Adipurush Movie: ‘ಓಂ ರಾವತ್​ ದಯವಿಟ್ಟು ನಿಮ್ಮ ಅಡ್ರೆಸ್ ಕೊಡಿ’; ‘ಆದಿಪುರುಷ್’ ಸಿನಿಮಾ ನೋಡಿ ಸಿಟ್ಟಾದ ಫ್ಯಾನ್ಸ್

Adipurush Movie Twitter Review: ಈ ಸಿನಿಮಾ ನೋಡಿದ ಅನೇಕರು ಗ್ರಾಫಿಕ್ಸ್ ಬಗ್ಗೆ ಪುಕಾರು ತೆಗೆದಿದ್ದಾರೆ. ಸಾಕಷ್ಟು ಮಂದಿ ಈ ಚಿತ್ರದ ಕುರಿತು ಟೀಕೆ ಹೊರಹಾಕಿದ್ದಾರೆ.

Adipurush Movie: ‘ಓಂ ರಾವತ್​ ದಯವಿಟ್ಟು ನಿಮ್ಮ ಅಡ್ರೆಸ್ ಕೊಡಿ’; ‘ಆದಿಪುರುಷ್’ ಸಿನಿಮಾ ನೋಡಿ ಸಿಟ್ಟಾದ ಫ್ಯಾನ್ಸ್
ಪ್ರಭಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on:Jun 16, 2023 | 12:11 PM

ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಸಿನಿಮಾದ (Adipurush Movie) ಟೀಸರ್ ಹಾಗೂ ಟ್ರೇಲರ್ ಗಮನ ಸೆಳೆಯಲು ವಿಫಲವಾಗಿತ್ತು. ಆದರೂ, ಇದು 3ಡಿ ಸಿನಿಮಾ ಆಗಿದ್ದರಿಂದ ಅಭಿಮಾನಿಗಳಿಗೆ ಒಂದಷ್ಟು ನಿರೀಕ್ಷೆ ಇತ್ತು. ‘ಆದಿಪುರುಷ್’ ಸಿನಿಮಾ ನೋಡಿದ ಬಳಿಕ ಈ ನಿರೀಕ್ಷೆ ಹುಸಿಯಾಗಿದೆ. ‘ಆದಿಪುರುಷ್’ ಸಿನಿಮಾ ವೀಕ್ಷಿಸಿದ ಅನೇಕರು ಕಿಡಿಕಾರಿದ್ದಾರೆ. ಸಾಲುಸಾಲು ಸೋಲು ಕಂಡ ಪ್ರಭಾಸ್ (Prabhas)​​ ಈ ಚಿತ್ರದ ಮೂಲಕವೂ ಗೆಲ್ಲೋದು ಅನುಮಾನ ಎನ್ನುವ ಮಾತು ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕರು ಟ್ವಿಟರ್​ನಲ್ಲಿ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

‘ಆದಿಪುರುಷ್’ ಸಿನಿಮಾ ಇಂದು (ಜೂನ್ 16) ರಿಲೀಸ್ ಆಗಿದೆ. ಪ್ರಭಾಸ್ ರಾಮನಾಗಿ ಕಾಣಿಸಿಕೊಡರೆ, ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ನಟಿಸಿದ್ದಾರೆ. ‘ತಾನಾಜಿ’ ಮೂಲಕ ಗಮನ ಸೆಳೆದಿದ್ದ ಓಂ ರಾವತ್ ‘ಆದಿಪುರುಷ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ಗ್ರಾಫಿಕ್ಸ್ ಬಗ್ಗೆ ಪುಕಾರು ತೆಗೆದಿದ್ದಾರೆ. ಸಾಕಷ್ಟು ಮಂದಿ ಈ ಚಿತ್ರದ ಕುರಿತು ಟೀಕೆ ಹೊರಹಾಕಿದ್ದಾರೆ.

‘ಆದಿಪುರುಷ್’ ಟೀಸರ್ ರಿಲೀಸ್ ಆದ ಸಂದರ್ಭದಲ್ಲಿ ಸಾಕಷ್ಟು ಟ್ರೋಲ್​ಗಳು ಬಂದಿತ್ತು. ‘ಓಂ ಕಮ್​ ಟು ಮೈ ರೂಂ’ ಎಂದು ಪ್ರಭಾಸ್ ಸಿಟ್ಟಿನಿಂದ ಹೇಳಿದ ವಿಡಿಯೋ ವೈರಲ್ ಆಗಿತ್ತು. ಸಿನಿಮಾ ನೋಡಿದ ಅನೇಕರು ಇದೇ ಡೈಲಾಗ್ ಹೇಳುತ್ತಿದ್ದಾರೆ. ಕೆಲವರು ‘ಅಣ್ಣಾ ಓಂ ರಾವತ್ ದಯವಿಟ್ಟು ನಿಮ್ಮ ಅಡ್ರೆಸ್ ಕೊಡಿ’ ಎಂದು ವ್ಯಂಗ್ಯವಾಗಿ ಕಿಡಿಕಾರಿದ್ದಾರೆ. ಗ್ರಾಫಿಕ್ಸ್ ವಿಚಾರದಲ್ಲಿ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Adipurush Review: ಗ್ರಾಫಿಕ್ಸ್​ ನಂಬಿಕೊಂಡು ಯುದ್ಧ ಮಾಡಿದ ರಾಮ-ರಾವಣ; ಇದು ಓಂ ರಾವತ್​ ರಾಮಾಯಣ

ರಾಮಾಯಣದ ಕಥೆ ಕುರಿತು ಸಾಕಷ್ಟು ಸಿನಿಮಾ ಹಾಗೂ ಸೀರಿಸ್​​ಗಳು ಬಂದಿವೆ. ಹೀಗಿರುವಾಗ ಮತ್ತದೇ ಕಥೆ ಹೇಳಬೇಕು ಎಂದರೆ ಅದು ದೊಡ್ಡ ಚಾಲೆಂಜ್. ಇದನ್ನು ಓಂ ರಾವತ್ ಸರಿಯಾಗಿ ನಿಭಾಯಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಾಕಷ್ಟು ಮಂದಿ ಸಿನಿಮಾದ ಗ್ರಾಫಿಕ್ಸ್​ ಬಗ್ಗೆ ಕಿಡಿಕಾರಿದ್ದಾರೆ. ‘ನೂರಾರು ಕೋಟಿ ಸುರಿದು ಇಷ್ಟು ಕಳಪೆ ಗ್ರಾಫಿಕ್ಸ್​ನ ನಿರೀಕ್ಷಿಸಿರಲಿಲ್ಲ’ ಎಂಬ ಮಾತನ್ನು ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:10 pm, Fri, 16 June 23

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು