥೆ ಸಾಗುತ್ತದೆ.

ಇದನ್ನೂ ಓದಿ: Suriya: ಫ್ಯಾಮಿಲಿ ಸಮೇತ ಮುಂಬೈನಲ್ಲಿ ಸೆಟ್ಲ್​ ಆದ ನಟ ಸೂರ್ಯ; ಚೆನ್ನೈ ತೊರೆಯುವಂಥದ್ದು ಏನಾಯ್ತು?

ಕಥೆ ಈಗಾಗಲೇ ರಿವೀಲ್ ಆದರೂ ಇದು ಸಿನಿಮಾ ಬಗ್ಗೆ ಇರುವ ನಿರೀಕ್ಷೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇದಕ್ಕೆ ಕಾರಣವೂ ಇದೆ. ಈ ರೀತಿಯ ಸಿನಿಮಾಗಳಲ್ಲಿ ಕಥೆಗಿಂತ ಮುಖ್ಯವಾಗಿ ಅದನ್ನು ಯಾವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಅನ್ನೋದು ಮುಖ್ಯವಾಗುತ್ತದೆ. ಹೀಗಾಗಿ, ಈ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕಡಿಮೆ ಆಗುವಂಥದಲ್ಲ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us