AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿ ಸಿನಿಮಾ ರಾಜಕೀಯ, ಸಿಎಂ ಜಗನ್ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

CM Jagan Mohan Reddy: ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿದ ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಆಂಧ್ರ ಚುನಾವಣೆಗೆ ಮುನ್ನ ಸಿನಿಮಾ ಬಿಡುಗಡೆ ಆಗಲಿದೆ.

ಆಂಧ್ರದಲ್ಲಿ ಸಿನಿಮಾ ರಾಜಕೀಯ, ಸಿಎಂ ಜಗನ್ ಕುರಿತ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ಜಗನ್ ಮೋಹನ್ ರೆಡ್ಡಿ
ಮಂಜುನಾಥ ಸಿ.
|

Updated on: Jul 02, 2023 | 6:05 PM

Share

ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ (Andhra Pradesh Assembly Election) ಹತ್ತಿರದಲ್ಲಿದೆ. ಆಡಳಿತ ಪಕ್ಷ ವೈಸಿಪಿ (YCP), ವಿಪಕ್ಷಗಳಾದ ಟಿಡಿಪಿ (TDP), ಜನಸೇನಾ (Janasena), ಕಾಂಗ್ರೆಸ್ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಆಂಧ್ರದಲ್ಲಿ ಸಿನಿಮಾ ಹಾಗೂ ರಾಜಕೀಯ ಇತರೆ ರಾಜ್ಯಗಳಿಗಿಂತಲೂ ಹೆಚ್ಚು ಪರಸ್ಪರ ಸಂಬಂಧ ಹೊಂದಿವೆ. ಈ ಬಾರಿಯ ಚುನಾವಣೆಯಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ನಿರ್ಣಾಯಕ ಸ್ಥಾನ ವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪವನ್ ಪರವಾಗಿ ಹಾಗೂ ಇತರೆ ರಾಜಕೀಯ ಪಕ್ಷಗಳ ಪರವಾಗಿ ಸ್ಟಾರ್ ನಟರು ಪ್ರಚಾರಕ್ಕೆ ಧುಮುಕುವ ಸಾಧ್ಯತೆಯೂ ಇದೆ. ಇದರ ನಡುವೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಕೆಲವರ ಪರವಾಗಿ, ಕೆಲವರ ವಿರುದ್ಧವಾಗಿ ಸಿನಿಮಾಗಳು ತಯಾರಾಗಿದ್ದು ಚುನಾವಣೆ ಹೊಸ್ತಿಲಲ್ಲಿ ಸಾಲು ಸಾಲಾಗಿ ಬಿಡುಗಡೆ ಆಗಲಿವೆ.

ಈ ಚುನಾವಣಾ ಉದ್ದೇಶದಿಂದ ಮಾಡಿರುವ ಸಿನಿಮಾಗಳಲ್ಲಿ ವೈಸಿಪಿ ಪರವಾದ ಸಿನಿಮಾಗಳ ಸಂಖ್ಯೆ ಹೆಚ್ಚಿವೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಜಗನ್ ಮೋಹನ್ ರೆಡ್ಡಿ ಜೀವನ ಆಧರಿಸಿ ವ್ಯೂಹಂ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದು ಸಿನಿಮಾದ ಟ್ರೈಲರ್ ಅನ್ನು ಕೆಲವೇ ದಿನಗಳ ಹಿಂದೆ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜಗನ್ ಎದುರಾಳಿಗಳಾದ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅನ್ನು ತೀರ ಕೆಟ್ಟದಾಗಿ ಚಿತ್ರಿಸಲಾಗಿರವುದು ಟ್ರೈಲರ್​ನಲ್ಲಿಯೇ ತಿಳಿದು ಬರುತ್ತಿದೆ.

ಇನ್ನು ಜಗನ್ ಪರವಾಗಿ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಹಿಂದಿನ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಗನ್​ ಗೆಲ್ಲಲು ಪರೋಕ್ಷವಾಗಿ ಸಹಾಯ ಮಾಡಿದ್ದ ಯಾತ್ರಾ ಸಿನಿಮಾದ ಎರಡನೇ ಭಾಗ ಚಿತ್ರೀಕರಣ ನಡೆಯುತ್ತಿದ್ದು ಸರಿಯಾಗಿ ಆಂಧ್ರ ಚುನಾವಣೆ ನಡೆವ ಒಂದು ತಿಂಗಳ ಹಿಂದೆ ಬಿಡುಗಡೆ ಆಗಲಿದೆ. ಜಗನ್ ತಂದೆ ರಾಜಶೇಖರ ರೆಡ್ಡಿ ಜೀವನ ಕತೆಯುಳ್ಳ ಯಾತ್ರ ಸಿನಿಮಾ ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಮೊದಲು ಬಿಡುಗಡೆ ಆಗಿ, ಜಗನ್​ ಗೆಲುವಿಗೆ ಪರೋಕ್ಷವಾಗಿ ಸಹಾಯ ಮಾಡಿತ್ತು. ಈ ಬಾರಿ ಬಿಡುಗಡೆ ಆಗಲಿರುವ ಯಾತ್ರಾ 2 ಸಿನಿಮಾ ಸ್ವತಃ ಸಿಎಂ ಜಗನ್ ಬಗೆಗೇ ಇರಲಿದೆ.

ಇದನ್ನೂ ಓದಿ:‘ಪ್ರಭಾಸ್ ಮತ್ತು ಮಹೇಶ್ ಬಾಬು ನನಗಿಂತ ದೊಡ್ಡ ಹೀರೋಗಳು’; ಸಾರ್ವಜನಿಕವಾಗಿ ಒಪ್ಪಿಕೊಂಡ ಪವನ್ ಕಲ್ಯಾಣ್

ಯಾತ್ರಾ 2 ಸಿನಿಮಾದ ಪೋಸ್ಟರ್ ಇಂದು ಬಿಡುಗಡೆ ಆಗಿದೆ. 2019ರಲ್ಲಿ ಬಿಡುಗಡೆ ಆಗಿದ್ದ ಯಾತ್ರಾ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಹಿ ವಿ ರಾಘವ್ ಅವರೇ ಯಾತ್ರಾ 2 ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮೊದಲ ಭಾಗವನ್ನು ನಿರ್ಮಾಣ ಮಾಡಿದ್ದ ಶಿವ ಮೇಕ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 2019ರಲ್ಲಿ ಬಿಡುಗಡೆ ಆಗಿದ್ದ ಯಾತ್ರಾ ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಮಮ್ಮುಟಿ ನಟಿಸಿದ್ದರು. ಆ ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಜೀವನ ಹೋರಾಟವನ್ನು ಕಟ್ಟಿಕೊಡಲಾಗಿತ್ತು. ಈಗಿನ ಯಾತ್ರಾ 2 ಸಿನಿಮಾ ಸಂಪೂರ್ಣ ಜಗನ್ ಜೀವನವನ್ನು ಆಧರಿಸಿದ್ದಾಗಿರಲಿದೆ.

ಇನ್ನು ಪವನ್ ಕಲ್ಯಾಣ್ ಸಹ ಚುನಾವಣೆಗೆ ಮುನ್ನ ತನ್ನ ನಟನೆಯ ಎರಡು ಸಿನಿಮಾಗಳನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಪವನ್ ನಟನೆಯ ಹರಿಹರ ವೀರ ಮಲ್ಲು ಐತಿಹಾಸಿಕ ಸಿನಿಮಾ ತೆರೆಗೆ ಬರುತ್ತಿದೆ. ಅದಾದ ಬಳಿಕ ಉಸ್ತಾದ್ ಭಗತ್ ಸಿಂಗ್ ಲಸಿನಿಮಾ ಸಹ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳು ತಮ್ಮ ಪರವಾಗಿ ಅಲೆ ಎಬ್ಬಿಸುವ ನಿರೀಕ್ಷೆ ಪವನ್ ಕಲ್ಯಾಣ್ ಅವರದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?