AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Panju Pavagada: ನೀನು ಮೊದಲು ನೆಟ್ಟಗೆ ಇರು; ಪ್ರಶಾಂತ್​ ಸಂಬರಗಿಗೆ ಮಂಜು ಆವಾಜ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಪದೇಪದೇ ಮಂಜು ಅವರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಜನರನ್ನು​ ಮಂಜು ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ.

Panju Pavagada: ನೀನು ಮೊದಲು ನೆಟ್ಟಗೆ ಇರು; ಪ್ರಶಾಂತ್​ ಸಂಬರಗಿಗೆ ಮಂಜು ಆವಾಜ್​
ಪ್ರಶಾಂತ್​ ಸಂಬರಗಿ- ಮಂಜು ಪಾವಗಡ
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:May 03, 2021 | 9:47 AM

Share

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಹೇಳುತ್ತಿರುವ ಸುಳ್ಳುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ಕ್ಷಣ ಒಂದು ರೀತಿ ಇದ್ದರೆ ಮರು ಕ್ಷಣವೇ ಅವರು ಬದಲಾಗುತ್ತಾರೆ. ಅದು ಈಗ ಮನೆಯಲ್ಲಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಮಂಜು ಹಾಗೂ ಪ್ರಶಾಂತ್​ ನಡುವೆ ಘನಘೋರ ಜಗಳವೇ ನಡೆದು ಹೋಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಪದೇಪದೇ ಮಂಜು ಅವರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಜನರನ್ನು​ ಮಂಜು ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೆಲವೊಮ್ಮೆ ಇದು ಯಶಸ್ವಿ ಆದರೆ, ಇನ್ನೂ ಕೆಲವೊಮ್ಮೆ ಇದು ಸಾಧ್ಯವಾಗಿಲ್ಲ. ದಿವ್ಯಾ ಸುರೇಶ್​ ವಿಚಾರಕ್ಕಂತೂ ಸಾಕಷ್ಟು ಬಾರಿ ಮಂಜು ಹಾಗೂ ಪ್ರಶಾಂತ್ ನಡುವೆ ಜಗಳವಾಗಿದೆ.

ಮಂಜು ಅವರು ದಿವ್ಯಾ ಸುರೇಶ್​ ಬಾಡಿಗಾರ್ಡ್​ ಎಂದು ಹೇಳಿದರು. ನೀವು ಒಬ್ಬರಿಗೆ ಹೇಳುವಾಗ ಬೇರೆಯವರ ಹೆಸರು ತೆಗೆದುಕೊಳ್ಳುವುದು ಇಷ್ಟವಾಗುವುದಿಲ್ಲ ಎಂದರು. ಮಂಜು ದಿವ್ಯಾ ಬಾಡಿಗಾರ್ಡ್​ ಎಂಬುದನ್ನು ನಾನು ಎಲ್ಲಿ ನಿಂತು ಬೇಕಾದರೂ ಹೇಳುತ್ತೇನೆ ಎಂದರು.

ಈ ವೇಳೆ ಮಂಜು ಬಂದು ನನ್ನ ಹೆಸರನ್ನು ಏಕೆ ತೆಗೆದುಕೊಳ್ಳುತ್ತೀಯಾ? ಎನ್ನುತ್ತಿದ್ದಂತೆ ಪ್ರಶಾಂತ್ ಪ್ಲೇಟ್​ ತಿರುಗಿಸಿ ಬಿಟ್ಟರು. ನಾನು ನಿನ್ನ ಹೆಸರೇ ತೆಗೆದುಕೊಂಡಿಲ್ಲ ಎಂದು ನಿರಂತರವಾಗಿ ವಾದ ಮಾಡುತ್ತಲೇ ಬಂದರು. ಮಂಜುಗೆ ಕೋಪ ನೆತ್ತಿಗೇರಿತ್ತು. ನೀನು ಮೊದಲು ನೆಟ್ಟಗೆ ಇರು. ಆಮೇಲೆ ಬೇರೆಯವರಿಗೆ ಹೇಳೋಕೆ ಬಾ ಎಂದರು. ಕೊನೆಗೂ ಮನೆಯವರ ಸಮ್ಮುಖದಲ್ಲಿ ಈ ಜಗಳ ತಣ್ಣಗಾಯಿತು.

9ನೇ ವಾರ ಯಾವುದೇ ಎಲಿಮಿನೇಷನ್​ ಇರಲಿಲ್ಲ. ಹೀಗಾಗಿ ಎಲ್ಲಾ ಸ್ಪರ್ಧಿಗಳು ಸೇಫ್​ ಆದರು. ಮುಂದಿನ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ.,  ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇವರಲ್ಲಿ ಒಬ್ಬರು ಮುಂದಿನ ವಾರ ಮನೆಯಿಂದ ಹೊರ ಹೋಗುತ್ತಾರೆ.

ಇದನ್ನೂ ಓದಿ: ಆಪ್ತ ಚಂದ್ರಚೂಡ್​ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್​ ಸಂಬರಗಿ; ಬಿಗ್​ ಬಾಸ್​ ಮನೆಯಲ್ಲಿ 36 ಗಂಟೆಗಳ ಉಪವಾಸ

ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

(Manju Pavagada and Prashanth Sambargi conflict became worse in Bigg Boss Kannada)

Published On - 8:37 am, Mon, 3 May 21

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ