Manoranjan Ravichandran: ರವಿಚಂದ್ರನ್ ಕುಟುಂಬದಲ್ಲಿ 3 ದಿನಗಳ ಕಾಲ ಮದುವೆ ಸಂಭ್ರಮ
34 ವರ್ಷದ ಮನೋರಂಜನ್ ತಮ್ಮದೇ ಕುಟುಂಬದ ಸಂಗೀತಾ ಅವರೊಂದಿಗೆ ವಿವಾಹವಾಗುತ್ತಿರುವುದು ವಿಶೇಷ. ಇನ್ನೂ ಈ ಮದುವೆ ಸಮಾರಂಭವು ಸರಳವಾಗಿರಲಿದ್ದು, ಕುಟುಂಬಸ್ಥರಿಗೆ ಆಪ್ತರಾದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸ್ಯಾಂಡಲ್ವುಡ್ನ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ಮನೆಯಲ್ಲೀಗ ಮದುವೆ ಸಂಭ್ರಮ. ರವಿಮಾಮನ ಹಿರಿಯ ಪುತ್ರ, ಯುವ ನಟ ಮನೋರಂಜನ್ (Manoranjan Ravichandran) ಅವರ ಮದುವೆ ಕಾರ್ಯಕ್ರಮ ನಡೆಯುತ್ತಿದ್ದು, ಶುಕ್ರವಾರ ಮೆಹಂದಿ ಹಾಗು ಅರಿಶಿನ ಶಾಸ್ತ್ರಗಳು ಮುಗಿದಿವೆ. ಅದರಂತೆ ಇಂದು ಮನೋರಂಜನ್ ಅವರ ಆರಕ್ಷತೆ ಕಾರ್ಯಕ್ರಮ ನಡೆಯಲಿದೆ. ವಿಶೇಷ ಎಂದರೆ ಈ ಕಾರ್ಯಕ್ರಮವನ್ನು ವಧುವಿನ ಕಡೆಯವರು ಆಯೋಜಿಸುತ್ತಿದ್ದಾರೆ. ಅಂದರೆ ಆಗಸ್ಟ್ 20 ಕ್ಕೆ ವಧುವಿನ ಕುಟುಂಬದ ಕಡೆಯಿಂದ ಆರಕ್ಷತೆ ಕಾರ್ಯಕ್ರಮ ಜರುಗಲಿದ್ದು, ಆಗಸ್ಟ್ 21 ರಂದು ಮದುವೆ ಶಾಸ್ತ್ರಗಳು ನಡೆಯಲಿದೆ.
ಇನ್ನು ಆಗಸ್ಟ್ 22ಕ್ಕೆ ಚಿತ್ರರಂಗದ ಸ್ನೇಹಿತರಿಗೆ ಮನೋರಂಜನ್ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಮುಂದಿನ ಮೂರು ದಿನಗಳ ಕಾಲ ರವಿಚಂದ್ರನ್ ಕುಟುಂಬದಲ್ಲಿ ಮದುವೆ ಸಂಭ್ರಮ ಇರಲಿದೆ. ಅದರಂತೆ ಇಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ಸಂಜೇ 7ಕ್ಕೆ ವಧುವಿನ ಕಡೆಯವರಿಂದ ಆರಕ್ಷತೆ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ಗಣ್ಯರು ಸೇರಿದಂತೆ ಕುಟುಂಬದ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪ್ಯಾಲೇಸ್ ಗ್ರೌಂಡ್ಗೆ ತೆರಳಿರುವ ರವಿಚಂದ್ರನ್ ಕುಟುಂಬ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ.
34 ವರ್ಷದ ಮನೋರಂಜನ್ ತಮ್ಮದೇ ಕುಟುಂಬದ ಸಂಗೀತಾ ಅವರೊಂದಿಗೆ ವಿವಾಹವಾಗುತ್ತಿರುವುದು ವಿಶೇಷ. ಇನ್ನೂ ಈ ಮದುವೆ ಸಮಾರಂಭವು ಸರಳವಾಗಿರಲಿದ್ದು, ಕುಟುಂಬಸ್ಥರಿಗೆ ಆಪ್ತರಾದವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
2017 ರಲ್ಲಿ ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮನೋರಂಜನ್ ಆ ಬಳಿಕ ಬೃಹಸ್ಪತಿ, ಮುಗಿಲ್ಪೇಟೆ, ಪ್ರಾರಂಭ ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮನೋರಂಜನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.
Published On - 11:06 am, Sat, 20 August 22