AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ತಂದೆ ದೇವರು’ ಮೋಹನ್ ಬಾಬು ಪರವಾಗಿ ಕ್ಷಮೆ ಕೇಳಿ ಕಣ್ಣೀರು ಹಾಕಿದ ಮಂಚು ಮನೋಜ್

Manchu Family: ತೆಲುಗು ಚಿತ್ರರಂಗದ ತಾರಾ ಕುಟುಂಬವಾದ ಮಂಚು ಕುಟುಂಬದ ಆಸ್ತಿ ವಿವಾದ ಹಾದಿ-ಬೀದಿ ಜಗಳವಾಗಿ ಮಾರ್ಪಟ್ಟಿದೆ. ಹಿರಿಯ ನಟ ಮೋಹನ್ ಬಾಬು ನಿನ್ನೆ ವರದಿಗಾರರ ಮೇಲೆ ಹಲ್ಲೆ ಮಾಡಿದ್ದಾರೆ. ಇದೀಗ ಮಂಚು ಮನೋಜ್ ತಂದೆಯ ಪರವಾಗಿ ಕ್ಷಮೆ ಕೇಳಿದ್ದು, ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.

‘ನನ್ನ ತಂದೆ ದೇವರು’ ಮೋಹನ್ ಬಾಬು ಪರವಾಗಿ ಕ್ಷಮೆ ಕೇಳಿ ಕಣ್ಣೀರು ಹಾಕಿದ ಮಂಚು ಮನೋಜ್
ಮಂಚು ಮನೋಜ್-ಮೋಹನ್ ಬಾಬು
ಮಂಜುನಾಥ ಸಿ.
|

Updated on: Dec 11, 2024 | 12:36 PM

Share

ತೆಲುಗು ಚಿತ್ರರಂಗದ ತಾರಾ ಕುಟುಂಬಗಳಲ್ಲಿ ಒಂದಾದ ಮೋಹನ್ ಬಾಬು ಕುಟುಂಬದ ಜಗಳ ಬೀದಿಗೆ ಬಂದಿದೆ. ಮೋಹನ್ ಬಾಬು ಕಿರಿಯ ಪುತ್ರ ಮಂಚು ಮನೋಜ್ ಅನ್ನು ಮನೆಯಿಂದ ಹೊರಗೆ ಹಾಕಲಾಗಿದ್ದು, ನಿನ್ನೆ ರಾತ್ರಿ ಮೋಹನ್ ಬಾಬು ಮನೆಗೆ ಮಂಚು ಮನೋಜ್ ಹೋಗಲು ಯತ್ನಿಸಿದಾಗ ಮೋಹನ್ ಬಾಬು, ಮಗನನ್ನು ತಡೆದಿದ್ದಲ್ಲದೆ ಆ ವೇಳೆ ಹಾಜರಿದ್ದ ಟಿವಿ9 ವರದಿಗಾರನ ಮೇಲೆ ಹಲ್ಲೆ ಸಹ ಮಾಡಿದ್ದರು.

ವರದಿಗಾರನ ಮೇಲೆ ಮೋಹನ್ ಬಾಬು ಹಲ್ಲೆ ಖಂಡಿಸಿ ಮೋಹನ್ ಬಾಬು ಮನೆಯ ಎದುರು ಇಂದು ತೆಲುಗು ಮಾಧ್ಯಮ ವರದಿಗಾರರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳ ಬಳಿ ಮಾತನಾಡಿದ ಮಂಚು ಮನೋಜ್, ‘ನನ್ನ ತಂದೆ ನನಗೆ ದೇವರಿದ್ದಂತೆ, ಅವರು ಮಾಧ್ಯಮಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಕಣ್ಣೀರು ಹಾಕಿದ್ದಾರೆ.

‘ನಾನು ಕುಟುಂಬದಿಂದ ಯಾವುದೇ ಹಣ ಅಥವಾ ಆಸ್ತಿ ಕೇಳಿಲ್ಲ. ನಾನು ನನ್ನ ಆತ್ಮಗೌರವಕ್ಕಾಗಿ ಈ ಹೋರಾಟ ಮಾಡುತ್ತಿದ್ದೇನೆ. ನಾನು ಹಾಗೂ ನನ್ನ ಪತ್ನಿ ಕುಟುಂಬದಿಂದ ದೂರವೇ ಇದ್ದೆವು. ನನ್ನ ಸಹೋದರ ಮಂಚು ವಿಷ್ಣು ದುಬೈಗೆ ಶಿಫ್ಟ್ ಆದ. ಆಗ ನಮ್ಮ ಕುಟುಂಬದ ಆಪ್ತರು ಕೆಲವರು ಒತ್ತಾಯ ಮಾಡಿದ ಕಾರಣ ಕುಟುಂಬಕ್ಕೆ ಬೆಂಬಲವಾಗಿರಲೆಂದು ನಾನು ಮನೆಗೆ ಮರಳಿದೆ. ಆದರೆ ಈಗ ನನ್ನನ್ನು ಹೊರಗೆ ಹಾಕುವ ಪ್ರಯತ್ನ ನಡೆದಿದೆ. ವಿಜಯ್ ಎಂಬಾತ ಹಾಗೂ ಮಂಚು ವಿಷ್ಣು ಅವರ ಮಾತು ಕೇಳಿ ನನ್ನ ತಂದೆಯೇ ನನ್ನನ್ನು ದೂರ ಮಾಡುತ್ತಿದ್ದಾರೆ’ ಎಂದಿದ್ದಾರೆ ಮಂಚು ಮನೋಜ್.

ಇದನ್ನೂ ಓದಿ:ಅಪ್ಪನ ಮೇಲೆ ದೂರು ನೀಡಿದ ನಟ, ಈಗ ಅಣ್ಣನ ಮೇಲೂ ಆರೋಪ

‘ನನ್ನ ಮನೆಯಲ್ಲಿಯೇ ನನ್ನ ಮೇಲೆ ವಿನಯ್ ಹಾಗೂ ಕಿರಣ್ ಎಂಬುವರು ಹಲ್ಲೆ ಮಾಡಿದರು. ಶೂಟಿಂಗ್ ವೇಳೆ ನನ್ನ ಕಾಲಿಗೆ ಗಾಯ ಆಗಿತ್ತು. ಆ ಗಾಯ ಈಗ ಇನ್ನಷ್ಟು ಹೆಚ್ಚಾಗಿದೆ. ನನ್ನ ಪತ್ನಿ ಹಾಗೂ ಏಳು ತಿಂಗಳ ಮಗುವನ್ನು ಸಹ ಅವರು ನಿಂದಿಸಿದ್ದಾರೆ. ಈಗ ನಾನು ಈ ಹೋರಾಟವನ್ನು ನನ್ನ ಆತ್ಮಗೌರವಕ್ಕಾಗಿ ಮಾಡುತ್ತಿದ್ದೇನೆ’ ಎಂದಿದ್ದಾರೆ ಮಂಚು ಮನೋಜ್.

ಮೋಹನ್ ಬಾಬು, ಪುತ್ರ ಮಂಚು ಮನೋಜ್ ಪತ್ನಿಯ ಮಾತು ಕೇಳಿ ಗಲಾಟೆ ಆರಂಭಿಸಿದ್ದಾನೆ. ನನ್ನ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ನಿನ್ನೆ ರಾತ್ರಿ ನಡೆದ ಗಲಾಟೆಯ ಬಳಿಕ ಮೋಹನ್ ಬಾಬು ಆಸ್ಪತ್ರೆಗೆ ದಾಖಲಾಗಿದ್ದು, ಅವರ ತಲೆಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್