AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖುದ್ದು ಕರೆ ಮಾಡಿ ನಟಿ ಮಮತಾ ಬಳಿ ಕ್ಷಮೆ ಕೇಳಿದ್ದ ರಜನೀಕಾಂತ್

Rajinikanth: ರಜನೀಕಾಂತ್, ತಮಿಳುನಾಡಿನಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳನ್ನು ಎದುರಿಸಿ ಬೆಳೆದು ಬಂದ ವ್ಯಕ್ತಿ. ಯಾರಿಗೂ ತಲೆಬಾಗಿ ನಡೆದವರೇ ಅಲ್ಲ. ಆದರೆ ಇಂಥಹಾ ರಜನೀಕಾಂತ್ ಅವರು ನಟಿಯೊಬ್ಬರಿಗೆ ಖುದ್ದು ಕರೆ ಮಾಡಿ ಕ್ಷಮೆ ಯಾಚನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಮಮತಾ ಮೋಹನ್​​ದಾಸ್, ಈ ವಿಷಯವನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಖುದ್ದು ಕರೆ ಮಾಡಿ ನಟಿ ಮಮತಾ ಬಳಿ ಕ್ಷಮೆ ಕೇಳಿದ್ದ ರಜನೀಕಾಂತ್
Mamta Rajinikanth
ಮಂಜುನಾಥ ಸಿ.
|

Updated on:Jun 07, 2026 | 10:51 PM

Share

ನಟ ರಜನೀಕಾಂತ್ (Rajinikanth), ಭಾರತದ ಟಾಪ್ ಸೂಪರ್ ಸ್ಟಾರ್. ಅವರೊಟ್ಟಿಗೆ ನಟಿಸಲು ಖ್ಯಾತ ನಟ-ನಟಿಯರು ಈಗಲೂ ಸಾಲು ಗಟ್ಟಿ ನಿಂತಿದ್ದಾರೆ. ರಜನೀಕಾಂತ್, ತಮಿಳುನಾಡಿನಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳನ್ನು ಎದುರಿಸಿ ಬೆಳೆದು ಬಂದ ವ್ಯಕ್ತಿ. ಯಾರಿಗೂ ತಲೆಬಾಗಿ ನಡೆದವರೇ ಅಲ್ಲ. ಆದರೆ ಇಂಥಹಾ ರಜನೀಕಾಂತ್ ಅವರು ನಟಿಯೊಬ್ಬರಿಗೆ ಖುದ್ದು ಕರೆ ಮಾಡಿ ಕ್ಷಮೆ ಯಾಚನೆ ಮಾಡಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಮಮತಾ ಮೋಹನ್​​ದಾಸ್, ಈ ವಿಷಯವನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.

ಮಮತಾ ಮೋಹನ್​​ದಾಸ್ ಒಂದು ಸಮಯದಲ್ಲಿ ಬಲು ಬೇಡಿಕೆ ಇದ್ದ ಜನಪ್ರಿಯ ನಟಿ. ಕನ್ನಡದಲ್ಲಿ ಸುದೀಪ್ ಜೊತೆಗೆ ‘ಗೂಳಿ’ ಸಿನಿಮಾನಲ್ಲಿ ಸಹ ನಟಿಸಿರುವ ಮಮತಾ, ತೆಲುಗು ಹಾಗೂ ತಮಿಳಿನ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಮತಾ ಅವರು ರಜನೀಕಾಂತ್ ನಟಿಸಿರುವ ‘ಕುಸೇಲನ್’ ಸಿನಿಮಾನಲ್ಲಿ ನಟಿಸಿದ್ದರು.

ಸಿನಿಮಾನಲ್ಲಿ ಅವರದ್ದು ಸಿನಿಮಾ ನಿರ್ದೇಶಕಿಯ ಪಾತ್ರ. ಸಿನಿಮಾನಲ್ಲಿ ಮಮತಾ ನಟಿಸಿದ್ದರಾದರೂ ಸಿನಿಮಾ ಬಿಡುಗಡೆ ಆದಮೇಲೆ ಅವರ ಒಂದೇ ಒಂದು ಶಾಟ್ ಸಹ ಸಿನಿಮಾನಲ್ಲಿ ಇರಲಿಲ್ಲ. ಕೇವಲ ಅವರ ಒಂದು ಬ್ಯಾಕ್ ಶಾಟ್ ಮಾತ್ರವನ್ನೇ ಉಳಿಸಿಕೊಳ್ಳಲಾಗಿತ್ತು. ಇದಕ್ಕೆ ಮುಖ್ಯ ಕಾರಣ ನಯನತಾರಾ. ನಟಿ ನಯನತಾರಾ ಆ ಸಿನಿಮಾದ ನಾಯಕಿ, ತಾನು ಬೇರೆ ನಾಯಕಿಯ ಜೊತೆ ನಟಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಕ್ಕೆ. ಮಮತಾ ಅವರು ಡ್ಯಾನ್ಸ್ ಮಾಡಬೇಕಿದ್ದ ಹಾಡನ್ನು ರದ್ದು ಮಾಡಿದ್ದಲ್ಲದೆ, ಅವರ ದೃಶ್ಯಗಳನ್ನು ಸಹ ಕತ್ತರಿಸಲಾಯ್ತು.

ಇದನ್ನೂ ಓದಿ:ಸಿಎಂ ಅನ್ನೇ ರಸ್ತೆಯಲ್ಲಿ ನಿಲ್ಲಿಸಿದ್ದ ರಜನೀಕಾಂತ್: ಯಾವ ಸಿನಿಮಾ ಸೀನ್​​ಗೂ ಕಮ್ಮಿ ಇಲ್ಲ

ಆದರೆ ಸಿನಿಮಾ ಬಿಡುಗಡೆ ಆಗಿ ಕೆಲ ದಿನಗಳ ಬಳಿಕ ಮಮತಾಗೆ ರಜನೀಕಾಂತ್ ಕಚೇರಿ ಇಂದ ಕರೆ ಬಂತಂತೆ. ಖುದ್ದು ರಜನೀಕಾಂತ್ ಅವರೇ ಮಾತನಾಡಿ, ನಾಲ್ಕು ದಿನಗಳ ಕಾಲ ನಿಮ್ಮ ಸಮಯ ವ್ಯರ್ಥ ಮಾಡಿದ್ದಕ್ಕೆ ಕ್ಷಮೆ ಇರಲಿ. ನನ್ನ ಕೈಯಲ್ಲಿ ಏನೂ ಇರಲಿಲ್ಲ. ನಾನು ಕ್ಷಮೆ ಕೇಳುವುದಷ್ಟೆ ನನ್ನ ನಿಯಂತ್ರಣದಲ್ಲಿ ಇರುವುದು ಎಂದರಂತೆ. ಈ ವಿಷಯವನ್ನು ನಟಿ ಮಮತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಕುಸೇಲನ್’ ಸಿನಿಮಾನಲ್ಲಿ ರಜನೀಕಾಂತ್ ಸೂಪರ್ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ನಯನತಾರಾ ಖುದ್ದು ನಾಯಕಿ ನಯನತಾರಾ ಪಾತ್ರದಲ್ಲಿ ನಟಿಸಿದ್ದಾರೆ. ಪಶುಪತಿ, ರಜನೀಕಾಂತ್ ಗೆಳೆಯನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಬಳಿಕ ತೆಲುಗಿನಲ್ಲೂ ರೀಮೇಕ್ ಆಯ್ತು. ಹಿಂದಿಯಲ್ಲಿ ಶಾರುಖ್ ಖಾನ್ ಮತ್ತು ಇರ್ಫಾನ್ ಖಾನ್ ಅವರು ಈ ಸಿನಿಮಾನಲ್ಲಿ ನಟಿಸಿದರು. ಅಲ್ಲಿ ‘ಬಿಲ್ಲು ಬಾರ್ಬರ್’ ಎಂದು ಸಿನಿಮಾದ ಹೆಸರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 pm, Sun, 7 June 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More