14 ವರ್ಷಗಳ ಬಳಿಕ ಗೆದ್ದ ಮಮ್ಮುಟಿ, ಮೋಹನ್​ಲಾಲ್​ ಅಭಿನಂದನೆ

Mammooty-Mohanlal: 14 ವರ್ಷಗಳ ಬಳಿಕ ಗೆದ್ದಿರುವ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟಿಗೆ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್​ಲಾಲ್ ಅಭಿನಂದಿಸಿದ್ದಾರೆ.

14 ವರ್ಷಗಳ ಬಳಿಕ ಗೆದ್ದ ಮಮ್ಮುಟಿ, ಮೋಹನ್​ಲಾಲ್​ ಅಭಿನಂದನೆ
ಮೋಹನ್-ಮಮ್ಮುಟಿ
Follow us
ಮಂಜುನಾಥ ಸಿ.
|

Updated on:Jul 21, 2023 | 9:34 PM

ತಮಿಳು ಚಿತ್ರರಂಗದಲ್ಲಿ ರಜನೀಕಾಂತ್ (Rajinikanth)-ಕಮಲ್ ಹಾಸನ್ (Kamal Haasan) ಇದ್ದಂತೆ ಮಲಯಾಳಂ ಚಿತ್ರರಂಗದಲ್ಲಿ ಮಮ್ಮುಟಿ (Mammooty) ಹಾಗೂ ಮೋಹನ್​ಲಾಲ್ (Mohan Lal). ಇಂದಿಗೂ ಸಹ ಈ ಇಬ್ಬರೂ ಮಲಯಾಳಂ ಚಿತ್ರರಂಗದ ಸ್ಟಾರ್ ನಟರು. ದಶಕಗಳಿಂದಲೂ ಸಿನಿಮಾರಂಗದಲ್ಲಿ ನಾಯಕ ನಟರಾಗಿ ಸಿನಿಮಾಗಳನ್ನು ಮಾಡುತ್ತಲೇ ಬಂದಿರುವ ಈ ಇಬ್ಬರ ನಡುವೆ ಆರೋಗ್ಯಕರ ಸ್ಪರ್ಧೆ ಮೊದಲಿನಿಂದಲೂ ಇದೆ. ಸ್ಪರ್ಧೆ ಏನೇ ಇದ್ದರೂ ಇಬ್ಬರೂ ತಮ್ಮ ಗೆಳೆತನವನ್ನು ಮುಂದುವರೆಸಿಕೊಂಡು ಬಂದು ಯುವನಟರಿಗೆ ಮಾದರಿಯಾಗಿದ್ದಾರೆ. ಇದೀಗ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಗಳು ಘೋಷಣೆಯಾಗಿದ್ದು ಮಮ್ಮುಟಿ ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದಾರೆ. ಮೋಹನ್​ಲಾಲ್​ ಸಿನಿಮಾಗಳೂ ಸಹ ಸ್ಪರ್ಧೆಯಲ್ಲಿದ್ದರೂ ಮಮ್ಮುಟಿಗೆ ಈ ಬಾರಿ ಅತ್ಯುತ್ತಮ ನಟ ಗೌರವ ಧಕ್ಕಿದೆ.

2009 ರಲ್ಲಿ ಮಮ್ಮುಟಿಗೆ ಕೊನೆಯ ಬಾರಿಗೆ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿ ಧಕ್ಕಿತ್ತು. ಈಗ 14 ವರ್ಷಗಳ ಬಳಿಕ ಮಮ್ಮುಟಿ ಮತ್ತೊಮ್ಮೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2022 ರಲ್ಲಿ ಸೆನ್ಸಾರ್ ಆಗಿದ್ದ ‘ನನ್ಪಕಲ್ ನೆರತ್ತು ಮಯಕ್ಕಂ’ ಸಿನಿಮಾದ ಅತ್ಯುತ್ತಮ ನಟನೆಗೆ ಮಮ್ಮುಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಯಾರದ್ದೋ ಮನೆಗೆ ಬಂದು ಅದೇ ಮನೆಯ ಸದಸ್ಯನಂತೆ ವರ್ತಿಸುವ ಜೇಮ್ಸ್ ಹೆಸರಿನ ಪಾತ್ರದಲ್ಲಿ ಮಮ್ಮುಟಿ ನಟಿಸಿದ್ದರು. ಈ ಸಿನಿಮಾ ಬಹಳ ಒಳ್ಳೆಯ ವಿಮರ್ಶೆಗಳನ್ನು ಗಳಿಸಿಕೊಂಡಿತ್ತು.

ಇದನ್ನೂ ಓದಿ:Mohanlal: ವೈರಲ್​ ಆಗಿದೆ ‘ಮಲೈಕೋಟೈ ವಾಲಿಬನ್​’ ಫಸ್ಟ್​ ಲುಕ್​; 62ರ ಪ್ರಾಯದಲ್ಲೂ ಮೋಹನ್​ಲಾಲ್​ ಸಾಹಸ

ಮಮ್ಮುಟಿ ಈವರೆಗೆ ಆರು ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಯ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಮ್ಮೆ ಎರಡನೇ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೋಹನ್​ಲಾಲ್ ಸಹ ಆರು ಬಾರಿ ಆರು ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎರಡು ಬಾರಿ ದ್ವಿತೀಯ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಬ್ಬರೂ ನಟರು ತಲಾ ಒಂದೊಂದು ಬಾರಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ಬಾರಿ ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಗಳು ಘೋಷಣೆ ಆಗುವಾಗಲು ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಮಮ್ಮುಟಿಗೆ ಬರುತ್ತದೆಯೋ ಮೋಹಲ್​ಲಾಲ್​ಗೆ ಬರುತ್ತದೆಯೋ ಎಂಬ ಕುತೂಹಲ ಸಹಜ. ಅದೇ ಕುತೂಹಲ ಈ ಬಾರಿಯೂ ಇತ್ತು. ಈ ಬಾರಿ ಮಮ್ಮುಟಿ ಗೆದ್ದಿದ್ದಾರೆ.

ಅತ್ಯುತ್ತಮ ಸಿನಿಮಾ ಪ್ರಶಸ್ತಿ ‘ನಾನ್ ತಾನ್ ಕೇಸ್ ಕೊಡು’ ಸಿನಿಮಾಕ್ಕೆ ಧಕ್ಕಿದೆ. ‘ನೋಟಿಫಿಕೇಶನ್’ ಸಿನಿಮಾದ ನಿರ್ದೇಶಕ ಮಹೇಶ್ ನಾರಾಯಣ್​ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ‘ರೇಖಾ’ ಸಿನಿಮಾದ ಅತ್ಯುತ್ತಮ ನಟನೆಗೆ ವಿನ್ಸಿ ಅಲೋಷಿಯಸ್​ಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಜನಪ್ರಿಯ ಸಿನಿಮಾ ‘ತಲ್ಲುಮಾಲ’ ಅತ್ಯುತ್ತಮ ಕೊರಿಯೋಗ್ರಫಿ ಹಾಗೂ ಎಡಿಟಿಂಗ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ‘ನಾನ್ ತಾನ್ ಕೇಸ್ ಕೊಡು’ ಸಿನಿಮಾದ ನಟ ಕುಂಚಾಕೊ ಬೋಬನ್ ಹಾಗೂ ‘ಅಪ್ಪನ್’ ಸಿನಿಮಾದ ಅಲೆನ್ಶಿಯರ್​ ಅವರುಗಳಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಗೆದ್ದ ಗೆಳೆಯ ಮಮ್ಮುಟಿಗೆ ಟ್ವೀಟ್​ ಮಾಡಿ ಮೋಹನ್​ಲಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಶಸ್ತಿ ಗೆದ್ದ ಇತರೆ ನಟ, ನಿರ್ದೇಶಕರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Fri, 21 July 23

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್