AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohanlal: ಅನಾಯಾಸವಾಗಿ 100 ಕೆಜಿ ತೂಕ ಎತ್ತಿದ ಮೋಹನ್​ಲಾಲ್​; ವೈರಲ್​ ವಿಡಿಯೋ ನೋಡಿ ಹದಿಹರೆಯದವರಿಗೂ ಅಚ್ಚರಿ

Mohanlal Viral Video: 63ರ ಪ್ರಾಯದ ಮೋಹನ್​ಲಾಲ್​ ಅವರು ಕಷ್ಟಪಟ್ಟು ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅವರು ಮಾದರಿ ಆಗಿದ್ದಾರೆ. ಅವರ ಜಿಮ್​ ವಿಡಿಯೋ ವೈರಲ್​ ಆಗಿದೆ.

Mohanlal: ಅನಾಯಾಸವಾಗಿ 100 ಕೆಜಿ ತೂಕ ಎತ್ತಿದ ಮೋಹನ್​ಲಾಲ್​; ವೈರಲ್​ ವಿಡಿಯೋ ನೋಡಿ ಹದಿಹರೆಯದವರಿಗೂ ಅಚ್ಚರಿ
ಮೋಹನ್​​ಲಾಲ್​
ಮದನ್​ ಕುಮಾರ್​
|

Updated on: Jul 26, 2023 | 11:34 AM

Share

ನಟ ಮೋಹನ್​ಲಾಲ್​ (​Mohanlal) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರಿಗೆ 63 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಮೈನವಿರೇಳಿಸುವಂತಹ ಸ್ಟಂಟ್ಸ್​ ಮಾಡುತ್ತಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಅನಾಯಾಸವಾಗಿ ನಟಿಸುತ್ತಾರೆ. ಆದರೆ ಇದರ ಹಿಂದೆ ಅವರು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಾರೆ. ಮೋಹನ್​ಲಾಲ್​ ಅವರ ಕಸರತ್ತು ಹೇಗಿರುತ್ತದೆ ಎಂಬುದರ ಝಲಕ್​ ತೋರಿಸುವಂತಹ ಒಂದು ವಿಡಿಯೋ (Mohanlal Gym Video) ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಮೋಹನ್​ಲಾಲ್​ ಅವರು ಬರೋಬ್ಬರಿ 100 ಕೆಜಿ ತೂಕವನ್ನು ಅನಾಯಾಸವಾಗಿ ಎತ್ತುವ ದೃಶ್ಯ ಇದೆ. ಇದನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನಿಜವಾಗಿಯೂ ಮೋಹನ್​ಲಾಲ್​ ಅವರಿಗೆ 63 ವರ್ಷ (Mohanlal Age) ಆಗಿದೆಯೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ಮೋಹನ್​ಲಾಲ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್​ ಮಾಡುತ್ತವೆ. ಫಿಟ್ನೆಸ್​ ಬಗ್ಗೆ ಮೋಹನ್​ಲಾಲ್​ ಅವರು ಹೆಚ್ಚು ಆಸಕ್ತಿ ವಹಿಸುತ್ತಾರೆ ಎಂಬುದಕ್ಕೆ ಈಗ ವೈರಲ್​ ಆಗಿರುವ ವಿಡಿಯೋ ಸಾಕ್ಷಿ. ಹಿರಿಯ ನಟನ ಬದ್ಧತೆ ನೋಡಿ ಎಲ್ಲರೂ ವಾವ್​ ಎನ್ನುತ್ತಿದ್ದಾರೆ. ಜಿಮ್​ಗೆ ಹೋಗಲು ಸೋಮಾರಿತನ ತೋರುವ ಹದಿಹರೆಯದವರು ನಾಚುವಂತಿದೆ ಮೋಹನ್​ಲಾಲ್​ ಅವರ ಈ ವಿಡಿಯೋ.

View this post on Instagram

A post shared by Mohanlal (@mohanlal)

ಎಲ್ಲ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ವಾತಾವರಣ ತುಂಬ ಕೂಲ್​ ಆಗಿದೆ. ಇಂಥ ಸಮಯದಲ್ಲಿ ಮನೆಯಲ್ಲೇ ಇದ್ದುಕೊಂಡು ಬಿಸಿಬಿಸಿ ಕಾಫಿ, ಟೀ ಕುಡಿಯುತ್ತ, ಕುರುಕಲು ತಿಂಡಿ ತಿನ್ನುತ್ತ ಕಾಲ ಕಳೆಯುವವರೇ ಹೆಚ್ಚು. ಚಳಿ ಎಂಬ ನೆಪ ಹೇಳಿ ಜಿಮ್​ಗೆ ಚಕ್ಕರ್​ ಹಾಕುವವರಿಗೂ ಲೆಕ್ಕವಿಲ್ಲ. ಆದರೆ ಮೋಹನ್​ಲಾಲ್​ ಅವರು ಇಂಥ ಯಾವುದೇ ನೆಪವನ್ನೂ ಹೇಳುತ್ತಿಲ್ಲ. ಕಷ್ಟಪಟ್ಟು ಜಿಮ್​ನಲ್ಲಿ ಬೆವರು ಹರಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೂ ಅವರು ಮಾದರಿ ಆಗಿದ್ದಾರೆ.

ಇದನ್ನೂ ಓದಿ: Mohanlal: ವೈರಲ್​ ಆಗಿದೆ ‘ಮಲೈಕೋಟೈ ವಾಲಿಬನ್​’ ಫಸ್ಟ್​ ಲುಕ್​; 62ರ ಪ್ರಾಯದಲ್ಲೂ ಮೋಹನ್​ಲಾಲ್​ ಸಾಹಸ

‘ಮಲೈಕೋಟೈ ವಾಲಿಬನ್​’ ಸಿನಿಮಾದಲ್ಲಿ ಮೋಹನ್​ಲಾಲ್​ ಅವರು ನಟಿಸುತ್ತಿದ್ದಾರೆ. ‘ಲೂಸಿಫರ್​ 2’, ‘ವೃಷಭ’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿವೆ. ಕಾರಣಾಂತರಗಳಿಂದ ಪೃಥ್ವಿರಾಜ್​ ಸುಕುಮಾರನ್​ ನಿರ್ದೇಶನದ‘ಲೂಸಿಫರ್​ 2’ ಸಿನಿಮಾದ ಶೂಟಿಂಗ್​ ವಿಳಂಬ ಆಗಿದೆ. ‘ವೃಷಭ’ ಚಿತ್ರಕ್ಕೆ ಕನ್ನಡದ ನಿರ್ದೇಶಕ ನಂದಕಿಶೋರ್​ ಅವರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಮೋಹನ್​ಲಾಲ್​ ಅವರ ಪುತ್ರ ಪ್ರಣವ್​ ಮೋಹನ್​ಲಾಲ್​ ಕೂಡ ನಟನಾಗಿ ಮಿಂಚುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್​​​​​​​​​ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ