ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತು ‘ಆದಿಪುರುಷ್’ ವೀಕ್ಷಣೆ; ನಡೆಯಿತು ಮಾರಣಾಂತಿಕ ಹಲ್ಲೆ

‘ಆದಿಪುರುಷ್​’ ಸಿನಿಮಾ ಪ್ರಸಾರ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಚಿತ್ರತಂಡದ್ದು. ಈ ಕಾರಣಕ್ಕೆ ಒಂದು ಸೀಟನ್ನು ಖಾಲಿ ಬಿಡಲಾಗಿದೆ. ಇದರ ಮೇಲೆ ಅಭಿಮಾನಿ ಕೂತಿದ್ದಾನೆ!

ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತು ‘ಆದಿಪುರುಷ್’ ವೀಕ್ಷಣೆ; ನಡೆಯಿತು ಮಾರಣಾಂತಿಕ ಹಲ್ಲೆ
ಹನುಮಂತ

Updated on: Jun 16, 2023 | 1:07 PM

ಪ್ರಭಾಸ್ (Prabhas) ನಟನೆಯ, ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ (Adipurush Movie) ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ರೀತಿಯಲ್ಲಿ ಜನರು ಚಿತ್ರವನ್ನು ವಿಮರ್ಶೆ ಮಾಡುತ್ತಿದ್ದಾರೆ. ಈ ಮಧ್ಯೆ ಹನುಮಂತನಿಗಾಗಿ ಸೀಟ್ ಕಾಯ್ದಿರಿಸಲು ಚಿತ್ರತಂಡ ನಿರ್ಧರಿಸಿತ್ತು. ಹೈದರಾಬಾದ್​ನ ಚಿತ್ರಮಂದಿರ ಒಂದರಲ್ಲಿ ಹನುಮಂತನ ಸೀಟ್​ಮೇಲೆ ಕುಳಿತು ಪ್ರೇಕ್ಷಕನೋರ್ವ ಸಿನಿಮಾ ನೋಡಿದ್ದಾನೆ! ಇದನ್ನು ಕಂಡ ಅಭಿಮಾನಿಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಹನುಮಂತನಿಗಾಗಿ ಸೀಟ್ ಒಂದನ್ನು ಮೀಸಲಿಡುವ ಬಗ್ಗೆ ತಂಡ ಘೋಷಣೆ ಮಾಡಿತು. ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಹನುಮಂತ ಬರುತ್ತಾನೆ ಎಂಬ ನಂಬಿಕೆ ಅನೇಕರದ್ದು. ‘ಆದಿಪುರುಷ್​’ ಚಿತ್ರದಲ್ಲೂ ಶ್ರೀರಾಮನ ಗುಣಗಾನ ಮಾಡಲಾಗಿದೆ. ರಾಮನ ಕುರಿತಾದ ಹಾಡುಗಳು ಇದರಲ್ಲಿ ಇವೆ. ಹಾಗಾಗಿ ‘ಆದಿಪುರುಷ್​’ ಸಿನಿಮಾ ಪ್ರಸಾರ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಚಿತ್ರತಂಡದ್ದು. ಈ ಕಾರಣಕ್ಕೆ ಒಂದು ಸೀಟನ್ನು ಖಾಲಿ ಬಿಡಲಾಗಿದೆ. ಇದರ ಮೇಲೆ ಅಭಿಮಾನಿ ಕೂತಿದ್ದಾನೆ!

ಹೈದರಾಬಾದ್​ನ ಬ್ರಮರಂಭ ಥಿಯೇಟರ್​ನಲ್ಲಿ ಈ ಘಟನೆ ನಡೆದಿದೆ. ಚಿತ್ರಮಂದಿರ ಹೌಸ್​ಫುಲ್ ಇದ್ದಿದ್ದರಿಂದ ವ್ಯಕ್ತಿಯೋರ್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿದ್ದಾನೆ. ಇದನ್ನು ಅಲ್ಲಿದ್ದವರು ಸಹಿಸಿಲ್ಲ. ಹೀಗಾಗಿ ಆತನಮೇಲೆ ದಾಳಿ ಮಾಡಲಾಗಿದೆ. ಕೆಲವರು ಈ ಹಲ್ಲೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ‘ಓಂ ರಾವತ್​ ದಯವಿಟ್ಟು ನಿಮ್ಮ ಅಡ್ರೆಸ್ ಕೊಡಿ’; ‘ಆದಿಪುರುಷ್’ ಸಿನಿಮಾ ನೋಡಿ ಸಿಟ್ಟಾದ ಫ್ಯಾನ್ಸ್

ಅನೇಕ ಕಡೆಗಳಲ್ಲಿ ಹನುಮಂತನಿಗೆ ಕಾಯ್ದಿರಿಸಿದ ಪೀಠಕ್ಕೆ ಅಲಂಕಾರ ಮಾಡಲಾಗಿದೆ. ಸೀಟ್ ಮೇಲೆ ಒಂದು ಪೀಠವನ್ನು ಇರಿಸಿ, ಅಲ್ಲಿ ಆಂಜನೇಯನ ಫೋಟೋ ಅಥವಾ ಮೂರ್ತಿಯನ್ನು ಇಟ್ಟಿದ್ದಾರೆ. ಸಿನಿಮಾ ಪ್ರದರ್ಶನಕ್ಕೂ ಮುನ್ನ ಪುಷ್ಪಾರ್ಚನೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ರಾಮ ಭಕ್ತರಿಗೆ ಹಾಗೂ ಆಂಜನೇಯನ ಭಕ್ತರಿಗೆ ಈ ಸಿನಿಮಾ ಬಹಳ ವಿಶೇಷ ಎನಿಸಿಕೊಳ್ಳುತ್ತಿದೆ. ಮೊದಲ ದಿನ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us