ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬುಗೆ ಇರಲಿದೆ 8 ಗೆಟಪ್?
ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಜೊತೆಗಿನ ಸಿನಿಮಾಗಾಗಿ ನಟ ಮಹೇಶ್ ಬಾಬು ಅವರು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಮಹೇಶ್ ಬಾಬು ಅವರ ಪಾತ್ರಕ್ಕೆ ಲುಕ್ ಟೆಸ್ಟ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಹಲವು ಗೆಟಪ್ಗಳು ಇರಲಿವೆ. ಆ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಗಾಸಿಪ್ ಹರಿದಾಡುತ್ತಿವೆ.
ನಟ ಮಹೇಶ್ ಬಾಬು ಅವರು ‘ಗುಂಟೂರು ಖಾರಂ’ ಸಿನಿಮಾದ ಬಳಿಕ ಮುಂದಿನ ಚಿತ್ರದ ಕಡೆಗೆ ಗಮನ ಹರಿಸಿದ್ದಾರೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಹಾಗೂ ಮಹೇಶ್ ಬಾಬು ಅವರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಹೊಸ ಚಿತ್ರದ (SSMB 29) ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಸಿನಿಮಾಗಾಗಿ ಮಹೇಶ್ ಬಾಬು ಅವರು ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಶೀರ್ಷಿಕೆ ಬಹಿರಂಗ ಆಗಿರದ ಈ ಸಿನಿಮಾ ಬಗ್ಗೆ ಒಂದು ತಾಜಾ ಗಾಸಿಪ್ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು (Mahesh Babu) ಅವರಿಗೆ 8 ಗೆಟಪ್ಗಳು ಇರಲಿವೆ ಎಂದು ಹೇಳಲಾಗುತ್ತಿದೆ.
ರಾಜಮೌಳಿ ನಿರ್ದೇಶನ ಮಾಡುವ ಸಿನಿಮಾಗಳಲ್ಲಿ ಹೀರೋಗಳ ಗೆಟಪ್ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಅದಕ್ಕಾಗಿ ಹೀರೋಗಳು ಹಗಲಿರುಳು ಕಷ್ಟಪಡಬೇಕು. ಅದಕ್ಕೆ ಈಗ ಮಹೇಶ್ ಬಾಬು ಕೂಡ ಬದ್ಧರಾಗಿದ್ದಾರೆ. ಈ ಸಿನಿಮಾಗಾಗಿ ಲುಕ್ ಟೆಸ್ಟ್ ನಡೆಯುತ್ತಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ 8 ಗೆಟಪ್ಗಳನ್ನು ಈಗಾಗಲೇ ಫೈನಲ್ ಮಾಡಲಾಗಿದೆ ಎಂದು ಗಾಸಿಪ್ ಹರಡಿದೆ. ಇದನ್ನು ಕೇಳಿ ಮಹೇಶ್ ಬಾಬು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಮಹೇಶ್ ಬಾಬು; ಇದು ರಾಜಮೌಳಿ ಆದೇಶ
ಇದು ಮಹೇಶ್ ಬಾಬು ನಟನೆಯ 29ನೇ ಸಿನಿಮಾ. ಹಾಗಾಗಿ ತಾತ್ಕಾಲಿಕವಾಗಿ ‘SSMB 29’ ಎಂದು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿನ ಮಹೇಶ್ ಬಾಬು ಅವರ ಯಾವುದೇ ಗೆಟಪ್ ಬಹಿರಂಗ ಆಗುವಂತಿಲ್ಲ. ಹಾಗಾಗಿ ರಾಜಮೌಳಿ ಅವರು ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಇನ್ಮುಂದೆ ಮಹೇಶ್ ಬಾಬು ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ ಎಂದು ರಾಜಮೌಳಿ ಅವರು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಮಹೇಶ್ ಬಾಬು-ರಾಜಮೌಳಿ ಸಿನಿಮಾ ಮುಹೂರ್ತಕ್ಕೆ ದಿನಾಂಕ ನಿಗದಿ
ನಿರೀಕ್ಷಿಸಿದ ರೀತಿಯಲ್ಲಿ ‘ಗುಂಟೂರು ಖಾರಂ’ ಸಿನಿಮಾ ಕಲೆಕ್ಷನ್ ಮಾಡಲಿಲ್ಲ. ಹಾಗಾಗಿ ಮಹೇಶ್ ಬಾಬು ಅವರು ಮುಂದಿನ ಸಿನಿಮಾದಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ರಾಜಮೌಳಿ ಜೊತೆ ಅವರು ಕೈ ಜೋಡಿಸುತ್ತಿರುವುದರಿಂದ ಸಹಜವಾಗಿಯೇ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಎಲ್ಲರೂ ಊಹಿಸಿದ್ದಾರೆ. ಹಾಗಂತ ಆ ಗೆಲುವು ಸುಲಭಕ್ಕೆ ದಕ್ಕುವುದಿಲ್ಲ. ಮಹೇಶ್ ಬಾಬು ಅವರು ಈ ಚಿತ್ರಕ್ಕೆ ವರ್ಷಗಟ್ಟಲೆ ಕಾಲ್ಶೀಟ್ ನೀಡಲಿದ್ದಾರೆ. ಆದಷ್ಟು ಬೇಗ ಈ ಚಿತ್ರತಂಡದಿಂದ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆಸ್ಕರ್ ಪುರಸ್ಕೃತ ಮ್ಯೂಸಿಕ್ ಕಂಪೋಸರ್ ಎಂಎಂ ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.