ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದ ಶೂಟಿಂಗ್​ ವಿಡಿಯೋ ಲೀಕ್​

ನಟ ಮಹೇಶ್​ ಬಾಬು ಅವರು ‘ಗುಂಟೂರು ಖಾರಂ’ ಸಿನಿಮಾದ ‘ಧಮ್ ಮಸಾಲಾ..’ ಹಾಡಿಗೆ ಡ್ಯಾನ್ಸ್​ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಸಾಂಗ್​ ಸಖತ್​ ಮಾಸ್​ ಆಗಿದೆ. ಮಹೇಶ್ ಬಾಬು ಅವರನ್ನು ಇಂಥ ಮಾಸ್​ ಅವತಾರದಲ್ಲಿ ನೋಡಲು ಫ್ಯಾನ್ಸ್​ ಇಷ್ಟಪಡುತ್ತಾರೆ. ಇತ್ತೀಚಿನ ಸಿನಿಮಾಗಳಲ್ಲಿ ಅಂತಹ ಮಾಸ್​ ಎಲಿಮೆಂಟ್ ಮಿಸ್​ ಆಗಿತ್ತು.

ಮಹೇಶ್​ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದ ಶೂಟಿಂಗ್​ ವಿಡಿಯೋ ಲೀಕ್​
ಮಹೇಶ್​ ಬಾಬು

Updated on: Nov 22, 2023 | 7:09 AM

‘ಪ್ರಿನ್ಸ್​’ ಮಹೇಶ್​ ಬಾಬು (Mahesh Babu) ಅವರು ಸಿನಿಮಾ ಕೆಲಸಗಳನ್ನು ವಿಳಂಬ ಮಾಡುತ್ತಾರೆ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಮಹೇಶ್​ ಬಾಬು ಅವರು ಬಹುನಿರೀಕ್ಷಿತ ‘ಗುಂಟೂರು ಖಾರಂ’ (Guntur Kaaram) ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಶೂಟಿಂಗ್​ ವಿಡಿಯೋ ಲೀಕ್​ (Video Leak) ಆಗಿದೆ. ಅದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದೆ. ಹಾಗಿದ್ದರೂ ಕೂಡ ಚಿತ್ರತಂಡದವರು ತಲೆ ಕೆಡಿಸಿಕೊಂಡಿಲ್ಲ. ‘ಗುಂಟೂರು ಖಾರಂ’ ಟೀಮ್​ ಸಖತ್​ ಕೂಲ್​ ಆಗಿ ಇರಲು ಕಾರಣ ಇದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಶೂಟಿಂಗ್​ ಸಂದರ್ಭದಲ್ಲಿಯೇ ವಿಡಿಯೋ ಲೀಕ್ ಆದರೆ ಅಭಿಮಾನಿಗಳಿಗೆ ಇರುವ ಎಗ್ಸೈಟ್​ಮೆಂಟ್​ ಹೊರಟುಹೋಗುತ್ತದೆ. ಆದ್ದರಿಂದ ವಿಡಿಯೋ ಲೀಕ್​ ಆದಾಗ ಚಿತ್ರತಂಡಗಳಿಗೆ ಬೇಸರ ಆಗುವುದು ಸಹಜ. ಆದರೆ ‘ಗುಂಟೂರು ಖಾರಂ’ ಸಿನಿಮಾದ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಅಭಿಮಾನಿಗಳು ಈ ಲೀಕ್​ ವಿಡಿಯೋ ನೋಡಿ ಖುಷಿ ಆಗಿದ್ದಾರೆ. ಚಿತ್ರದ ಮೇಲೆ ಇರುವ ಕ್ರೇಜ್​ ಹೆಚ್ಚುವಂತಾಗಿದೆ. ಅದೇ ಕಾರಣಕ್ಕಾಗಿ ಚಿತ್ರತಂಡದವರು ಈ ಲೀಕ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಸದ್ಯ ಮಹೇಶ್​ ಬಾಬು ಅವರು ‘ಗುಂಟೂರು ಖಾರಂ’ ಸಿನಿಮಾದ ‘ಧಮ್ ಮಸಾಲಾ..’ ಹಾಡಿಗೆ ಡ್ಯಾನ್ಸ್​ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಸಾಂಗ್​ ಸಖತ್​ ಮಾಸ್​ ಆಗಿದೆ. ಮಹೇಶ್ ಬಾಬು ಅವರನ್ನು ಇಂಥ ಮಾಸ್​ ಅವತಾರದಲ್ಲಿ ನೋಡಲು ಫ್ಯಾನ್ಸ್​ ಇಷ್ಟಪಡುತ್ತಾರೆ. ಇತ್ತೀಚಿನ ಸಿನಿಮಾಗಳಲ್ಲಿ ಅಂತಹ ಮಾಸ್​ ಎಲಿಮೆಂಟ್ ಮಿಸ್​ ಆಗಿತ್ತು. ಈಗ ಅವರು ಮತ್ತೆ ಮಾಸ್​ ಅವತಾರಕ್ಕೆ ಮರಳುತ್ತಿದ್ದಾರೆ ಎಂಬುದು ಲೀಕ್​ ಆದ ವಿಡಿಯೋ ಮೂಲಕ ಗೊತ್ತಾಗಿದೆ. ಅದೇ ಕಾರಣದಿಂದ ಅಭಿಮಾನಿಗಳ ಕ್ರೇಜ್​ ಹೆಚ್ಚಿದೆ. ಚಿತ್ರತಂಡಕ್ಕೂ ಖುಷಿ ಆಗಿದೆ.

ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ

‘ಗುಂಟೂರು ಖಾರಂ’ ಸಿನಿಮಾಗೆ ತ್ರಿವಿಕ್ರಮ್ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿದ್ದಾರೆ. ‘ಅಥಡು’, ‘ಖಲೇಜಾ’ ಸಿನಿಮಾಗಳ ನಂತರ 3ನೇ ಬಾರಿಗೆ ಮಹೇಶ್​ ಬಾಬು ಮತ್ತು ತ್ರಿವಿಕ್ರಮ್​ ಶ್ರೀನಿವಾಸ್​ ಜೊತೆಯಾಗಿ ಕೆಲಸ ಮಾಡುತ್ತಿರುವ ಸಿನಿಮಾ ಇದು. ಆ ಕಾರಣದಿಂದಲೂ ನಿರೀಕ್ಷೆ ಮೂಡಿದೆ. ಈ ಸಿನಿಮಾಗೆ ಮೊದಲು ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಆದರೆ ಅವರು ಅರ್ಧಕ್ಕೆ ಹೊರನಡೆದರು. ಬಳಿಕ ಶ್ರೀಲೀಲಾ ಮತ್ತು ಮೀನಾಕ್ಷಿ ಚೌಧರಿ ಅವರು ನಾಯಕಿಯರಾಗಿ ಚಿತ್ರತಂಡಕ್ಕೆ ಸೇರ್ಪಡೆ ಆದರು. 2024ರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ‘ಗುಂಟೂರು ಖಾರಂ’ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us