ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮನೆಯಲ್ಲಿ ಸದಾ ಒಟ್ಟಾಗಿರುತ್ತಾರೆ. ಬಿಗ್ ಬಾಸ್ ಮನೆಯ ವಿಚಾರಗಳನ್ನು ಮಾತ್ರವಲ್ಲ ಮನೆಯ ಹೊರಗಿನ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಬಹುತೇಕ ಸಮಯದಲ್ಲಿ ಇಬ್ಬರೂ ಜೋಕ್ ಮಾಡುತ್ತಾ ಇರುತ್ತಾರೆ. ಆದರೆ, ಕೆಲವೊಮ್ಮೆ ಇಬ್ಬರೂ ಗಂಭೀರ ವಿಚಾರಗಳನ್ನು ಚರ್ಚೆ ಮಾಡಿದ್ದಿದೆ. ಈಗ ದಿವ್ಯಾ ಎದುರು ಮಂಜು ಪಾವಗಡ ಭವಿಷ್ಯದ ಕನಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮಂಜು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಬಿಗ್ ಬಾಸ್ ಕಾರ್ಯಕ್ರಮದಿಂದ ಅವರ ಕೆರಿಯರ್ಗೆ ಸಾಕಷ್ಟು ಮೈಲೇಜ್ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಅವರಿಗೆ ಸಿನಿಮಾದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಇದೆ. ಮಂಜು ಕನಸು ಕೂಡ ಅದೇ.
ಎಪ್ರಿಲ್ 29ರ ಎಪಿಸೋಡ್ನಲ್ಲಿ ಮಂಜು ಹಾಗೂ ದಿವ್ಯಾ ಸುರೇಶ್ ಕೂತು ಮಾತನಾಡುತ್ತಿದ್ದರು. ಆಗ ಮಂಜು ಎದುರು ದಿವ್ಯಾ ಪ್ರಶ್ನೆ ಒಂದನ್ನು ಇಟ್ಟರು. 2 ವರ್ಷಗಳ ನಂತರ ನಿನ್ನನ್ನು ನೀನು ಎಲ್ಲಿ ನೋಡಿಕೊಳ್ಳೋಕೆ ಬಯಸುತ್ತೀಯಾ ಎಂದು ಕೇಳಿದರು. ಆಗ ಮಂಜು ಇದಕ್ಕೆ ಸವಿಸ್ತಾರವಾಗಿ ಉತ್ತರಿಸಿದ್ದಾರೆ.
ನಾನು ಒಳ್ಳೆಯ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು. ಕ್ಯಾರೆಕ್ಟರ್ ಆರ್ಟಿಸ್ಟ್ ಎಂದರೆ ತಪ್ಪಾಗಬಹುದು. ಹೀಗಾಗಿ, ನಾನೋರ್ವ ಒಳ್ಳೆ ನಟ ಆಗಬೇಕು. ಯಾವ ಪಾತ್ರ ಕೊಟ್ಟರೂ ಜೀವಿಸಬೇಕು ಎಂದು ಕನಸನ್ನು ಬಿಚ್ಚಿಟ್ಟರು ಮಂಜು.
ಅನಂತ್ನಾಗ್, ಪ್ರಕಾಶ್ ರೈ, ಸುದೀಪ್ ಅವರಿಗೆ ಯಾವ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಅವರ ತರ ಆಗಬೇಕು. ಕಥೆ ಬರೆಯುವವನು ಪಾತ್ರ ಸೃಷ್ಟಿ ಮಾಡುವಾಗ 20 ಪರ್ಸಂಟ್ ಮಾತ್ರ ಕಲ್ಪನೆ ಮಾಡಿಕೊಂಡಿರುತ್ತಾನೆ. ಆ ಪಾತ್ರಕ್ಕೆ ಜೀವ ತುಂಬೋದು ನಟನ ಕೆಲಸ. ಮಂಜುಗೆ ಪಾತ್ರ ಕೊಟ್ಟರೆ ಸಾಕು ಅದನ್ನು ಸರಿಯಾಗಿ ನಿರ್ವಹಿಸುತ್ತಾನೆ ಎನ್ನುವ ಭರವಸೆ ನಿರ್ದೇಶಕರಿಗೆ ಬರಬೇಕು ಎಂದರು ಮಂಜು.
ಇದನ್ನೂ ಓದಿ: ನಿಂಗೆ ಮರ್ಯಾದೆ ಇಲ್ವಾ, ನನ್ ಹಿಂದೆ ಬರಬೇಡ; ಬಿಗ್ ಬಾಸ್ ಚೆಲುವೆಗೆ ಮಂಜು ಹೀಗೆ ಹೇಳಿದ್ದೇಕೆ?