ರೇಪ್ ಕಮೆಂಟ್: ಕೊನೆಗೂ ನಟಿ ತ್ರಿಷಾ ಬಳಿ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್

ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ತ್ರಿಷಾ ಅವರು ವಿಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮನ್ಸೂರ್​ ಅಲಿ ಖಾನ್​ ವಿಲನ್ ಪಾತ್ರದಲ್ಲಿ ನಟಿಸಿದ್ದರು.

ರೇಪ್ ಕಮೆಂಟ್: ಕೊನೆಗೂ ನಟಿ ತ್ರಿಷಾ ಬಳಿ ಕ್ಷಮೆ ಕೇಳಿದ ಮನ್ಸೂರ್ ಅಲಿ ಖಾನ್
ತ್ರಿಷಾ-ಮನ್ಸೂರ್
Follow us
ರಾಜೇಶ್ ದುಗ್ಗುಮನೆ
|

Updated on:Nov 24, 2023 | 2:00 PM

‘ತ್ರಿಷಾ (Trisha Krishnan) ಅವರನ್ನು ರೇಪ್ ಮಾಡುವ ದೃಶ್ಯ ಸಿಗಲಿಲ್ಲ’ ಎಂಬರ್ಥದಲ್ಲಿ ಮಾತನಾಡುವ ಮೂಲಕ ವಿವಾದ ಸೃಷ್ಟಿ ಮಾಡಿದ್ದ ನಟ ಮನ್ಸೂರ್ ಅಲಿ ಖಾನ್ ಅವರು ಕೊನೆಗೂ ಕ್ಷಮೆ ಕೇಳಿದ್ದಾರೆ. ನಟಿ ತ್ರಿಷಾ ಬಗ್ಗೆ ನೀಡಿದ್ದ ಈ ಹೇಳಿಕೆಗೆ ಸಂಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ಮನ್ಸೂರ್ ಅವರನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದರು. ಈ ಬೆನ್ನಲ್ಲೇ ಮನ್ಸೂರ್ ಅಲಿ ಖಾನ್ ಅವರು ಕ್ಷಮೆ ಕೇಳಿದ್ದಾರೆ.

ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ತ್ರಿಷಾ ಅವರು ವಿಜಯ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಮನ್ಸೂರ್​ ಅಲಿ ಖಾನ್​ ವಿಲನ್ ಪಾತ್ರದಲ್ಲಿ ನಟಿಸಿದ್ದರು. ‘ತ್ರಿಷಾ ಜೊತೆ ನಟಿಸುತ್ತೇನೆ ಎಂದಾಗ ಬೆಡ್​ರೂಂ ದೃಶ್ಯ ಇರಬಹುದು ಎಂದು ನಾನು ಭಾವಿಸಿದೆ. ಈ ಮೊದಲ ಸಿನಿಮಾಗಳಲ್ಲಿ ನಟಿಯರನ್ನು ಬೆಡ್​ರೂಂಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು. ಈ ಸಿನಿಮಾದಲ್ಲೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ. ನಾನು ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅದು ನನಗೆ ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರನ್ನು ನೋಡಲೂ ಅವಕಾಶ ಕೊಡಲಿಲ್ಲ’ ಎಂದಿದ್ದರು ಮನ್ಸೂರ್ ಅಲಿ ಖಾನ್.

ಇದನ್ನೂ ಓದಿ: ತ್ರಿಷಾ ಬಗ್ಗೆ ಕೀಳು ಹೇಳಿಕೆ ನೀಡಿದ ನಟ ಮನ್ಸೂರ್​ ಅಲಿ ಖಾನ್​ ವಿರುದ್ಧ ಲೈಂಗಿಕ ಕಿರುಕುಳದ ಕೇಸ್​ ದಾಖಲು

ಈಗ ವಿಚಾರಣೆ ಬಳಿಕ ಮನ್ಸೂರ್ ಅವರು ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ.  ‘ಸಹನಟಿ ತ್ರಿಷಾ ಅವರೇ ನನ್ನನ್ನು ಕ್ಷಮಿಸಿ’ ಎಂದು ಮನ್ಸೂರ್ ಹೇಳಿರುವುದಾಗಿ ಟ್ರೇಡ್ ಅನಲಿಸ್ಟ್​ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯೆ ನೀಡಿದ್ದ ತ್ರಿಷಾ

ಮನ್ಸೂರ್​ ಅಲಿ ಖಾನ್ ಹೇಳಿಕೆ ಬಗ್ಗೆ ತ್ರಿಷಾ ಪ್ರತಿಕ್ರಿಯೆ ನೀಡಿದ್ದರು. ಅವರ ಮಾತು ತ್ರಿಷಾ ಗಮನಕ್ಕೆ ಬಂದಿದೆ. ಈ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ. ಜೊತೆಗೆ ಮುಂದೆಂದೂ ಅವರ ಜೊತೆ ನಟಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ ತ್ರಿಷಾ. ಇಂಥ ಜನರು ಇಡೀ ಮನುಷ್ಯಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ತ್ರಿಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:21 pm, Fri, 24 November 23