‘ಕಣ್ಣಪ್ಪ’ ಪೌರಾಣಿಕ ಸಿನಿಮಾದ ಚಿತ್ರೀಕರಣ ನ್ಯೂಜಿಲ್ಯಾಂಡ್‍ನಲ್ಲಿ: ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ವಿಷ್ಣು ಕಿಡಿ

Manchu Vishnu: ಮಂಚು ವಿಷ್ಣು ಬೇಡರ ಕಣ್ಣಪ್ಪನ ಕುರಿತಾದ 'ಕಣ್ಣಪ್ಪ' ಎಂಬ ಪೌರಾಣಿಕ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ನ್ಯೂಜಿಲೆಂಡ್​ನಲ್ಲಿ ಆರಂಭವಾಗಿದೆ.

ಕಣ್ಣಪ್ಪ ಪೌರಾಣಿಕ ಸಿನಿಮಾದ ಚಿತ್ರೀಕರಣ ನ್ಯೂಜಿಲ್ಯಾಂಡ್‍ನಲ್ಲಿ: ಸುಳ್ಳು ಸುದ್ದಿ ಹರಡುತ್ತಿರುವವರ ಬಗ್ಗೆ ವಿಷ್ಣು ಕಿಡಿ
ಮಂಚು ವಿಷ್ಣು

Updated on: Sep 27, 2023 | 10:44 PM

ಮಹಾ ಶಿವ ಭಕ್ತ ಬೇಡರ ಕಣ್ಣಪ್ಪ ಕುರಿತ ಹಲವು ಸಿನಿಮಾಗಳು ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಮೂಡಿ ಬಂದಿವೆ. ಕನ್ನಡದಲ್ಲಂತೂ ‘ಬೇಡರ ಕಣ್ಣಪ್ಪ’ ಎವರ್​ಗ್ರೀನ್ ಸಿನಿಮಾ. ಇದೀಗ ಮತ್ತೊಮ್ಮೆ ಬೇಡರ ಕಣ್ಣಪ್ಪನ ಚರಿತೆ ಸಿನಿಮಾ ಆಗಿ ಮೂಡಿಬರುತ್ತಿದೆ. ಈ ಬಾರಿ ತೆಲುಗಿನಲ್ಲಿ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ವಿಶೇಷವೆಂದರೆ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವುದು ದೂರದ ನ್ಯೂಜಿಲೆಂಡ್​ನಲ್ಲಿ!

‘ಕಣ್ಣಪ್ಪ’ ಸಿನಿಮಾದಲ್ಲಿ ಮೋಹಬ್​ಬಾಬು ಪುತ್ರ ಮಂಚು ವಿಷ್ಣು ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ನ್ಯೂಜಿಲ್ಯಾಂಡ್‍ನಲ್ಲಿ ಪ್ರಾರಂಭವಾಗಿದೆ. ಮಂಚು ವಿಷ್ಣು ಅವರ ಪಾಲಿಗೆ ಇದು ಮಹತ್ವಾಕಾಂಕ್ಷೆಯ ಸಿನಿಮಾ ಆಗಿದೆ. ಏಳು ವರ್ಷಗಳಿಂದಲೂ ಇಂಥಹಾ ಸಿನಿಮಾದ ಭಾಗವಾಗಬೇಕೆಂದು ಅವರು ಕನಸು ಕಂಡಿದ್ದರಂತೆ. ಶಿವ-ಪಾರ್ವತಿಯರ ಆಶೀರ್ವಾದದಿಂದ ಕೊನೆಗೂ ನನಸಾಗಿದೆ ಎಂದು ಮಂಚು ವಿಷ್ಣು ಹೇಳಿಕೊಂಡಿದ್ದಾರೆ.

ಪೌರಾಣಿಕ ಸಿನಿಮಾದಲ್ಲಿ ಅದರಲ್ಲಿಯೂ ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸುವಂತೆ ವಿಷ್ಣುಗೆ ಸ್ಪೂರ್ತಿ ತುಂಬಿದ್ದು ನಟ, ನಿರ್ದೇಶಕ ತನಿಕೇಲ ಭರಣಿ ಅಂತೆ. ಏಳು ವರ್ಷಗಳ ಹಿಂದೆ, ತನಿಕೇಲ ಭರಣಿ, ವಿಷ್ಣುಗೆ ‘ಕಣ್ಣಪ್ಪ’ ಸಿನಿಮಾದ ಕಥೆ ಹೇಳಿದ್ದರಂತೆ. ಏಳು ವರ್ಷಗಳಿಂದಲೂ ಹಲವು ಕಾರಣಗಳಿಗೆ ಮುಂದಕ್ಕೆ ಹೋಗುತ್ತಲೇ ಇದ್ದ ಸಿನಿಮಾ ಈಗ ಚಿತ್ರೀಕರಣ ಶುರುವಾಗುವ ಹಂತಕ್ಕೆ ಬಂದಿದೆ.

ಇದನ್ನೂ ಓದಿ:ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳಿಂದ ವಿವೇಕ್ ಅಗ್ನಿಹೋತ್ರಿಗೆ ನಿಂದನೆ; ಬೇಸರ ಹೊರಹಾಕಿದ ನಿರ್ದೇಶಕ

ಪರಚೂರಿ ಗೋಪಾಲಕೃಷ್ಣ, ವಿಜಯೇಂದ್ರ ಪ್ರಸಾದ್‍, ತೋಟಪಲ್ಲಿ ಸಾಯಿನಾಥ್‍, ತೋಟ ಪ್ರಸಾದ್‍ ಮತ್ತು ನಿರ್ದೇಶಕರಾದ ನಾಗೇಶ್ವರ ರೆಡ್ಡಿ ಹಾಗೂ ಈಶ್ವರ ರೆಡ್ಡಿ ಮುಂತಾದವರು ‘ಕಣ್ಣಪ್ಪ’ ಸಿನಿಮಾದ ಕತೆಯನ್ನು ಓದಿ, ಪರಿಶೀಲಿಸಿ ಅಗತ್ಯ ಸಲಹೆಗಳನ್ನು ಸಹ ನೀಡಿದ್ದಾರೆ.

ಸಿನಿಮಾಕ್ಕೆ ಸಹಾಯ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ ಹೇಳಿರುವ ನಟ ಮಂಚು ವಿಷ್ಣು, ಕಳೆದ ಎಂಟು ತಿಂಗಳುಗಳು ಮೆರೆಯಲಾರದ ಅನುಭವ ಎಂದಿದ್ದಾರೆ. ‘ನಮ್ಮ ತಂಡದವರು ರಜೆ ಇಲ್ಲದೆ ಕೆಲಸ ಮಾಡಿದ್ದಾರೆ. ಹಬ್ಬಗಳನ್ನು ಮರೆತು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ದಿನಕ್ಕೆ ಐದು ಗಂಟೆಯಷ್ಟೇ ನಿದ್ದೇ ಮಾಡಿದ್ದಾರೆ. ಎಷ್ಟೇ ಒತ್ತಡಗಳಿದ್ದರೂ, ನಮ್ಮ ನಿರ್ಧಾರ ಮತ್ತು ನಂಬಿಕೆ ಅಚಲವಾಗಿತ್ತು. ಎಲ್ಲರ ಶ್ರಮದಿಂದಾಗಿ ‘ಕಣ್ಣಪ್ಪ’ ಚಿತ್ರವು ಚಿತ್ರೀಕರಣ ಹಂತದವರೆಗೂ ಬಂದಿದೆ. 600ಕ್ಕೂ ಹೆಚ್ಚು ಜನರ ತಂಡ ನ್ಯೂಜಿಲ್ಯಾಂಡ್‍ನಲ್ಲಿ ಬೀಡುಬಿಟ್ಟು, ನಮ್ಮ ಕನಸನ್ನು ನನಸಾಗಿಸುವುದಕ್ಕೆ ದುಡಿಯುತ್ತಿದೆ” ಎಂದಿದ್ದಾರೆ.

‘ಕಣ್ಣಪ್ಪ’ ತ್ರದಲ್ಲಿ ಈ ದೇಶದ ಪ್ರತಿಭಾವಂತ ನಟರ ದಂಡೇ ಇದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಯಾರು ಯಾರು ನಟಿಸುತ್ತಿದ್ದಾರೆ ಎಂಬ ವಿಷಯವನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ತಿಳಿಸಲಾಗುತ್ತದಂತೆ. ಸಿನಿಮಾದಲ್ಲಿ ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸಲಿದ್ದಾರೆ, ನಯನತಾರಾ ಪಾರ್ವತಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸಿನಿಮಾದ ಬಗ್ಗೆ ಕೆಲವರು ಸುಳ್ಳು ಮಾಹಿತಿಗಳನ್ನು ಸೋಷಿಯಲ್‍ ಮೀಡಿಯಾದಲ್ಲಿ ಹರಡುತ್ತಿರುವುದರಿಂದ, ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಟ್ವಿಟ್ಟರ್​ನ ತಮ್ಮ ಚಿತ್ರದ ಅಧಿಕೃತ ಖಾತೆಯನ್ನು ಮಾತ್ರ ನಂಬಬೇಕೆಂದು ನಟ ವಿಷ್ಣು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ