ತ್ರಿಷಾ (Trisha) ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ನಟ ಮನ್ಸೂರ್ ಅಲಿ ಖಾನ್ ಅವರು ಸುದ್ದಿಯಲ್ಲಿದ್ದರು. ಆ ಬಳಿಕ ಅವರು ‘ತ್ರಿಷಾ ಅವರೇ ನನ್ನನ್ನು ಕ್ಷಮಿಸಿ’ ಎಂದು ಕೋರಿದ್ದರು. ಈ ಮೂಲಕ ಈ ವಿವಾದ ಕೊನೆ ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಘಟನೆಗೆ ಈಗ ಟ್ವಿಸ್ಟ್ ಸಿಕ್ಕಿದೆ. ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮನ್ಸೂರ್ ಅಲಿ ಖಾನ್ ಮುಂದಾಗಿದ್ದಾರೆ. ಇದರಿಂದ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ.
‘ಲಿಯೋ’ ಸಿನಿಮಾದಲ್ಲಿ ಮನ್ಸೂರ್ ಅಲಿ ಖಾನ್ ವಿಲನ್ ಪಾತ್ರ ಮಾಡಿದ್ದಾರೆ. ತೆರೆಮೇಲೆ ಅವರು ತ್ರಿಷಾ ಜೊತೆ ಕಾಣಿಸುವುದಿಲ್ಲ. ಈ ವಿಚಾರದ ಬಗ್ಗೆ ಹೇಳುವಾಗ ಮನ್ಸೂರ್ ಬಾಯಿಗೆ ಬಂದಂತೆ ಮಾತನಾಡಿದ್ದರು. ‘ತ್ರಿಷಾ ಜೊತೆ ನನಗೆ ಬೆಡ್ರೂಂ ದೃಶ್ಯ ಸಿಗುತ್ತದೆ ಎಂದುಕೊಂಡಿದ್ದೆ. ಸಿನಿಮಾಗಳಲ್ಲಿ ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅವರನ್ನು ನೋಡಲು ನನಗೆ ಅವಕಾಶ ನೀಡಲಿಲ್ಲ’ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದರು.
ಮನ್ಸೂರ್ ಅವರ ಹೇಳಿಕೆ ವಿರುದ್ಧ ತ್ರಿಷಾ ಅಸಮಾಧಾನ ಹೊರಹಾಕಿದ್ದರು. ನಾನು ಎಂದಿಗೂ ಇಂಥವರ ಜೊತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದರು. ಈ ವಿಚಾರದಲ್ಲಿ ತ್ರಿಷಾ ಮೇಲೆ ಕೇಸ್ ಹಾಕಲು ಮನ್ಸೂರ್ ಅಲಿ ಖಾನ್ ರೆಡಿ ಆಗಿದ್ದಾರೆ. ಇಷ್ಟೇ ಅಲ್ಲ, ಅವರನ್ನು ಬೆಂಬಲಿಸಿದ ಚಿರಂಜೀವಿ, ಖುಷ್ಬೂ ವಿರುದ್ಧವೂ ಕೇಸ್ ಹಾಕಲು ಮನ್ಸೂರ್ ಅಲಿ ಖಾನ್ ಆಲೋಚಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಪ್ರಕರಣ ಬೇರೆಯದೇ ತಿರುವು ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: ರೇಪ್ ಕಮೆಂಟ್: ಕೊನೆಗೂ ನಟಿ ತ್ರಿಷಾ ಬಳಿ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್
ಹಾಗಾದರೆ, ಕ್ಷಮೆ ಕೇಳಿದ್ದು ಏಕೆ ಎಂಬ ಪ್ರಶ್ನೆಗೆ ಮನ್ಸೂರ್ ಉತ್ತರಿಸಿದ್ದು, ‘ಅದೊಂದು ದೊಡ್ಡ ಜೋಕ್’ ಎಂದಿದ್ದಾರೆ. ಈ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ಈಗ ಅವರು ಪ್ಲೇಟ್ ಬದಲಾಯಿಸಿದ್ದು, ಇದೆಲ್ಲ ಪ್ರಚಾರದ ಗಿಮಿಕ್ ಎಂದು ಅನೇಕರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Fri, 1 December 23