ಜಯಪ್ರದಾಗೆ ಹೆಚ್ಚಿದ ಸಂಕಷ್ಟ: ಜೈಲು ಶಿಕ್ಷೆ ರದ್ದು ಮಾಡಲು ಕೋರ್ಟ್ ನಕಾರ

Jaya Pradha: ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಜಯಪ್ರದಾಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಪ್ರಕರಣವೊಂದರಲ್ಲಿ ವಿಧಿಸಲಾಗಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

ಜಯಪ್ರದಾಗೆ ಹೆಚ್ಚಿದ ಸಂಕಷ್ಟ: ಜೈಲು ಶಿಕ್ಷೆ ರದ್ದು ಮಾಡಲು ಕೋರ್ಟ್ ನಕಾರ
Follow us
ಮಂಜುನಾಥ ಸಿ.
|

Updated on: Oct 20, 2023 | 5:26 PM

ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಜಯಪ್ರದಾಗೆ (Jaya Pradha) ಸಂಕಷ್ಟ ಇನ್ನಷ್ಟು ಹೆಚ್ಚಿದೆ. ಚೆನ್ನೈನ ಚಿತ್ರಮಂದಿರ ಸಿಬ್ಬಂದಿ ಪ್ರಕರಣದಲ್ಲಿ ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ವಿಧಿಸಲಾಗಿದ್ದ ಆರು ತಿಂಗಳ ಜೈಲು ಶಿಕ್ಷೆಯನ್ನು ರದ್ದು ಪಡಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ.

ಮಾತ್ರವಲ್ಲದೆ, ಮುಂದಿನ 15 ದಿನದ ಒಳಗೆ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ 20 ಲಕ್ಷ ರೂಪಾಯಿ ಹಣವನ್ನು ಗ್ಯಾರೆಂಟಿ ಬಾಂಡ್ ಆಗಿ ಕಟ್ಟಿ ಜಾಮೀನು ಪಡೆಯುವಂತೆ ಆದೇಶಿಸಿದೆ. ಆ ಮೂಲಕ ಜೈಲು ಶಿಕ್ಷೆ ರದ್ದು ಮಾಡುವಂತೆ ಜಯಪ್ರದಾ ಮಾಡಿದ್ದ ಮನವಿಗೆ ಹಿನ್ನಡೆಯಾಗಿದೆ.

ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನ ಚಿತ್ರಮಂದಿರದವನ್ನು ಹೊಂದಿದ್ದರು. ಆ ಚಿತ್ರಮಂದಿರ ಕಾಲಾಂತರದಲ್ಲಿ ಬಾಗಿಲು ಹಾಕಿತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್​ಐ ಅನ್ನು ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ಹೀಗಾಗಿ ನೌಕರರು ದೂರು ದಾಖಲಿಸಿದ್ದರು, ಅದರನ್ವಯ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರಾಗಿದ್ದ ರಾಮ್ ಕುಮಾರ್ ಹಾಗೂ ರಾಜಾ ಬಾಬು ವಿರುದ್ಧ ಪ್ರಕರಣ ಹೂಡಿತ್ತು.

ಇದನ್ನೂ ಓದಿ:ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ, 5 ಸಾವಿರ ರೂಪಾಯಿ ದಂಡ ವಿಧಿಸಿದ ನ್ಯಾಯಾಲಯ; ಏನಿದು ಕೇಸ್​?

ಕೆಳ ಹಂತದ ನ್ಯಾಯಾಲಯದಲ್ಲಿ ಜಯಪ್ರದಾ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದರಲ್ಲದೆ, ನೌಕರರಿಗೆ ಸೇರಬೇಕಾದ ಹಣವನ್ನು ಪಾವತಿ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಬದಲಾಗಿ ಪ್ರಕರಣವನ್ನು ಕೈಬಿಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯವು ಜಯಪ್ರದಾರ ಮನವಿಯನ್ನು ತಳ್ಳಿಹಾಕಿ, ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ಆರು ತಿಂಗಳ ಜೈಲು ಹಾಗೂ 5000 ಜುಲ್ಮಾನೆ ವಿಧಿಸಿ ಆಗಸ್ಟ್ 10ರಂದು ಆದೇಶ ಹೊರಡಿಸಿತ್ತು. ಜೈಲು ಶಿಕ್ಷೆ ರದ್ದಿಗೆ ಕೋರಿ ಜಯಪ್ರದಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಅಲ್ಲಿಯೂ ಜಯಪ್ರದಾಗೆ ಹಿನ್ನಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ