‘ಪುಳು’ ಸಿನಿಮಾ ಬ್ರಾಹ್ಮಣ ವಿರೋಧಿ ಎಂದು ಮಮ್ಮುಟ್ಟಿ ಮೇಲೆ ಬಲಪಂಥೀಯರು ಗರಂ

|

Updated on: May 15, 2024 | 5:19 PM

ಸ್ಟಾರ್ ನಟ ಮಮ್ಮುಟ್ಟಿ ಅವರು ‘ಟರ್ಬೋ’ ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅವರನ್ನು ಅನಗತ್ಯವಾಗಿ ವಿವಾದಕ್ಕೆ ಸಿಲುಕಿಸುವ ಪ್ರಯತ್ನ ನಡೆದಿದೆ. 2022ರಲ್ಲಿ ತೆರೆಕಂಡ ‘ಪುಳು’ ಸಿನಿಮಾವನ್ನು ನೆಪವಾಗಿ ಇಟ್ಟುಕೊಂಡು ಮಮ್ಮುಟ್ಟಿ ವಿರುದ್ಧ ಕೆಲವರು ಕಿಡಿಕಾರುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತದೆ.

‘ಪುಳು’ ಸಿನಿಮಾ ಬ್ರಾಹ್ಮಣ ವಿರೋಧಿ ಎಂದು ಮಮ್ಮುಟ್ಟಿ ಮೇಲೆ ಬಲಪಂಥೀಯರು ಗರಂ
ಮಮ್ಮುಟ್ಟಿ
Follow us on

ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ (Mammootty) ವಿರುದ್ಧ ಕೆಲವು ಬಲಪಂಥೀಯರು ಗರಂ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು 2 ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ‘ಪುಳು’ ಸಿನಿಮಾ! ಹೌದು, 2022ರಲ್ಲಿ ಬಿಡುಗಡೆ ಆಗಿದ್ದ ‘ಪುಳು’ ಸಿನಿಮಾ (Puzhu Movie) ಇಟ್ಟುಕೊಂಡು ಈಗ ವಿವಾದ ಎಬ್ಬಿಸಲಾಗಿದೆ. ಈ ಸಿನಿಮಾದಲ್ಲಿ ಬ್ರಾಹ್ಮಣ ವಿರೋಧಿ (Anti-Brahminical) ಅಂಶಗಳು ಇವೆ ಎಂಬ ಆರೋಪ ಹೊರಿಸಲಾಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಮಮ್ಮುಟ್ಟಿ ಅವರನ್ನು ಟಾರ್ಗೆಟ್​ ಮಾಡಲಾಗುತ್ತಿದೆ. ಆದರೆ ಕೇರಳದಲ್ಲಿ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಹಾಗೂ ರಾಜಕೀಯ ಗಣ್ಯರು ಮಮ್ಮುಟ್ಟಿ ಪರವಾಗಿ ನಿಂತಿದ್ದಾರೆ.

ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ 2022ರ ಮೇ 13ರಂದು ‘ಪುಳು’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದಲ್ಲಿ ಮಮ್ಮುಟ್ಟಿ, ಪಾರ್ವತಿ ತಿರುವತ್ತು ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಈ ಸಿನಿಮಾ ಕುರಿತಂತೆ ಈಗ ಸೋಶಿಯಲ್​ ಮೀಡಿಯಾದಲ್ಲಿ ತಕರಾರು ತೆಗೆಯಲಾಗಿದೆ. ಈ ಸಿನಿಮಾದಲ್ಲಿ ಬ್ರಾಹ್ಮಣ ವಿರೋಧಿ ಕಥೆ ಇದೆ ಹಾಗೂ ಅದರಲ್ಲಿ ನಟಿಸಿದ್ದು ಮಮ್ಮುಟ್ಟಿ ಅವರ ತಪ್ಪು ಎಂದು ಕೆಲವರು ವಿವಾದ ಶುರು ಮಾಡಿದ್ದಾರೆ.

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾತಿ-ಧರ್ಮದ ವಿಚಾರ ಇಟ್ಟುಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ನಡೆಯುತ್ತಿದೆ. ಸದ್ಯ ‘ಪುಳು’ ಸಿನಿಮಾದ ಕಾಂಟ್ರವರ್ಸಿ ಹಿಂದೆ ಕೂಡ ಇದೇ ಉದ್ದೇಶ ಇರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಬಲಪಂಥೀಯ ಟ್ರೋಲ್​​ಗಳಿಗೆ ಕೇರಳದ ಮಂದಿ ಸೊಪ್ಪು ಹಾಕಿಲ್ಲ.

ಇದನ್ನೂ ಓದಿ: ಮಲಯಾಳಂನಲ್ಲಿ ರಾಜ್ ಶೆಟ್ಟಿ ಪವರ್​ಫುಲ್ ಮ್ಯಾನ್; ಗಮನ ಸೆಳೆದ ಮಮ್ಮೂಟಿ ನಟನೆಯ ‘ಟರ್ಬೋ’ ಟ್ರೇಲರ್

ಸಚಿವರಾದ ವಿ. ಶಿವನ್​ ಕುಟ್ಟಿ, ಕೆ. ರಾಜನ್​, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಮುಂತಾದವರು ಮಮ್ಮುಟ್ಟಿ ಪರವಾಗಿ ಬ್ಯಾಟ್​ ಬೀಸಿದ್ದಾರೆ. ‘ಮಮ್ಮುಟ್ಟಿ ಅವರು ಮಲಯಾಳಿಗಳ ಹೆಮ್ಮೆ. ಅವರಿಗೆ ಆ ಗೌರವ ಇದ್ದೇ ಇರುತ್ತದೆ. ಮಮ್ಮುಟ್ಟಿ ಅವರನ್ನು ಮೊಹಮ್ಮದ್​ ಕುಟ್ಟಿ ಎನ್ನುವ, ಕಮಲ್​ ಅವರನ್ನು ಕಮಲುದ್ದೀನ್​ ಎನ್ನುವ, ವಿಜಯ್​ ಅವರನ್ನು ಜೋಸೆಫ್​ ವಿಜಯ್​ ಎನ್ನುವ ಸಂಘಿ ರಾಜಕೀಯ ಇಲ್ಲಿ ನಡೆಯುವುದಿಲ್ಲ. ಇದು ಕೇರಳ’ ಎಂದು ಕೆ. ರಾಜನ್​ ಪೋಸ್ಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.