AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಅಪ್​ಡೇಟ್ ಕೊಟ್ಟ ಸುದೀಪ್: ‘ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಕ್ತಾಯ

Kichcha Sudeep: ಕಿಚ್ಚ ಸುದೀಪ್ ತಮ್ಮ ಸಿನಿಮಾದ ಬಗ್ಗೆ ದೊಡ್ಡ ಅಪ್​ಡೇಟ್ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಸುದೀಪ್, ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾಗಿ ಹೇಳಿದ್ದಾರೆ.

ಭರ್ಜರಿ ಅಪ್​ಡೇಟ್ ಕೊಟ್ಟ ಸುದೀಪ್: ‘ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಕ್ತಾಯ
ಕಿಚ್ಚ ಸುದೀಪ್
ಮಂಜುನಾಥ ಸಿ.
|

Updated on: May 16, 2024 | 1:18 PM

Share

ಕಿಚ್ಚ ಸುದೀಪ್​ರ (Kichcha Sudeep) ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಯ್ತು. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್​ರ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್ ಸಹ ಸಿನಿಮಾಗಳಿಂದ ಸಣ್ಣ ಬಿಡುವು ಪಡೆದಿದ್ದರು. ಬಳಿಕ ‘ಮ್ಯಾಕ್ಸ್’ ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದರು. ಕಳೆದ 10 ತಿಂಗಳಿನಿಂದಲೂ ಸುದೀಪ್ ‘ಮ್ಯಾಕ್ಸ್’ ಸಿನಿಮಾಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಹೆಚ್ಚು ಅಪ್​ಡೇಟ್​ಗಳನ್ನು ನೀಡಿರಲಿಲ್ಲ. ಇದೀಗ ಸ್ವತಃ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ್ದಾರೆ.

ಕಿಚ್ಚ ಸುದೀಪ್, ಟ್ವಿಟ್ಟರ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದಿದ್ದಾರೆ. ವಿಡಿಯೋನಲ್ಲಿ ತಾವು ತಂಗಿದ್ದ ಹೋಟೆಲ್​ನ ಪರಿಸರ, ಆ ನಂತರ ತಾವು ಪ್ರತಿದಿನ ಓಡಾಡುವ ದಾರಿಯ ವಿಡಿಯೋ, ಸಿನಿಮಾ ಶೂಟಿಂಗ್ ಸೆಟ್, ಸೆಟ್​ ಒಳಗೆ ತಮ್ಮ ಮೇಕಪ್ ರೂಂ ಇನ್ನಿತರೆಗಳನ್ನೆಲ್ಲ ವಿಡಿಯೋನಲ್ಲಿ ತೋರಿಸಿ ಕೊನೆಗೆ ‘ಮ್ಯಾಕ್ಸ್’ ಚಿತ್ರೀಕರಣ ಮುಗಿದಿದೆ’ ಎಂದು ಹೇಳಿದ್ದಾರೆ. ಆ ಮೂಲಕ ಸುದೀಪ್ ಅಭಿಮಾನಿಗಳು ಮತ್ತೆ ನಿರೀಕ್ಷೆಗಳನ್ನು ಮೂಡಿಸಿಕೊಂಡು ಸಿನಿಮಾಕ್ಕಾಗಿ ತುದಿಗಾಲಲ್ಲಿ ಕಾಯುವಂತೆ ಮಾಡಿದ್ದಾರೆ.

ಇದನ್ನೂ ಓದಿ:ಕಿಚ್ಚ ಸುದೀಪ್ ಕುಟುಂಬದ ಜೊತೆ ಊಟ ಸವಿದ ಬಿಗ್ ಬಾಸ್ ವಿನಯ್; ‘ನೀವೆ ಲಕ್ಕಿ’ ಎಂದ ಫ್ಯಾನ್ಸ್  

ವಿಡಿಯೋ ಜೊತೆಗೆ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣದ ಅನುಭವದ ಬಗ್ಗೆಯೂ ಬರೆದುಕೊಂಡಿರುವ ಸುದೀಪ್, ‘ಮಹಾಬಲಿಪುರಂನಲ್ಲಿ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿದೆವು. 10 ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಹತ್ತು ತಿಂಗಳ ಪಯಣದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದ್ಭುತವಾದ ತಂಡ ಹಾಗೂ ಕಲಾವಿದರೊಟ್ಟಿಗೆ ಈ ಹತ್ತು ತಿಂಗಳು ಕೆಲಸ ಮಾಡಿದೆ. ಚಿತ್ರೀಕರಣ ಸುಗಮವಾಗಿ ಸಾಗಲು ನೆರವಾದ ಧನು ಅವರಿಗೆ ಧನ್ಯವಾದ ಎಂದಿರುವ ಸುದೀಪ್, ಸಿನಿಮಾದ ನಿರ್ದೇಶಕ ವಿಜಯ್ ಹಾಗೂ ಅವರ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ಸಹ ಹೇಳಿದ್ದಾರೆ.

‘ಮ್ಯಾಕ್ಸ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಜಯ್ ಕಾರ್ತಿಕೇಯನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕೆಆರ್​ಜಿ ಸ್ಟುಡಿಯೋಸ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಮಹಾಬಲಿಪುರಂನಲ್ಲಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದ ಬಗ್ಗೆ ಸುದೀಪ್​ ಬಹಳ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಎರಡು-ಮೂರು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಈ ಸಿನಿಮಾದ ಬಳಿಕ ಅನುಪ್ ಬಂಡಾರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ಅದಾದ ಬಳಿಕ ತಮಿಳಿನ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ