ಫಿಯಾನ್ಸೆ ಸುಮಂತ್​ ಸಂಪರ್ಕಿಸೋಕೆ ಶುಭಾಗೆ ಐಡಿಯಾ ಕೊಟ್ಟ ಮಂಜು ಪಾವಗಡ

Bigg Boss Kannada: ಮಂಜು ಜೊತೆ ಮಾತನಾಡುವಾಗ, ಮುಂದಿನ ವಾರ ಫ್ಯಾಮಿಲಿ ವೀಕ್​ ಇದೆ. ಚಿನ್ನಿ ಬಾಂಬ್​ ಬರಬಹುದು ಎನ್ನುವ ಆಸೆಯನ್ನು ಶುಭಾ ವ್ಯಕ್ತಪಡಿಸಿದರು.

ಫಿಯಾನ್ಸೆ ಸುಮಂತ್​ ಸಂಪರ್ಕಿಸೋಕೆ ಶುಭಾಗೆ ಐಡಿಯಾ ಕೊಟ್ಟ ಮಂಜು ಪಾವಗಡ
ಮಂಜು ಪಾವಗಡ- ಶುಭಾ ಪೂಂಜಾ - ಸುಮಂತ್​
Follow us
ರಾಜೇಶ್ ದುಗ್ಗುಮನೆ
|

Updated on:May 08, 2021 | 3:44 PM

ಬಿಗ್​ ಬಾಸ್​ ಮನೆ ಒಳಗೆ ಹೋದರೆ ಎಲಿಮಿನೇಟ್​ ಆದ ನಂತರವೇ ಹೊರ ಜಗತ್ತಿನ ಸಂಪರ್ಕಕ್ಕೆ ಬರೋದು. ಕ್ಯಾಪ್ಟನ್​ ಆದಾಗ ಮಾತ್ರ ಸ್ಪರ್ಧಿಗಳಿಗೆ ಕುಟುಂಬದವರ ವಾಯ್ಸ್​ ನೋಟ್​ ಕೇಳಿಸುತ್ತದೆ. ಅಲ್ಲಿಯವರೆಗೆ ಸ್ಪರ್ಧಿಗಳು ಯಾವುದೇ ರೀತಿಯಲ್ಲೂ ಹೊರ ಜಗತ್ತಿನೊಂದಿಗೆ ಸಂಪರ್ಕ ಮಾಡೋಕೆ ಸಾಧ್ಯವಿಲ್ಲ. ಈಗ ಶುಭಾ ಪೂಂಜಾಗೆ ಫಿಯಾನ್ಸೆ ಸುಮಂತ್ ಅವರನ್ನು ಸಂಪರ್ಕಿಸೋದು ಹೇಗೆ ಎನ್ನುವ ಬಗ್ಗೆ ಮಂಜು ಐಡಿಯಾ ಒಂದನ್ನು ಕೊಟ್ಟಿದ್ದಾರೆ.

ಸುಮಂತ್​ ಅವರನ್ನು ಶುಭಾ ಪ್ರೀತಿಯಿಂದ ಚಿನ್ನಿ ಬಾಂಬ್​ ಎಂದು ಕರೆಯುತ್ತಾರೆ. ಬೇಸರವಾದಾಗೆಲ್ಲ ಕ್ಯಾಮೆರಾ ಎದುರು ಬರುವ ಶುಭಾ, ಚಿನ್ನಿ ಬಾಂಬ್​ ವಾಯ್ಸ್​ ಕೇಳಿಸಿ. ನನಗೆ ಆತನ ಧ್ವನಿ ಕೇಳಬೇಕು. ನಾನು ಅವನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದೀನಿ ಎಂದು ಬಿಗ್​ ಬಾಸ್​ ಎದುರು ಬೇಡಿಕೆ ಇಡುತ್ತಿರುತ್ತಾರೆ. ಮೇ 7ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಕ್ಯಾಮೆರಾ ಬಳಿ ಬಂದ ಶುಭಾ ಅದೇ ಕ್ಯಾಸೆಟ್​ಅನ್ನು ಮತ್ತೆ ರಿಪೀಟ್​ ಮಾಡಿದ್ದಾರೆ. ಇದು ಮಂಜು ಪಾವಗಡ ಗಮನಕ್ಕೆ ಬಂದಿದೆ.

ಮಂಜು ಜೊತೆ ಮಾತನಾಡುವಾಗ, ಮುಂದಿನ ವಾರ ಫ್ಯಾಮಿಲಿ ವೀಕ್​ ಇದೆ. ಚಿನ್ನಿ ಬಾಂಬ್​ ಬರಬಹುದು ಎನ್ನುವ ಆಸೆಯನ್ನು ಶುಭಾ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮಂಜು, ಅಲ್ಲಿ ನಿನಗೆ ಸಿಗೋದು ಕೇವಲ ಐದು ನಿಮಿಷ ಮಾತ್ರ ಎಂದರು.

ನಂತರ ಮಾತು ಮುಂದುವರಿಸಿದ ಮಂಜು, ಈಗಲೂ ಕಾಲಾವಕಾಶ ಇದೆ. ಇನ್ನು ಎರಡೇ ದಿನದಲ್ಲಿ ನಿನ್ನ ಚಿನ್ನಿ ಬಾಂಬ್​ ಹತ್ತಿರ ಹೋಗಬಹುದು ಎಂದರು. ಶುಭಾಗೆ ಇದು ಅಚ್ಚರಿ ಮೂಡಿಸಿತ್ತು. ಅದು ಹೇಗೆ ಎಂದು ಪ್ರಶ್ನೆ ಇತ್ತರು. ಆಗ ಮಂಜು ‘ಸ್ವಯಂ ನಿರ್ಗಮನ’ ಎನ್ನುವ ಉತ್ತರ ಕೊಟ್ಟರು.

‘ಎಲ್ಲಾ ಕ್ಯಾಮೆರಾಗಳು ದಿನದ 24 ಗಂಟೆ ಆನ್​ ಆಗಿಯೇ ಇರುತ್ತವೆ. ರಾತ್ರಿ 5 ನಿಮಿಷ ಒಂದೊಂದು ಕ್ಯಾಮೆರಾ ಹತ್ತಿರ ಹೋಗು. ನಾನು ಮನೆಗೆ ಹೋಗುತ್ತೇನೆ ಎಂದು ಹೇಳು. ಈ ವಾರ ನೀನೇ ಮನೆಯಿಂದ ಹೋಗುತ್ತೀಯಾ. ಇದೊಂದು ಒಳ್ಳೆಯ ಅವಕಾಶ. ಅದನ್ನು ಬಳಸಿಕೋ ಎಂದರು. ನಿನಗೆ ಕೌನ್ಸಲಿಂಗ್​ ಅಗತ್ಯವಿದೆ ಎಂದು ಶುಭಾ ನಕ್ಕರು.

ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ವಯಂ ನಿರ್ಗಮನವಾಗಿದೆ. ನಟಿ ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆ ಸೇರಿದ ಕೆಲವೇ ದಿನಗಳಲ್ಲಿ ಸ್ವ ಇಚ್ಛೆಯಿಂದ ಮನೆಯಿಂದ ಹೊರ ಬಂದಿದ್ದರು. ಇದಾದ ನಂತರ ಮನೆಯಲ್ಲಿ ಅನೇಕ ಬಾರಿ ಸ್ವಯಂ ನಿರ್ಗಮದ ಚರ್ಚೆ ಹಾಸ್ಯ ರೂಪದಲ್ಲಿ ಬರುತ್ತಲೇ ಇದೆ.

ಇದನ್ನೂ ಓದಿ: Bigg Boss 8: ಬಿಗ್​ ಬಾಸ್​​​ನಿಂದ ಅರ್ಧಕ್ಕೆ ಹೊರಹೋದ ದಿವ್ಯಾ ಉರುಡುಗ ಹಿಂದಿರುಗಿ ಬರಲ್ಲ?

ರಿಯಾಲಿಟಿ ಶೋ, ಸೀರಿಯಲ್​ ಶೂಟಿಂಗ್​ ಸ್ಥಗಿತ; ನಿಯಮ ಮೀರಿದ್ರೆ ಕ್ರಮ: ಟಿವಿ​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ವಿ. ಶಿವಕುಮಾರ್

Published On - 3:41 pm, Sat, 8 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್