ದೇಶಬಿಟ್ಟು ಪರಾರಿಯಾಗಲಿದ್ದ ಮಲಯಾಳಂ ಸಿನಿಮಾ ನಿರ್ಮಾಪಕ ಬಂಧನ

|

Updated on: May 16, 2024 | 4:21 PM

ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ಮಾಪಕರಲ್ಲಿ ಒಬ್ಬರಾದ ಜಾನಿ ಸಾಗರಿಯಾ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿಯೊಬ್ಬರಿಗೆ ದೊಡ್ಡ ಮೊತ್ತದ ಹಣ ವಂಚನೆ ಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.

ದೇಶಬಿಟ್ಟು ಪರಾರಿಯಾಗಲಿದ್ದ ಮಲಯಾಳಂ ಸಿನಿಮಾ ನಿರ್ಮಾಪಕ ಬಂಧನ
Follow us on

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಚಿತ್ರರಂಗದ ನಿರ್ಮಾಪಕ (Producer) ಜಾನಿ ಸಾಗರಿಗಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅದೂ ಆತ ದೇಶಬಿಟ್ಟು ಪರಾರಿಯಾಗುವ ಯತ್ನದಲ್ಲಿದ್ದಾಗಲೇ ಪೊಲೀಸರು ನಿರ್ಮಾಪಕನನ್ನು ಬಂಧಿಸಿದ್ದಾರೆ. ಮಲಯಾಳಂ ಚಿತ್ರರಂಗಕ್ಕೆ ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ಜಾನಿ ಸಾಗರಿಗಾ ವಿರುದ್ಧ ಕೇರಳದ ಉದ್ಯಮಿಯೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ತಮ್ಮ ಬಂಧನ ನಿಶ್ಚಯವಾಗುತ್ತಿದ್ದಂತೆ ದೇಶ ಬಿಟ್ಟು ದುಬೈಗೆ ಪರಾರಿಯಾಗುವ ಯತ್ನದಲ್ಲಿ ಜಾನಿ ಇರುವಾಗಲೇ ಕೇರಳ ಸಿಸಿಬಿಯವರು ಆತನನ್ನು ಬಂಧಿದ್ದಾರೆ.

ಎನ್​ಆರ್​ಐ ಆಗಿರು ದ್ವಾರಕ್ ಉದಯಶಂಕರ್ ಎಂಬ ಉದ್ಯಮಿಗೆ ಜಾನಿ ಸಾಗರಿಗಾ 2.75 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ದ್ವಾರಕ್ ಉದಯಶಂಕರ್, ಜಾನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. 2018 ರಲ್ಲಿ ‘ನಾನ್ ಸೆನ್ಸ್’ ಹೆಸರಿನ ಸಿನಿಮಾವನ್ನು ಜಾನಿ ಸಾಗರಿಕಾ ನಿರ್ಮಾಣ ಮಾಡಿದ್ದರು. ಆ ಸಿನಿಮಾದ ನಿರ್ಮಾಣಕ್ಕಾಗಿ 2.75 ಕೋಟಿ ಹಣವನ್ನು ಜಾನಿ, ದ್ವಾರಕ್ ಅವರಿಂದ ಪಡೆದಿದ್ದರಂತೆ. ಆದರೆ ತಮ್ಮ ಹಣವನ್ನು ಮರಳಿ ನೀಡುವಂತೆ ಕೇಳಿದಾಗ ಜಾನಿ ಕೊಟ್ಟಿದ್ದು ಕೇವಲ 50 ಲಕ್ಷ ರೂಪಾಯಿಗಳು ಮಾತ್ರ.

ಇದನ್ನೂ ಓದಿ:ನಾಲ್ಕೇ ತಿಂಗಳಲ್ಲಿ 1000 ಕೋಟಿ ರೂ. ಬಿಸ್ನೆಸ್ ಮಾಡಿದ ಮಲಯಾಳಂ ಇಂಡಸ್ಟ್ರಿ; ನಮ್ಮಲ್ಲೇಕೆ ಸಾಧ್ಯವಾಗಿಲ್ಲ?

ಬಾಕಿ ಮೊತ್ತವನ್ನು ಹಿಂತಿರುಗಿಸುವಂತೆ ಕೇಳಿದಾಗ ಜಾನಿ ಅವರಿಂದ ಸೂಕ್ತ ಪ್ರತಿಕ್ರಿಯೆಗಳು ಬಂದಿರಲಿಲ್ಲ ಹಾಗಾಗಿ ದ್ವಾರಕ್ ಉದಯಶಂಕರ್ ಜಾನಿ ವಿರುದ್ದ ದೂರು ನೀಡಿದ್ದರು. ಜಾನಿ ಮಾತ್ರವೇ ಅಲ್ಲದೆ ಅವರ ಪುತ್ರ ರಾನ್ ಥಾಮಸ್ ವಿರುದ್ಧವೂ ಸಹ ದೂರು ದಾಖಲಾಗಿತ್ತು. ಕಳೆದ ವರ್ಷವೇ ಈ ದೂರು ದಾಖಲಾಗಿತ್ತು. ವಿಚಾರಣೆ ನಡೆಯುತ್ತಲೇ ಇತ್ತು. ಆದರೆ ಅಂತಿಮವಾಗಿ ಪ್ರಕರಣದಲ್ಲಿ ತಮ್ಮ ಬಂಧನವಾಗುತ್ತದೆ ಎಂದು ಗೊತ್ತಾಗುತ್ತಿದ್ದಂತೆ ಜಾನಿ ದುಬೈಗೆ ಹಾರಲು ಸಜ್ಜಾಗಿದ್ದರು. ದುಬೈಗೆ ತೆರಳಲೆಂದು ವಿಮಾನ ನಿಲ್ದಾಣಕ್ಕೆ ಹೋಗಿದ್ದಾಗ, ಜಾನಿಯನ್ನು ವಶಕ್ಕೆ ಪಡೆದ ಇಮಿಗ್ರೇಶನ್ ಬ್ಯುರೋನವರು ಬಳಿಕ ಜಾನಿಯನ್ನು ಸಿಸಿಬಿ ವಶಕ್ಕೆ ಒಪ್ಪಿಸಿದ್ದಾರೆ.

ಜಾನಿ ಕೆಲವು ಒಳ್ಳೆಯ ಮಲಯಾಳಂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಹಿಂದಿ, ತೆಲುಗಿನಲ್ಲಿ ಸೂಪರ್ ಹಿಟ್ ಆದ ‘ಬಾಡಿಗಾರ್ಡ್’ ಸಿನಿಮಾದ ಮಲಯಾಳಂ ಮೂಲ ಸಿನಿಮಾವನ್ನು ಇವರೆ ನಿರ್ಮಾಣ ಮಾಡಿದ್ದರು. ಅದು ಮಾತ್ರವೇ ಅಲ್ಲದೆ, ಹಿಟ್ ಸಿನಿಮಾಗಳಾದ ‘ತಾಂಡವಂ’, ‘ಆರ್​ಕುಟ್ ಒರು ಒರಮಕುಟ್ಟುಂ’, ‘ಮುಪ್ಪತ್ತು ವೆಳ್ಳಿಕ್ಕಾಸು’, ‘ನಾನ್​ಸೆನ್ಸ್’ ಸಿನಿಮಾಗಳನ್ನು ಜಾನಿ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ