Sarkaru Vaari Paata: ಮಹೇಶ್​ ಬಾಬು ಹೊಸ ಚಿತ್ರದಿಂದ ಬಿಗ್ ಅಪ್ಡೇಟ್; ಇಲ್ಲಿದೆ ಹೊಸ ಸಮಾಚಾರ

Mahesh Babu | Keerthy Suresh: ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರತಂಡದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ಅಭಿಮಾನಿಗಳ ಕಾತರ ಸದ್ಯದಲ್ಲೇ ಕೊನೆಯಾಗಲಿದೆ! ಏನಿದು ಸಮಾಚಾರ? ಮುಂದೆ ಓದಿ.

Sarkaru Vaari Paata: ಮಹೇಶ್​ ಬಾಬು ಹೊಸ ಚಿತ್ರದಿಂದ ಬಿಗ್ ಅಪ್ಡೇಟ್; ಇಲ್ಲಿದೆ ಹೊಸ ಸಮಾಚಾರ
‘ಸರ್ಕಾರು ವಾರಿ ಪಾಟ’ದ ನೂತನ ಪೋಸ್ಟರ್
Edited By:

Updated on: Feb 09, 2022 | 5:54 PM

ಮಹೇಶ್ ಬಾಬು (Mahesh Babu) ಮತ್ತು ಕೀರ್ತಿ ಸುರೇಶ್ (Keerthy Suresh) ಅಭಿನಯದ ‘ಸರ್ಕಾರು ವಾರಿ ಪಾಟ’ (Sarkaru Vaari Paata) ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷ ಹುಟ್ಟಿಸಿದೆ. ಚಿತ್ರದ ಕುರಿತು ಹೊಸ ಅಪ್ಡೇಟ್​ಗಾಗಿ ಅಭಿಮಾನಿಗಳು ಕಾದಿದ್ದಾರೆ. ಇದೀಗ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಜತೆಗೆ ಒಂದು ದೊಡ್ಡ ಅಪ್ಡೇಟ್ ನೀಡಿದೆ. ಹೌದು. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುವ ದಿನಾಂಕವನ್ನು ‘ಸರ್ಕಾರು ವಾರಿ ಪಾಟ’ ಚಿತ್ರತಂಡ ಘೋಷಿಸಿದೆ. ಫೆಬ್ರವರಿ 14ರ ಪ್ರೇಮಿಗಳ ದಿನಕ್ಕೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಈ ಕುರಿತು ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಟ್ವೀಟ್ ಮಾಡಿದ್ದು, ಹೊಸ ಹಾಡಿನ ಬಿಡುಗಡೆ, ಹೆಸರು ಮೊದಲಾದವುಗಳ ಕುರಿತು ಮಾಹಿತಿ ನೀಡಿದೆ. ‘ಪ್ರೇಮಿಗಳ ದಿನದಂದು ಚಿತ್ರದ ಮೊದಲ ಹಾಡು ‘ಕಲಾವತಿ’ ರಿಲೀಸ್ ಆಗಲಿದೆ. ಕ್ಲಾಸಿಕಲ್ ಮೆಲೋಡಿಯಾದ ಈ ಹಾಡು ನಿಮ್ಮೆಲ್ಲರಿಗೆ ಇಷ್ಟವಾಗಲಿದೆ’ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಅಲ್ಲದೇ ಕೀರ್ತಿ ಸುರೇಶ್ ಹಾಗೂ ಮಹೇಶ್ ಬಾಬು ಅವರ ರೊಮ್ಯಾಂಟಿಕ್ ಫೋಟೋ ಒಂದನ್ನು ಕೂಡ ಚಿತ್ರತಂಡ ಹಂಚಿಕೊಂಡಿದ್ದು, ಚಿತ್ರದ ಕುರಿತು ಮತ್ತಷ್ಟು ನಿರೀಕ್ಷೆ ಹೆಚ್ಚಲು ಕಾರಣವಾಗಿದೆ.

ಚಿತ್ರತಂಡ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಕೀರ್ತಿ ಸುರೇಶ್ ಹಾಗೂ ಮಹೇಶ್ ಬಾಬು ಮೊದಲ ಬಾರಿಗೆ ಜತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಅವರ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ. ಸಂಕ್ರಾಂತಿಯ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಚಿತ್ರತಂಡದ ಹಲವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ಇದೀಗ ಒಂದು ತಿಂಗಳ ನಂತರ ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ರೊಮ್ಯಾಂಟಿಕ್ ಗೀತೆ ತೆರೆಕಾಣಲಿದೆ.

ಪರಶುರಾಮ್ ನಿರ್ದೇಶನದ ‘ಸರ್ಕಾರು ವಾರಿ ಪಾಟ’ವನ್ನು ಜಿಎಮ್​​ಬಿ ಎಂಟರ್‌ಟೈನ್‌ಮೆಂಟ್ಸ್, ಮೈತ್ರಿ ಮೂವಿ ಮೇಕರ್ಸ್ ಮತ್ತು 14 ರೀಲ್ಸ್ ಪ್ಲಸ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಲಾಗಿದೆ. ಮೇ 12ರಂದು ಚಿತ್ರ ತೆರೆಕಾಣಲಿದೆ.

ಇದನ್ನೂ ಓದಿ:

ತಾಯಿಯಾಗುತ್ತಿರುವ ಕಾಜಲ್​ಗೂ ಎದುರಾಯ್ತು ಬಾಡಿ ಶೇಮಿಂಗ್; ಕೀಳು ಮನಸ್ಥಿತಿಗಳಿಗೆ ನಟಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

Sreeleela: ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಶ್ರೀಲೀಲಾ ನಾಯಕಿ? ಕನ್ನಡತಿಗೆ ಬಂಪರ್​ ಆಫರ್