ಹಿಂದೂ ಧರ್ಮಕ್ಕೆ ಮತಾಂತರ ಆಗಲು ಅಲಿ ಅಕ್ಬರ್​ ನಿರ್ಧಾರ; ಬಲವಾದ ಕಾರಣ ನೀಡಿದ ಖ್ಯಾತ ನಿರ್ದೇಶಕ

| Updated By: ಡಾ. ಭಾಸ್ಕರ ಹೆಗಡೆ

Updated on: Dec 11, 2021 | 2:42 PM

Malayalam director Ali Akbar: ಬಿಪಿನ್​ ರಾವತ್​ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಬಳಸಿ ಕಮೆಂಟ್​ ಮಾಡಿದ್ದರು. ಅದನ್ನು ಖಂಡಿಸಿ ಅಲಿ ಅಕ್ಬರ್​ ಅವರು ಮತಾಂತರದ ನಿರ್ಧಾರ ತೆಗೆದುಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರ ಆಗಲು ಅಲಿ ಅಕ್ಬರ್​ ನಿರ್ಧಾರ; ಬಲವಾದ ಕಾರಣ ನೀಡಿದ ಖ್ಯಾತ ನಿರ್ದೇಶಕ
ಅಲಿ ಅಕ್ಬರ್
Follow us on

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್​ (Ali Akbar) ಅವರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದಾರೆ. ‘ನಾನು ಮತ್ತು ನನ್ನ ಹೆಂಡತಿ ಹಿಂದೂ ಧರ್ಮಕ್ಕೆ (Hinduism) ಮತಾಂತರ ಆಗುತ್ತೇವೆ. ಇನ್ನೆಂದೂ ನಾವು ಮುಸ್ಲಿಮರಾಗಿ ಮುಂದುವರಿಯುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಬಿಪಿನ್​ ರಾವತ್​ (Bipin Rawat) ಅವರ ನಿಧನಕ್ಕೆ ಸಂಬಂಧಿಸಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಕೆಲವು ಮುಸ್ಲಿಮರು ಖುಷಿಯ ಎಮೋಜಿಗಳನ್ನು ಕಮೆಂಟ್​ ಮಾಡಿದ್ದನ್ನು ಖಂಡಿಸಿ ಅಲಿ ಅಕ್ಬರ್​ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಸ್ಲಿಂ ಧರ್ಮದಲ್ಲಿನ ನಂಬಿಕೆಗಳನ್ನು ಕೈ ಬಿಡುವುದಾಗಿ ಅವರು ತಿಳಿಸಿದ್ದಾರೆ.

ಮಿಲಿಟರಿ ಅಧಿಕಾರಿ ಬಿಪಿನ್​ ರಾವತ್​ ಅವರ ಸಾವಿಗೆ ಅಗೌರವ ಸೂಚಿಸಿದ ದೇಶವಿರೋಧಿ ಮುಸ್ಲಿಮರ ಕೃತ್ಯವನ್ನು ಯಾವುದೇ ಮುಸ್ಲಿಂ ನಾಯಕರೂ ಖಂಡಿಸಿಲ್ಲ. ಹಾಗಾಗಿ ಈ ಧರ್ಮದ ಬಗ್ಗೆ ತಮಗೆ ನಂಬಿಕೆ ಉಳಿದಿಲ್ಲ ಎಂದು ಅಲಿ ಅಕ್ಬರ್​ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್​ಬುಕ್​ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಅವರು ತಿಳಿಸಿದ್ದಾರೆ.

‘ಹುಟ್ಟಿನಿಂದ ನಾನು ಪಡೆದ ಗುರುತನ್ನು ಇಂದು ತ್ಯಜಿಸುತ್ತಿದ್ದೇನೆ. ಇಂದಿನಿಂದ ನಾನು ಮುಸ್ಲಿಂ ಅಲ್ಲ. ಇಂದಿನಿಂದ ನಾನು ಭಾರತೀಯ. ಭಾರತದ ವಿರುದ್ಧ ನಗುವ ಎಮೋಜಿಗಳನ್ನು ಪೋಸ್ಟ್​ ಮಾಡಿದ ಜನರಿಗೆ ಇದೇ ನನ್ನ ಉತ್ತರ’ ಎಂದು ಅಲಿ ಅಕ್ಬರ್​ ಹೇಳಿದ್ದಾರೆ. ಅಲಿ ಅಕ್ಬರ್ ಮಾಡಿರುವ ಈ ಪೋಸ್ಟ್​ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಕೆಲವು ಮುಸ್ಲಿಮರಿಂದ ವಿರೋಧ ಕೂಡ ವ್ಯಕ್ತವಾಗಿದೆ. ಕೆಲವರು ಅವಾಚ್ಯ ಶಬ್ಧಗಳಿಂದ ಅಲಿ ಅಕ್ಬರ್​ ಅವರನ್ನು ನಿಂದಿಸಿದ್ದಾರೆ. ಅಂಥವರಿಗೆ ಅದೇ ರೀತಿಯ ಭಾಷೆಯಲ್ಲಿ ಅಲಿ ಅಕ್ಬರ್​ ಉತ್ತರ ನೀಡಿದ್ದಾರೆ.

ಈ ವಿಡಿಯೋ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಫೇಸ್​ಬುಕ್​ನಿಂದ ಅದು ಕಾಣೆ ಆಗಿದೆ. ಬಳಿಕ ವಾಟ್ಸಪ್​ ಮೂಲಕ ವೈರಲ್​ ಆಗಿದೆ. ಬಿಪಿನ್​ ರಾವತ್ ಅವರ ಸಾವನ್ನು ಸಂಭ್ರಮಿಸುವವರನ್ನು ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಅಲಿ ಅಕ್ಬರ್​ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:

ಹರಿದ್ವಾರದಲ್ಲಿ ಬಿಪಿನ್​ ರಾವತ್​ ಚಿತಾಭಸ್ಮ ವಿಸರ್ಜನೆ; ಸಿಡಿಎಸ್​ ಸ್ಮರಣಾರ್ಥ ಉತ್ತರಾಖಂಡ್​​ನಲ್ಲಿ ಶಹೀದ್​ ಸೈನ್ಯ ಧಾಮ ನಿರ್ಮಾಣ

ಅಂದು ಪಾಕ್​ ಸೇನಾ ಮುಖ್ಯಸ್ಥ ಬಜ್ವಾರನ್ನು ತಬ್ಬಿದ್ದ ನವಜೋತ್​ ಸಿಂಗ್ ಸಿಧು, ಇಂದು ಬಿಪಿನ್​ ರಾವತ್​ ನಿಧನಕ್ಕೆ ಸಂತಾಪ ಸೂಚಿಸಿಲ್ಲ-ಬಿಜೆಪಿ ಆಕ್ಷೇಪ

Published On - 9:54 am, Sat, 11 December 21